ಅಂದು ನೈರುತ್ಯ ಮುಂಗಾರು ಅನಾವೃಷ್ಟಿ, ಇಂದು ಈಶಾನ್ಯ ಮುಂಗಾರು ಅತಿವೃಷ್ಟಿ: ಕೈಗೆ ಸಿಗದ ಬೆಳೆ, ರೈತ ಕಂಗಾಲು!

ಪ್ರಸಕ್ತ ವರ್ಷ ನೈರುತ್ಯ ಮುಂಗಾರು ಮಳೆಯ ಕೊರತೆಯಿಂದ ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರು, ಈಗ ದೀಪಾವಳಿ ಹಬ್ಬಕ್ಕೆ ಮುನ್ನ ಅತಿವೃಷ್ಟಿಯಿಂದಾಗಿ, ವಿಶೇಷವಾಗಿ ದಕ್ಷಿಣ ಒಳ ಕರ್ನಾಟಕದಲ್ಲಿ ಮತ್ತೊಂದು ಹೊಡೆತವನ್ನು ಎದುರಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಸಕ್ತ ವರ್ಷ ನೈರುತ್ಯ ಮುಂಗಾರು ಮಳೆಯ ಕೊರತೆಯಿಂದ ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರು, ಈಗ ದೀಪಾವಳಿ ಹಬ್ಬಕ್ಕೆ ಮುನ್ನ ಅತಿವೃಷ್ಟಿಯಿಂದಾಗಿ, ವಿಶೇಷವಾಗಿ ದಕ್ಷಿಣ ಒಳ ಕರ್ನಾಟಕದಲ್ಲಿ ಮತ್ತೊಂದು ಹೊಡೆತವನ್ನು ಎದುರಿಸುತ್ತಿದ್ದಾರೆ. ಮಳೆ ಕೊರತೆಯಿಂದ ಈ ವರ್ಷ ಯಥೇಚ್ಛವಾಗಿ ಬೆಳೆ ಇಳುವರಿ ಕೈಗೆ ಸಿಗದಿದ್ದ ರೈತರು ಈಗ ಇದ್ದ ಸ್ವಲ್ಪ ಬೆಳೆಯ ಕಟಾವಿಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಅತಿವೃಷ್ಟಿಯಿಂದ ಇಳುವರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನೈರುತ್ಯ ಮಾನ್ಸೂನ್ (ಜೂನ್ ನಿಂದ ಸೆಪ್ಟೆಂಬರ್) ಅವಧಿಯಲ್ಲಿ ಕರ್ನಾಟಕ ರಾಜ್ಯವು ಈ ವರ್ಷ 642 ಮಿಮೀ ಮಳೆಯನ್ನು ಪಡೆದಿದೆ, ಸರಾಸರಿ ರಾಜ್ಯದಲ್ಲಿ 852 ಮಿಮೀ ವಾಸ್ತವಿಕ ಮಳೆಯಾಗುತ್ತದೆ. ಭಾರತೀಯ ಹವಾಮಾನ ಇಲಾಖೆ ಸಾಮಾನ್ಯ ಈಶಾನ್ಯ ಮುಂಗಾರು ಮುನ್ಸೂಚನೆ ನೀಡಿದ್ದರೂ, ಅಕ್ಟೋಬರ್‌ನಲ್ಲಿ ರಾಜ್ಯವು ಶೇಕಡಾ 65ರಷ್ಟು ಕೊರತೆಯನ್ನು ಕಂಡಿದೆ. ಆದರೆ, ಕಳೆದ ವಾರದಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಕೊರತೆ ಶೇ 47ಕ್ಕೆ ಇಳಿದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ, ಈ ವರ್ಷ ನವೆಂಬರ್ 1 ರಿಂದ ನವೆಂಬರ್ 8 ರವರೆಗೆ ರಾಜ್ಯದಲ್ಲಿ ಸರಾಸರಿ 17 ಮಿಮೀ ಮಳೆಯಾಗಬೇಕಿತ್ತು, ಆದರೆ 34 ಮಿಮೀ ಮಳೆಯಾಗಿ ಅತಿವೃಷ್ಟಿಯಾಗಿದೆ. ಉತ್ತರ ಕರ್ನಾಟಕದ ಹೊರತಾಗಿ ಉಳಿದೆಲ್ಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಪ್ರತಿನಿಧಿ ಜೊತೆ ಮಾತನಾಡಿದ ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಮತ್ತು ಈಗ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿಎಸ್ ಶ್ರೀನಿವಾಸ್ ರೆಡ್ಡಿ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಜೂನ್ ಮತ್ತು ಜುಲೈನಲ್ಲಿ ಬಿತ್ತನೆ ಮಾಡಿದ ರೈತರು ಕೊಯ್ಲಿಗೆ ಸಿದ್ಧರಾಗಿದ್ದಾರೆ.

ಮಳೆ ಕೊರತೆಯಿಂದ ಇಳುವರಿ ಕುಸಿದಿದ್ದು, ಕಟಾವಿನ ಸಮಯದಲ್ಲಿ ಸುರಿದ ಭಾರಿ ಮಳೆ ಬೆಳೆಗಳಿಗೆ ಅಪಾಯ ತಂದೊಡ್ಡುತ್ತಿದೆ. ಕಟಾವಿನ ಸಮಯದಲ್ಲಿ ಮಳೆಯು ಉತ್ತಮವಾಗಿಲ್ಲ, ಇದರಿಂದ ಬೆಳೆಗಳು ಹಾನಿಗೊಳಗಾಗುತ್ತವೆ. ರೈತರು ರಾಗಿ, ಜೋಳ, ಶೇಂಗಾ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಹಾನಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಧಾನ್ಯಗಳಿಗೆ ಹಾನಿ: ಈ ತಿಂಗಳ ಮಳೆಯು ರಾಜ್ಯದ ದಕ್ಷಿಣ ಒಳಭಾಗಗಳಿಗೂ ಹಾನಿಯನ್ನುಂಟು ಮಾಡುತ್ತಿದೆ. ಕೆಎಸ್‌ಎನ್‌ಡಿಎಂಸಿ ಅಂಕಿಅಂಶಗಳು ಮಳೆಯ ಪ್ರಮಾಣವು ಹೆಚ್ಚು ಎಂದು ತಿಳಿಸುತ್ತದೆ. ಬೆಂಗಳೂರು ಗ್ರಾಮಾಂತರದಲ್ಲಿ ಈ ತಿಂಗಳು 25 ಮಿ.ಮೀ ವಾಡಿಕೆಯಂತೆ 72 ಮಿ.ಮೀ ಮಳೆಯಾಗಿದ್ದರೆ, ಮೈಸೂರು ಮತ್ತು ಚಾಮರಾಜನಗರದಲ್ಲಿ ತಲಾ 26 ಮಿ.ಮೀ ನಂತೆ 74 ಮಿ.ಮೀ, ಅದೇ ರೀತಿ ದಾವಣಗೆರೆಯಲ್ಲಿ 16 ಮಿ.ಮೀ ಮಳೆಗೆ 56 ಮಿ.ಮೀ ಮಳೆಯಾಗಿದೆ.

ಸಾಮಾನ್ಯ ಮುಂಗಾರು ವರ್ಷದಲ್ಲಿ (ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿದ್ದಾಗ) ರೈತರು ಅಕ್ಟೋಬರ್ ಮೂರನೇ ವಾರದಿಂದ ಕಟಾವು ಆರಂಭಿಸಿ ನವೆಂಬರ್ ಎರಡನೇ ವಾರದೊಳಗೆ ಪ್ರಕ್ರಿಯೆ ಮುಗಿಸುತ್ತಾರೆ ಎಂದು ಕೃಷಿ ಹವಾಮಾನ ತಜ್ಞ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಎಂ.ಬಿ.ರಾಜೇಗೌಡ ತಿಳಿಸಿದರು.

ಆದರೆ ಈ ವರ್ಷ ಮಳೆ ಕೊರತೆಯಿಂದ ಭಾಗಗಳಲ್ಲಿ ಬೆಳೆ ಕಟಾವು ಆಗುತ್ತಿದ್ದು, ಅತಿವೃಷ್ಟಿಯಿಂದ ಹಾನಿಯಾಗಿದೆ. ಭಾರೀ ಮಳೆಯಿಂದಾಗಿ ಧಾನ್ಯಗಳು ಭಾರವಾಗಿ ಅಂತಿಮವಾಗಿ ಬೀಳುತ್ತವೆ. ಧಾನ್ಯಗಳು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ, ಇದು ಯಾವುದೇ ಪ್ರಯೋಜನವಿಲ್ಲ. ಧಾನ್ಯಗಳು ಶಿಲೀಂಧ್ರವನ್ನು ಸಹ ಸಂಗ್ರಹಿಸುತ್ತವೆ, ರೈತರಿಗೆ ಬಹಳ ಸಮಸ್ಯೆಯಾಗುತ್ತವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com