ವೈದ್ಯಕೀಯ ಸೀಟು ಕೊಡಿಸುವುದಾಗಿ 4.5 ಲಕ್ಷ ರು. ಪಂಗನಾಮ: ಗೃಹ ಸಚಿವ ಪರಮೇಶ್ವರ್ ಆಪ್ತನೆಂದು ಹೇಳಿ ವಂಚನೆ!

ಗೃಹ ಸಚಿವ ಡಾ.ಪರಮೇಶ್ವರ ಅವರ ಆಪ್ತರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಸಚಿವರ ಜತೆಗಿರುವ ಚಿತ್ರಗಳನ್ನು ತೋರಿಸಿ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 53 ವರ್ಷದ ವ್ಯಕ್ತಿಯೊಬ್ಬರಿಗೆ 4.5 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗೃಹ ಸಚಿವ ಡಾ.ಪರಮೇಶ್ವರ ಅವರ ಆಪ್ತರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಸಚಿವರ ಜತೆಗಿರುವ ಚಿತ್ರಗಳನ್ನು ತೋರಿಸಿ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 53 ವರ್ಷದ ವ್ಯಕ್ತಿಯೊಬ್ಬರಿಗೆ 4.5 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಆರೋಪಿಗಳು ಕಾಲೇಜಿನಿಂದ ನಕಲಿ ಶುಲ್ಕ ರಶೀದಿಯನ್ನು ಸಹ ಅವರಿಗೆ  ಸಂತ್ರಸ್ತರಿಗೆ ಒದಗಿಸಿದ್ದಾರೆ.  53 ವರ್ಷದ ವ್ಯಕ್ತಿ  ಮತ್ತು ಅವರ ಮಗಳು ಕಾಲೇಜಿಗೆ ತೆರಳಿದ್ದಾರೆ, ಈ ವೇಳೆ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.

ರಾಜರಾಜೇಶ್ವರಿನಗರದ ನಿವಾಸಿ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬಿಬಿಎಸ್ ಮುಗಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಜಿ ಕೌನ್ಸೆಲಿಂಗ್ ಸಮಯದಲ್ಲಿ ಪ್ರಿಯಾ ಸೀಟಿಗಾಗಿ ಹುಡುಕಾಟ ನಡೆಸಿದ್ದರು. ಪ್ರಿಯಾಳ ತಂದೆ ಮನೋಜ್ (ಹೆಸರು ಬದಲಾಯಿಸಲಾಗಿದೆ), ಪರಿಚಯಸ್ಥ ಲೋಕೇಶ್ವರ ನಾಯಕ್ ಮೂಲಕ ಮೊಹಮ್ಮದ್ ಜುಬೇರ್ ಎಂಬಾತನ ಪರಿಚಯವಾಯಿತು. ಜುಬೇರ್ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಪಡೆಯಲು ತನ್ನ ಮಗಳಿಗೆ  ಸಹಾಯ ಮಾಡಬಹುದೆಂದು ನಾಯಕ್ ಮನೋಜ್‌ಗೆ ತಿಳಿಸಿದರು.

ಕೊರಟಗೆರೆ ನಿವಾಸಿ ಜುಬೇರ್ ಅವರು ಪ್ರಿಯಾ ಮತ್ತು ಮನೋಜ್ ಅವರನ್ನು ಜಯನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ತುಮಕೂರಿನ ಕಾಲೇಜಿನಲ್ಲಿ ವೈದ್ಯಕೀಯ ಸೀಟು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಸೀಟು ದೃಢಪಡಿಸಿಕೊಳ್ಳಲು ಜುಬೇರ್ ಮನೋಜ್ ಬಳಿ 4.5 ಲಕ್ಷ ರೂ.  ಹಣ ಪಡೆದಿದ್ದಾರೆ. ಮನೋಜ್ ತನ್ನ ಬ್ಯಾಂಕ್ ಖಾತೆಯಿಂದ ಆತನ ಪೇಟಿಎಂ ಖಾತೆಗೆ ಹಣ ವರ್ಗಾಯಿಸಿದ್ದಾರೆ. ನಂತರ ಜುಬೇರ್ ಅವರಿಗೆ ಕಾಲೇಜು ಹೆಸರು ಮತ್ತು ಪ್ರಮಾಣ ಪತ್ರಗಳ ಶುಲ್ಕದ ರಸೀದಿ ನೀಡಿದ್ದು, ಅದು ನಕಲಿ ಎಂದು ತಿಳಿದುಬಂದಿದೆ. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com