ಕೆಂಗೇರಿ ನಿಲ್ದಾಣದಲ್ಲಿ ರೈಲು ಹತ್ತಲು ಪ್ರಯಾಣಿಕರು ಪ್ರಾಣವನ್ನೆ ಪಣಕ್ಕಿಡಬೇಕಾದ ಪರಿಸ್ಥಿತಿ!

ಜನನಿಬಿಡ ಕೆಂಗೇರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತಲು ಪ್ರಾಣವನ್ನೆ ಪಣಕ್ಕಿಡಬೇಕಾಗಿದೆ. ಇಂತಹ ಅಪಾಯಕಾರಿ ಸನ್ನಿವೇಶವೊಂದು ಕಾಣಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜನನಿಬಿಡ ಕೆಂಗೇರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತಲು ಪ್ರಾಣವನ್ನೆ ಪಣಕ್ಕಿಡಬೇಕಾಗಿದೆ. ಇಂತಹ ಅಪಾಯಕಾರಿ ಸನ್ನಿವೇಶವೊಂದು ಕಾಣಿಸಿಕೊಂಡಿದೆ. ಅಲ್ಲಿ 36 ಜೋಡಿ ರೈಲುಗಳಲ್ಲಿ 29 ಜೋಡಿ ರೈಲುಗಳು ನಿಂತು ಹಾದು ಹೋಗುತ್ತವೆ. ಈ ರೈಲುಗಳು ಪರಸ್ಪರ ಸಂಪರ್ಕ ಹೊಂದಿದ ಪ್ಲಾಟ್‌ಫಾರ್ಮ್‌ 2 ಮತ್ತು 3 ರ ಟ್ರ್ಯಾಕ್‌ಗಳಲ್ಲಿ ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ. ಆದರೆ ಇತರ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿನ ಟ್ರ್ಯಾಕ್‌ಗಳು ಶಾಶ್ವತವಾಗಿ ರೈಲುಗಳಿಗೆ ನಿಲುಗಡೆಯಾಗಿವೆ.

ನಾಲ್ಕು ಪ್ಲಾಟ್‌ಫಾರಂ ಮಧ್ಯೆ ಒಂದೇ ಒಂದು ಪಾದಚಾರಿ ಮೇಲು ರಸ್ತೆ ಇದೆ. ಅದನ್ನು ಹತ್ತಲಾಗದವರು ನಿಲ್ದಾಣದ ಮಧ್ಯೆಯೇ ಟ್ರ್ಯಾಕ್‌ಗಳನ್ನು ದಾಟುತ್ತಾರೆ. ನಿಲ್ದಾಣದ ಮುಂದೆಯೇ ದೊಡ್ಡ ತಿರುವು ಇರುವುದರಿಂದ ರೈಲುಗಳು ಬರುವುದು ಕಾಣಿಸುವುದಿಲ್ಲ. ಇದರಿಂದ ಜನರು ಹಳಿ ದಾಟುತ್ತಿರುವಾಗ ರೈಲಿಗೆ ಸಿಲುಕಿದಂತಹ ಘಟನೆಗಳೂ ನಡೆದಿವೆ. 

ಅನೇಕ ಪ್ರಯಾಣಿಕರು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಪ್ಲಾಟ್‌ಫಾರ್ಮ್ 1 ರಲ್ಲಿ ನಿಲುಗಡೆ ಮಾಡಲಾದ ಬೆಳಗಾವಿ ಎಕ್ಸ್‌ಪ್ರೆಸ್ (ಕೆಎಸ್‌ಆರ್ ಬೆಂಗಳೂರು-ಬೆಳಗಾವಿ) ಕೋಚ್‌ಗಳಿಗೆ ಏರುತ್ತಾರೆ, ತೆರೆದ ರೈಲಿನ ಬಾಗಿಲುಗಳಿಂದ ಜಿಗಿದು ರೈಲ್ವೆ ಹಳಿಗಳನ್ನು ದಾಟಿ ಫ್ಲಾಟ್ ಫಾರ್ಮ್ 2 ಮತ್ತು 3 ತಲುಪುತ್ತಾರೆ. ಈ ರೈಲು ಮೀರಜ್‌ನಿಂದ ಬೆಂಗಳೂರಿಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಆಗಿ ಆಗಮಿಸುತ್ತದೆ ಮತ್ತು ನಂತರ ಹೆಸರನ್ನು ಬದಲಾಯಿಸಲಾಗುತ್ತದೆ. ಕೆಲವು ಪ್ರಯಾಣಿಕರು ಚಕ್ರಗಳ ನಡುವಿನ ಅಂತರದಲ್ಲಿ ನುಸುಳಿಕೊಂಡು ಇನ್ನೊಂದು ಬದಿಯನ್ನು ತಲುಪುವುದು ಮತ್ತೊಂದು ಅಪಾಯಕಾರಿ ಮಾರ್ಗ ಎಂದು ಸ್ಥಳೀಯರು ಹೇಳುತ್ತಾರೆ.

ಪ್ಲಾಟ್ ಫಾರ್ಮ್ 1 ಹತ್ತಿರದ ರಸ್ತೆ, ರೈಲ್ವೆ ಸಮಾನಾಂತರ ರಸ್ತೆಗೆ ಸುಲಭ ಪ್ರವೇಶವನ್ನು ಹೊಂದಿದೆ. ಆದರೆ, ವಾರದಲ್ಲಿ ಐದಾರು ದಿನ ನಿಲುಗಡೆಗೊಂಡಿರುವ ರೈಲಿನಿಂದ ಇಲ್ಲಿನ ಹಳಿ ಬ್ಲಾಕ್ ಆಗಿರುವುದರಿಂದ ಇತರೆ ರೈಲುಗಳು ಇಲ್ಲಿ ನಿಲುಗಡೆಯಾಗುವುದಿಲ್ಲ ಅಥವಾ ಪ್ರಾರಂಭಿಸುವಂತಿಲ್ಲ ಎಂದು ಪ್ರಯಾಣಿಕ ಜಿ. ಸಿ.ದೀಪಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಪ್ರತಿದಿನ,  ಹಿರಿಯ ನಾಗರಿಕರು ಮತ್ತು ಮಹಿಳೆಯರು, ಸಾಮಾನುಗಳೊಂದಿಗೆ ಅನೇಕರು ಮೆಟ್ಟಿಲುಗಳನ್ನು ಹತ್ತಲು ಮತ್ತು ಇಳಿಯಲು ಕಷ್ಟಪಡುವುದನ್ನು ನೋಡುತ್ತೇನೆ. ಸಾರ್ವಜನಿಕರಿಗೆ ಸಹಾಯ ಮಾಡಲು ರೈಲುಗಳು ಇಲ್ಲಿ ನಿಲ್ಲಬೇಕು ಎಂದರು.

ಬೆಂಗಳೂರು ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಯೋಗೀಶ್ ಮೋಹನ್ ಮಾತನಾಡಿ, ಉತ್ತಮವಾದದ್ದನ್ನು ಮಾಡುತ್ತೇನೆ. ಸಾರ್ವಜನಿಕರಿಗೆ ತೊಂದರೆಯಾದರೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು. ಎರಡು ಕಾರಣಗಳಿಂದ ಫ್ಲಾಟ್ ಫಾರ್ಮ್ 1ರಲ್ಲಿ ರೈಲನ್ನು ನಿಲುಗಡೆ ಮಾಡಲಾಗಿದೆ. ಪ್ಲಾಟ್‌ಫಾರ್ಮ್ 1 ಮತ್ತು 4 ರ ಉದ್ದಕ್ಕೂ ಇರುವ ಟ್ರ್ಯಾಕ್‌ಗಳು ಲೂಪ್ ಲೈನ್ ಆಗಿದ್ದರೆ, ಮುಖ್ಯ ಮಾರ್ಗಗಳು ಪ್ಲಾಟ್‌ಫಾರ್ಮ್ 2 ಮತ್ತು 3 ರ ಉದ್ದಕ್ಕೂ ಇದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com