5,000 ಕಿ.ಮೀ ಸೈಕಲ್‌ ಸವಾರಿ: ಹುಬ್ಬಳ್ಳಿ ವ್ಯಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಗರಿ

ತಮ್ಮ 60ನೇ ವಯಸ್ಸಿನಲ್ಲಿ 5,000 ಕಿ.ಮೀ ಸೈಕಲ್‌ ಸವಾರಿ ಮಾಡಿ ಅಪರೂಪದ ಸಾಧನೆ ಮಾಡಿದ ಹುಬ್ಭಳ್ಳಿ ಮೂಲಕ ಚಾರ್ಟೆಡ್ ಅಕೌಂಟೆಂಟ್ ಗುರುಮೂರ್ತಿ ಮಾತರಂಗಿಮಠ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ ಸಿಕ್ಕಿದೆ.
ಗುರುಮೂರ್ತಿ ಮಾತರಂಗಿಮಠ
ಗುರುಮೂರ್ತಿ ಮಾತರಂಗಿಮಠ

ಹುಬ್ಬಳ್ಳಿ: ತಮ್ಮ 60ನೇ ವಯಸ್ಸಿನಲ್ಲಿ 5,000 ಕಿ.ಮೀ ಸೈಕಲ್‌ ಸವಾರಿ ಮಾಡಿ ಅಪರೂಪದ ಸಾಧನೆ ಮಾಡಿದ ಹುಬ್ಭಳ್ಳಿ ಮೂಲಕ ಚಾರ್ಟೆಡ್ ಅಕೌಂಟೆಂಟ್ ಗುರುಮೂರ್ತಿ ಮಾತರಂಗಿಮಠ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ ಸಿಕ್ಕಿದೆ.

ಗುರುಮೂರ್ತಿ ಅವರು ಮೇ 11 ರಿಂದ ಆಗಸ್ಟ್ 18 ರ ವರೆಗೆ ಒಟ್ಟು 5,000 ಕಿಮೀ ದೂರವನ್ನು 100 ದಿನಗಳ ರಾವ ಪ್ರತಿದಿನ 50 ಕಿಮೀ ಸೈಕಲ್ ಸವಾರಿ ಮಾಡಿದರು.

ಇದಕ್ಕೂ ಮೊದಲು ಅವರು ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನಿಂದ 2020–21 ಹಾಗೂ 2021–22 ಸಾಲಿನಲ್ಲಿ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.  ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಒದಗಿಸುವ ಉದ್ದೇಶ ಇದಾಗಿದೆ. ಇಂದು ಇಡೀ ವಿಶ್ವ ಜಾಗತಿಕ ತಾಪಮಾನದಿಂದ ಬಳಲುತ್ತಿದೆ. ಹಸಿರು ರಕ್ಷಣೆ ಮುಖ್ಯವಾಗಿದ್ದು, ಇದಕ್ಕೆ ಸೈಕ್ಲಿಂಗ್ ಕೊನೆಯ ಆಯ್ಕೆಯಾಗಿದೆ ಎಂದು ಗುರುಮೂರ್ತಿಯವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com