ರಾಯಚೂರು: ಮೊಬೈಲಿಗೆ ಬಂದ ಲಿಂಕ್ ಕ್ಲಿಕ್ ಮಾಡಿ ಸಂಕಷ್ಟ; ತಿರುಚಿದ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್, ದೂರು ದಾಖಲು

ಹಟ್ಟಿ ಚಿನ್ನದ ಗಣಿಯಲ್ಲಿ ಗೇಜ್ ಆಪರೇಟರ್‌ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಂಚಕರು ಕಳೆದ ಒಂದು ವರ್ಷದಿಂದ ತಿರುಚಿದ ವಿಡಿಯೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿರುವ ಸಂಬಂಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಗೇಜ್ ಆಪರೇಟರ್‌ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಂಚಕರು ಕಳೆದ ಒಂದು ವರ್ಷದಿಂದ ತಿರುಚಿದ ವಿಡಿಯೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿರುವ ಸಂಬಂಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ.

ಒಂದು ದಿನ ಗಣಿಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಮಹೇಂದ್ರ ಕುರ್ಡಿ ಅವರ ಮೊಬೈಲ್​ಗೆ ಅಪರಿಚಿತ ಮೊಬೈಲ್ ನಂಬರ್‌ನಿಂದ ಒಂದು ಲಿಂಕ್​ ಬಂದಿದೆ. ಆ ಲಿಂಕ್​ ಅನ್ನು ಮಹೇಂದ್ರ ಕ್ಲಿಕ್​ ಮಾಡಿದಾಗ, ಮಹೇಂದ್ರ ಅವರು ವಿಡಿಯೋ ಕಾಲ್​ನಲ್ಲಿ ನಗ್ನವಾಗಿರುವ ಯುವತಿ ಜೊತೆ ಮಾತನಾಡುತ್ತಿರುವಂತೆ ಕಾಣುವ ವಿಡಿಯೋ ಕಾಣಿಸಿಕೊಂಡಿದೆ. ಇದನ್ನು ನೋಡಿ ಮಹೇಂದ್ರ ಅವರು ಆಘಾತಕ್ಕೊಳಗಾಗಿದ್ದಾರೆ.

ವಿಡಿಯೋದಲ್ಲಿದ್ದ ಯುವತಿಯ ಅಶ್ಲೀಲ ವರ್ತನೆಗೆ ಪ್ರತಿಯಾಗಿ ಮಹೇಂದ್ರ ಅವರು ಪ್ರತಿಕ್ರಿಯೆ ನೀಡಿರುವ ರೀತಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಬಳಿಕ ಅಪರಿಚಿತ ದುಷ್ಕರ್ಮಿಗಳು ಹಣ ನೀಡದಿದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಮಹೇಂದ್ರ ಅವರಿಗೆ ಬೆದರಿಕೆ ಹಾಕಿದ್ದಾರೆ.

ಮಹೇಂದ್ರ ಅವರು ಪೊಲೀಸರನ್ನು ಸಂಪರ್ಕಿಸದಿದ್ದರೂ, ವಿಡಿಯೋ ವೈರಲ್ ಆಗಿದ್ದು, ಮಹೇಂದ್ರ ಅವರ ಕುಟುಂಬ ಸದಸ್ಯರಿಗೂ ಕಳುಹಿಸಲಾಗಿದೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರರು ಈ ಹಿಂದೆ ಖಾಸಗಿ ಶಾಲೆಯೊಂದರ ಖಜಾಂಚಿಯಾಗಿ ಕೆಲಸ ಮಾಡಿದ್ದರು. ವಿಡಿಯೋದಲ್ಲಿ ಮಹೇಂದ್ರ ಶಾಲೆಯ ಸಿಬ್ಬಂದಿ ಎಂದು ಬಿಂಬಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com