ಬೆಂಗಳೂರು: ಸ್ಟಾರ್ಟಪ್ ಸಂಸ್ಥಾಪಕನಿಂದ ಮಹಿಳಾ ಉದ್ಯಮಿಗೆ 1.2 ಕೋಟಿ ರೂ. ವಂಚನೆ

ಮೇಕ್ ಇನ್ ಇಂಡಿಯಾ ಯೋಜನೆಯಡಿ ವ್ಯಕ್ತಿಯೊಬ್ಬ ತನಗೆ ಸುಮಾರು 1.2 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು 47 ವರ್ಷದ ಮಹಿಳಾ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇಕ್ ಇನ್ ಇಂಡಿಯಾ ಯೋಜನೆಯಡಿ ವ್ಯಕ್ತಿಯೊಬ್ಬ ತನಗೆ ಸುಮಾರು 1.2 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು 47 ವರ್ಷದ ಮಹಿಳಾ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಉದ್ಯಮಿ ನೀಲಿಮಾ ಅವರು ತಮ್ಮ ದೂರಿನಲ್ಲಿ ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳ ತಯಾರಿಕಾ ಉದ್ಯಮದ ಸಂಸ್ಥಾಪಕ ಅಶ್ವಥ್ ಹೆಗ್ಡೆ ಅವರು ತಮ್ಮ ಕಂಪನಿಯ ಫ್ರಾಂಚೈಸಿಗಾಗಿ 74.25 ಲಕ್ಷ ರೂಪಾಯಿ ಪಡೆದು, ನಂತರ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಯೋಜನೆಯಡಿಯಲ್ಲಿ ಶೇ. 30 ರಷ್ಟು ಸಬ್ಸಿಡಿಯೊಂದಿಗೆ ಶೇ. 47 ರಷ್ಟು ವಾರ್ಷಿಕ ಆದಾಯ ನೀಡುವ ಭರವಸೆ ನೀಡಿ ಹೆಗ್ಡೆ ತಮ್ಮಿಂದ ಹಣ ಪಡೆದಿದ್ದರು ಎಂದು ನೀಲಿಮಾ ಆರೋಪಿಸಿದ್ದಾರೆ.

2018 ರಲ್ಲಿ ಅವರು ಕಾಮನ್ ಫ್ರೆಂಡ್ ಡಾ. ಸುಜಿತ್ ಅವರು ಹೆಗ್ಡೆಯವರನ್ನು ಪರಿಚಯಿಸಿದರು. ನಾನು ಮತ್ತು ನನ್ನ ಪತಿ ಬಾಲಾಜಿ ಅವರು ಎಂಜಿ ರಸ್ತೆಯಲ್ಲಿರುವ ಹೆಗ್ಡೆಯವರ ಕಚೇರಿಗೆ ಭೇಟಿ ನೀಡಿದೇವು ಮತ್ತು ಹೂಡಿಕೆಯ ಕುರಿತು ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ನೀಲಿಮಾ ತಿಳಿಸಿದ್ದಾರೆ.

ಫ್ರಾಂಚೈಸ್ ಒಪ್ಪಂದದ ಪ್ರಕಾರ ಎರಡು ವರ್ಷಗಳವರೆಗೆ ತನ್ನ ಹೂಡಿಕೆಯ ಮೇಲೆ ಶೇ. 47 ರಷ್ಟು ವಾರ್ಷಿಕ ಆದಾಯ ಮತ್ತು ಪ್ರತಿ ತಿಂಗಳು 50,000 ರೂಪಾಯಿ ನೀಡುವುದಾಗಿ ಹೆಗ್ಡೆ ಭರವಸೆ ನೀಡಿದ್ದರು. ಎರಡು ವರ್ಷಗಳ ಕಾಲ ಪ್ರತಿ ತಿಂಗಳು ಹಣ ನೀಡುವುದಾಗಿಯೂ ಭರವಸೆ ನೀಡಿದರು.

ಆರಂಭದಲ್ಲಿ 50 ಲಕ್ಷ ರೂ. ಮಾತ್ರ ಹೂಡಿಕೆ ಮಾಡಿದ್ದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆ ವಿಳಂಬವಾಗಿದೆ ಎಂದರು. ನಂತರ ಮೇ 2020 ರಲ್ಲಿ ಅದು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ನಂತರ ಹೆಗ್ಡೆ ಅವರು ಹೊಸೂರಿನಲ್ಲಿ ಮತ್ತೊಂದು ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸುವ ಬಗ್ಗೆ ತಿಳಿಸಿದರು ಮತ್ತು ಅದರಲ್ಲಿ ಅವರ ಸಹೋದರಿಯೊಂದಿಗೆ ಪಾಲುದಾರಿಕೆ ನೀಡಿದರು. ಅದರಂತೆ ಹೊಸ ಉದ್ಯಮದಲ್ಲಿ 24.25 ಲಕ್ಷ ರೂ. ಹೂಡಿಕೆ ಮಾಡಿದೆ ಎಂದು ನೀಲಿಮಾ ಅವರು ತಿಳಿಸಿದ್ದಾರೆ.

ಹೆಗ್ಡೆ ಅವರು ಭರವಸೆ ನೀಡಿದ 1.2 ಕೋಟಿ ರೂ.ಗಳಲ್ಲಿ ಕೇವಲ 20 ಲಕ್ಷ ರೂ.ಗಳನ್ನು ಮಾತ್ರ ಹಿಂದಿರುಗಿಸಿದ್ದಾರೆ ಎಂದು ಮಹಿಳಾ ಉದ್ಯಮಿ ಆರೋಪಿಸಿದ್ದಾರೆ.

ನೀಲಿಮಾ ಅವರ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದು, ಹೂಡಿಕೆಗೆ ಸಂಬಂಧಿಸಿದ ಫ್ರಾಂಚೈಸ್ ಒಪ್ಪಂದ ಮತ್ತು ಇತರ ದಾಖಲೆಗಳೊಂದಿಗೆ ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹೆಗ್ಡೆಗೆ ಅವರಿಗೆ ಸೂಚಿಸಿದ್ದೇವೆ ಎಂದು ಅಶೋಕ್ ನಗರ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com