ಕಬ್ಬನ್ ಪಾರ್ಕ್ ನಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲರವ, ಚಿತ್ತಾರದ ರಂಗೋಲಿ ಬಿಡಿಸಿದ ಚೆಲುವೆಯರು!

ಉದ್ಯಾನನಗರಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್ ಪಾರ್ಕ್ ವಾಕರ್ಸ್ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲರವ  ಮಾಡಿತ್ತು. ಮಹಿಳೆಯರು ಆಕರ್ಷಕ ರಂಗೋಲಿ ಬಿಡಿಸಿದರು. 
ಕಬ್ಬನ್ ಪಾರ್ಕ್ ನಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲರವ, ಚಿತ್ತಾರದ ರಂಗೋಲಿ ಬಿಡಿಸಿದ ಚೆಲುವೆಯರು!
Updated on

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್ ಪಾರ್ಕ್ ವಾಕರ್ಸ್ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲರವ  ಮಾಡಿತ್ತು. ಮಹಿಳೆಯರು ಆಕರ್ಷಕ ರಂಗೋಲಿ ಬಿಡಿಸಿದರು. 

ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಕಳೆದ 13 ವರ್ಷಗಳಿಂದ ಪ್ರತಿ ನವೆಂಬರ್ ಎರಡನೇ ಭಾನುವಾರದಂದು ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಆಚರಿಸುತ್ತಾ ಬಂದಿದ್ದು, ಈ ಬಾರಿ ರಂಗೋಲಿ, ಚಿತ್ರಕಲೆ, ಆಲಂಕಾರಿಕ ಡ್ರೆಸ್ ಸ್ಪರ್ಧೆ ನಡೆಯಿತು. ಇದರಲ್ಲಿ ಸುಮಾರು 1,500 ಜನರು ಭಾಗವಹಿಸಿದ್ದರು. 

ಕಳೆದ ವರ್ಷದ ಉತ್ಸವದಲ್ಲಿ 700 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದನ್ನು ನೆನಪಿಸಿಕೊಂಡ ವಕೀಲ, ಪರಿಸರವಾದಿ ಮತ್ತು ಕಬ್ಬನ್ ಪಾರ್ಕ್ ನಡಿಗೆಗಾರರ ​​ಸಂಘದ ಅಧ್ಯಕ್ಷ ಉಮೇಶ್ ಕುಮಾರ್, “ಈ ಬಾರಿ ಇಷ್ಟೊಂದು ಜನ ಸೇರುತ್ತಾರೆ ಅಂದುಕೊಂಡಿರಲಿಲ್ಲ. ರಂಗೋಲಿ ಸ್ಪರ್ಧೆಗಾಗಿ ನೋಂದಾಯಿಸಿದ  250 ಮಂದಿ ಪೈಕಿ  360 ಮಂದಿ ಭಾಗವಹಿಸಿದರು. ಚಿತ್ರ ಬಿಡಿಸುವ ಸ್ಪರ್ಧೆಗಾಗಿ 80 ಮಂದಿ ಹೆಸರು ನೋಂದಾಯಿಸಿದ್ದರೂ 120 ಮಂದಿ ಪಾಲ್ಗೊಂಡರು. ಅಲಂಕಾರಿಕ ಉಡುಗೆ ಸ್ಪರ್ಧೆಯಲ್ಲಿ 180 ಜನರು ಪಾಲ್ಗೊಂಡಿದ್ದಾಗಿ ತಿಳಿಸಿದರು. 

ವಿದೇಶಿ ಮೂಲದ ಜನರು ಸೇರಿದಂತೆ ನಗರದ ಎಲ್ಲಾ ವರ್ಗದ ಜನರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿವಿಧ ರೀತಿಯ ಚಿತ್ತಾರದ ರಂಗೋಲಿ ಬಿಡಿಸಿದರು. 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರಕೃತಿಯ ವಿಷಯದ ರೇಖಾಚಿತ್ರಗಳನ್ನು ಬಿಡಿಸಿದರೆ, ವಯಸ್ಕರು ಹೂವು ಮತ್ತು ಬೀಜಗಳು, ಬಣ್ಣಗಳು  ಬಳಸಿ ರಂಗೋಲಿ ರಚಿಸಿದರು ಎಂದು ಅಲ್ಲಿದ್ದವರು ತಮ್ಮ ಸಂತಸ ಹಂಚಿಕೊಂಡರು.  ರಂಗೋಲಿ ತಯಾರಿಕೆಯಲ್ಲಿ ಅಗ್ರ 3 ವಿಜೇತರಿಗೆ ಬೆಳ್ಳಿ ನಾಣ್ಯಗಳನ್ನು ನೀಡಲಾಯಿತು. ಚಿತ್ರಕಲೆ ಮತ್ತು ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ ವಿಜೇತರಾದವರು ಹಾಗೂ ಕನ್ನಡದ ಶ್ರೇಷ್ಠ ಗೀತೆಯನ್ನು ಹಾಡಿದವರಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಇದೇ ವೇಳೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ 1 ರಿಂದ 15 ವರ್ಷ ವಯಸ್ಸಿನ ಮಕ್ಕಳು ರಾಜ್ಯದ ವಿವಿಧ ಪ್ರದೇಶಗಳ ವೇಷಭೂಷಣ ಮತ್ತು ಇತರ ವೇಷಭೂಷಣಗಳನ್ನು ಧರಿಸಿದ್ದರು. ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ತೀರ್ಪುಗಾರರಾದ ಕರ್ನಾಟಕ ಸರ್ಕಾರದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಮಾತ್ರವಲ್ಲದೆ ನಮ್ಮ ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಈ ರೀತಿಯ ಕಾರ್ಯಕ್ರಮಗಳೊಂದಿಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಭ್ಯಾಸ ಮಾಡಲು ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com