‘ಉದ್ಯಾನ ನಗರಿ’ಯಾಗಿದ್ದ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’: ಎಚ್.ಡಿ ಕುಮಾರಸ್ವಾಮಿ

'ಉದ್ಯಾನ ನಗರಿ’ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’ ಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ.
ದುಬೈ ಕಾರ್ಯಕ್ರಮದಲ್ಲಿ  ಎಚ್.ಡಿ ಕುಮಾರಸ್ವಾಮಿ
ದುಬೈ ಕಾರ್ಯಕ್ರಮದಲ್ಲಿ ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: 'ಉದ್ಯಾನ ನಗರಿ’ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’ ಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ.

ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಉತ್ಸವ ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, ಇಂದು ನಾವು ಕೆಂಪೇಗೌಡರನ್ನು ಸ್ಮರಿಸುತ್ತಿದ್ದೇವೆ. ಆದರೆ ಬೆಂಗಳೂರಿನಲ್ಲಿ ಅವರು ನಿರ್ಮಿಸಿದ ಕೆರೆಗಳು ಏನಾಯಿತು? (ನಾಯಕರ) ಸ್ವಾರ್ಥ, ಸಂಕುಚಿತ ಮನೋಭಾವದಿಂದಾಗಿ ನಗರದ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಕೆರೆಗಳು ನಾಶವಾಗಿವೆ. ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಹೆಮ್ಮೆಯಿಂದ ಕರೆಯುತ್ತಿದ್ದ ನಾವೆಲ್ಲರೂ ಈಗ ಗಾರ್ಬೇಜ್ ಸಿಟಿ ಎಂದು ಕರೆಯುತ್ತೇವೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಚಂದ್ರಯಾನ-3 ಮಿಷನ್‌ನ ಯಶಸ್ಸು ಸೇರಿದಂತೆ ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ, ಬೆಂಗಳೂರಿನಂತಹ ಐತಿಹಾಸಿಕ ನಗರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಾವೆಲ್ಲರೂ ರಾಜಕಾರಣಿಗಳಾಗಿ ನಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾಗಿದ್ದೇವೆ ಎಂದು ಅವರು ಹೇಳಿದರು.

ಆದರೆ ಕೆಂಪೇಗೌಡರ ಕೊಡುಗೆಗಳು, ಅವರ ಆದರ್ಶ ಆಡಳಿತಕ್ಕಾಗಿ ಅವರನ್ನು ಸ್ಮರಿಸಿದ ಸಂಘಟಕರನ್ನು ಶ್ಲಾಘಿಸಿದ ಕುಮಾರಸ್ವಾಮಿ, ಅವರು ನಿರ್ಮಿಸಿದ ಬೆಂಗಳೂರು ನಗರವು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದರು.

ಎಲ್ಲಿ ದೂರದೃಷ್ಟಿ ಇದೆಯೋ ಅಲ್ಲಿ ಗಡಿ ಇರುವುದಿಲ್ಲ. ಅವರ ಆದರ್ಶ ಆಡಳಿತವನ್ನು ಎಲ್ಲರೂ ಅನುಕರಿಸಬೇಕು. ಎಲ್ಲರನ್ನೂ ಸಮಾನವಾಗಿ ಅವರು ಕಾಣುತ್ತಿದ್ದರು ಎಂದು ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com