ಕೊಡಗು: ಸೇನೆಯಿಂದ ಸಿಗಬೇಕಿದ್ದ 50 ಲಕ್ಷ ರೂ.ಗೆ ಬೇಡಿಕೆ, ಹನಿಟ್ರ್ಯಾಪ್‌ಗೆ ಸಿಲುಕಿ ನಿವೃತ್ತ ಯೋಧ ಆತ್ಮಹತ್ಯೆ

ಹನಿ ಟ್ರ್ಯಾಪಿಂಗ್‌ಗೆ ಸಿಲುಕಿದ್ದ ನಿವೃತ್ತ ಯೋಧರೊಬ್ಬರ ಮೃತದೇಹವನ್ನು ಕೊಡಗು ಜಿಲ್ಲೆಯ ಕೆರೆಯೊಂದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೃತರನ್ನು ಮಡಿಕೇರಿ ಸಮೀಪದ ಉಕ್ಕುಡ ನಿವಾಸಿ ಸಂದೇಶ್ ಎಂದು ಗುರುತಿಸಲಾಗಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಡಿಕೇರಿ: ಹನಿ ಟ್ರ್ಯಾಪಿಂಗ್‌ಗೆ ಸಿಲುಕಿದ್ದ ನಿವೃತ್ತ ಯೋಧರೊಬ್ಬರ ಮೃತದೇಹವನ್ನು ಕೊಡಗು ಜಿಲ್ಲೆಯ ಕೆರೆಯೊಂದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಮೃತರನ್ನು ಮಡಿಕೇರಿ ಸಮೀಪದ ಉಕ್ಕುಡ ನಿವಾಸಿ ಸಂದೇಶ್ ಎಂದು ಗುರುತಿಸಲಾಗಿದೆ. ಜೀವಿತಾ ಮತ್ತು ಸತೀಶ್ ಎಂಬ ಪೊಲೀಸ್ ಅಧಿಕಾರಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಸಂದೇಶ್ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾನೆ.

ಮಡಿಕೇರಿ ನಗರ ಸಮೀಪದ ಪಂಪಿನಕೆರೆ ಕೆರೆಯಲ್ಲಿ ಬುಧವಾರ ರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ತುರ್ತು ಸೇವೆ ಹಾಗೂ ಪೊಲೀಸ್ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ.

ಪೊಲೀಸರ ಪ್ರಕಾರ, ನಿವೃತ್ತ ಯೋಧನಿಗೆ ಮದುವೆಯಾಗಿತ್ತು. ಆರೋಪಿ ಮಹಿಳೆಯು ನಿವೃತ್ತ ಯೋಧನೊಂದಿಗಿನ ತಮ್ಮ ಖಾಸಗಿ ಕ್ಷಣಗಳನ್ನು ಫೊಟೋ ಮತ್ತು ವಿಡಿಯೋಗಳಲ್ಲಿ ಸೆರೆಹಿಡಿದಿದ್ದರು.

ನಂತರ ಆಕೆ ತನ್ನ ಸ್ನೇಹಿತನಾಗಿರುವ ಮತ್ತೊಬ್ಬ ಆರೋಪಿಯ ಸಹಾಯ ಪಡೆದು ನಿವೃತ್ತ ಸೇನಾಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಸೇನೆಯಿಂದ ಸಂದೇಶ್‌ಗೆ ಪರಿಹಾರವಾಗಿ ಸಿಗಬೇಕಿದ್ದ 50 ಲಕ್ಷ ರೂ.ಗೆ ಆಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ನಿವೃತ್ತ ಯೋಧರು ತಪ್ಪಿತಸ್ಥ ಭಾವದಿಂದ ಪತ್ನಿಗೆ ಎಲ್ಲ ವಿಚಾರವನ್ನೂ ಹೇಳಿದ್ದಾರೆ. ಈ ಕಿರುಕುಳ ತಾಳಲಾರದೆ, ಬಳಿಕ ಆರೋಪಿ ಹಾಗೂ ಆಕೆಯ ಸ್ನೇಹಿತೆ ನೀಡುತ್ತಿರುವ ಕಿರುಕುಳದ ಕುರಿತು ಪತ್ರ ಬರೆದು ಕೆರೆಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.

ಮಂಗಳವಾರ ಡೆತ್ ನೋಟ್ ಪತ್ತೆಯಾಗಿದ್ದು, ಬುಧವಾರ ಸಂತ್ರಸ್ತನಿಗೆ ಸಂಬಂಧಿಸಿದ ವಸ್ತುಗಳು ಕೆರೆಯ ಬಳಿ ಪತ್ತೆಯಾಗಿವೆ. ಮೃತದೇಹ ಪತ್ತೆಗೆ ದಕ್ಷಿಣ ಕನ್ನಡದಿಂದ ವಿಶೇಷ ತಂಡವನ್ನು ಕರೆಸಲಾಗಿತ್ತು. ನಿವೃತ್ತ ಯೋಧನ ಮೃತದೇಹ ಕೆರೆಯ ಕೆಳಭಾಗದಲ್ಲಿ ಪತ್ತೆಯಾಗಿದೆ.

ಈ ಸಂಬಂಧ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com