ಹಳೆಯ ಪಾದರಕ್ಷೆಗಳಿಂದ ಹೊಸ ಹಾದಿ ನಿರ್ಮಿಸುತ್ತಿರುವ 'ನಡಿಗೆ'!

ಕಸದಿಂದ ರಸ ಎನ್ನುವ ಮಾತು ಜನಜನಿತ. ಈ ಮಾತಿಗೆ ಪೂರಕವಾಗುವಂತೆ ಇಲ್ಲೊಬ್ಬ ವ್ಯಕ್ತಿ ಒಳ್ಳೆಯ ಉದ್ದೇಶದೆಡೆಗೆ ನಡೆಯುತ್ತಿದ್ದಾರೆ. 
ನಡಿಗೆ ಪೋಸ್ಟರ್ ಬಿಡುಗಡೆ ವೇಳೆ ಉಪಸ್ಥಿತರಿರುವ ಅವಿನಾಶ್ ಕಾಮತ್ ( ಎಡಭಾಗದಿಂದ ಮೊದಲ ವ್ಯಕ್ತಿ)
ನಡಿಗೆ ಪೋಸ್ಟರ್ ಬಿಡುಗಡೆ ವೇಳೆ ಉಪಸ್ಥಿತರಿರುವ ಅವಿನಾಶ್ ಕಾಮತ್ ( ಎಡಭಾಗದಿಂದ ಮೊದಲ ವ್ಯಕ್ತಿ)

ಕಸದಿಂದ ರಸ ಎನ್ನುವ ಮಾತು ಜನಜನಿತ. ಈ ಮಾತಿಗೆ ಪೂರಕವಾಗುವಂತೆ ಇಲ್ಲೊಬ್ಬ ವ್ಯಕ್ತಿ ಒಳ್ಳೆಯ ಉದ್ದೇಶದೆಡೆಗೆ ನಡೆಯುತ್ತಿದ್ದಾರೆ. 

ಅವರ ಹೆಸರು ಅವಿನಾಶ್ ಕಾಮತ್. 37 ವರ್ಷದ ಅವಿನಾಶ್ ಕಾಮತ್, ಉಡುಪಿಯ ನಿವಾಸಿಯಾಗಿದ್ದು, ಸ್ಥಳೀಯರಿಂದ ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸಿ ಅದನ್ನು ನವಿ ಮುಂಬೈ ಮೂಲದ ಗ್ರೀನ್ ಸೋಲ್ ಗೆ ನೀಡುತ್ತಾರೆ. ಈ ಸಂಸ್ಥೆ ಮತ್ತೆ ಅದರಿಂದ ಹೊಸ ಪಾದರಕ್ಷೆಗಳನ್ನು ತಯಾರು ಮಾಡುತ್ತದೆ.

ತಮ್ಮ ಈ ಮಿಷನ್ ಗೆ ಅವಿನಾಶ್ ಕಾಮತ್, ನಡಿಗೆ ಎಂಬ ಹೆಸರು ನೀಡಿದ್ದಾರೆ. ಕಾರ್ಯಕ್ರಮ ಯೋಜಕರು ಹಾಗೂ ನಿರೂಪಕರೂ ಆಗಿರುವ ಕಾಮತ್, ತಮ್ಮ ಈ ಮಿಷನ್ ನಿಂದಾಗಿ ಎರಡು ಉಪಯೋಗಗಳಿವೆ ಎನ್ನುತ್ತಾರೆ. 

ಹಳೆಯ ಪಾದರಕ್ಷೆಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ, ಮರುಬಳಕೆ ಮಾಡುವುದಕ್ಕೆ ತಮ್ಮ ಉದ್ದೇಶ ಸಹಕಾರಿಯಾಗಲಿದೆ. ಈ ರೀತಿ ಮರುಬಳಕೆಯಾದ ಪಾದರಕ್ಷೆಗಳನ್ನು ಸುಮಾರು 4,000 ಮಕ್ಕಳಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ. 

ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ನಡಿಗೆ ಅಭಿಯಾನ ನಡೆಯಲಿದೆ. ಗ್ರೀನ್‌ಸೋಲ್ ಬ್ಯಾಗ್‌ಗಳು, ಮ್ಯಾಟ್‌ಗಳು ಮತ್ತು ಪೌಚ್‌ಗಳನ್ನು ಮರುಬಳಕೆ ಮಾಡುತ್ತದೆ, ಅವುಗಳನ್ನು ಕಸಕ್ಕೆ ಸೇರಿಸುವುದರಿಂದ ದೂರ ಇರಿಸಿದಂತಾಗಲಿದೆ. 

ವಾಯ್ಸ್ ಓವರ್ ಕಲಾವಿದರೂ ಆಗಿರುವ ಕಾಮತ್, ಗ್ರೀನ್‌ಸೋಲ್‌ನಲ್ಲಿ ಆನ್‌ಲೈನ್‌ನಲ್ಲಿ ಕಂಡ ಕೆಲವು ವೀಡಿಯೊಗಳಿಂದ ಪ್ರಭಾವಿತನಾಗಿದ್ದೆ ಮತ್ತು ಹೀಗಾಗಿ "ನಡಿಗೆ" ಅಭಿಯಾನ ಹುಟ್ಟಿದೆ ಎಂದು ಹೇಳಿದ್ದಾರೆ.

“ಬಟ್ಟೆಗಳು, ವಿಗ್‌ಗಳಿಗಾಗಿ ಕೂದಲು ಮತ್ತು ಹೆಚ್ಚಿನದನ್ನು ಸಂಗ್ರಹಿಸಲು ನಾವು ಅನೇಕ ಉಪಕ್ರಮಗಳನ್ನು ಹೊಂದಿದ್ದೇವೆ. ನಂತರ ನಾನು ಬಳಕೆಯಾಗದ ಹಳೆಯ ಪಾದರಕ್ಷೆಗಳ ಸಮಸ್ಯೆಯನ್ನು ಪರಿಹರಿಸಲು ಯೋಚಿಸಿದೆ. ನಾನು ಕಳೆದ ತಿಂಗಳು ಮಹಾರಾಷ್ಟ್ರದ ಗ್ರೀನ್‌ಸೋಲ್ ಸ್ಥಾವರಕ್ಕೆ ಭೇಟಿ ನೀಡಿದ್ದೇನೆ ಮತ್ತು ಗ್ರೀನ್‌ಸೋಲ್‌ನ ಸಹ-ಸಂಸ್ಥಾಪಕರಾದ ಶ್ರೀಯನ್ಸ್ ಭಂಡಾರಿ ಮತ್ತು ರಮೇಶ್ ಧಾಮಿ ಅವರೊಂದಿಗೆ ಅರ್ಧ ದಿನ ಕಳೆದಿದ್ದೇನೆ. ಭೇಟಿಯ ಸಂದರ್ಭದಲ್ಲಿ ನಡಿಗೆ ಪೋಸ್ಟರ್ ಬಿಡುಗಡೆ ಮಾಡುವ ಸೌಭಾಗ್ಯವೂ ನನಗೆ ಸಿಕ್ಕಿತ್ತು. ಅವರಿಗೆ ಉಡುಪಿಗೆ ಬರುವಂತೆ ಆಹ್ವಾನ ನೀಡಿದ್ದೇನೆ. ಆ ದಿನ ಮರುಬಳಕೆಯ ಪಾದರಕ್ಷೆಗಳನ್ನು ಸ್ವೀಕರಿಸುವ ಮಕ್ಕಳನ್ನು ನಾವು ಪಟ್ಟಿ ಮಾಡಿದ್ದೇವೆ ಎಂದು ಕಾಮತ್ ಹೇಳಿದ್ದಾರೆ.

ಕಾಮತ್ ಈ ಅಭಿಯಾನವನ್ನು ರೂಪಿಸಲು ಹಲವಾರು ತಿಂಗಳುಗಳು ಶ್ರಮಿಸಿದ್ದಾರೆ ಮತ್ತು ಚೋಸೆನ್ ಜನರೇಷನ್ ಚಾರಿಟೇಬಲ್ ಟ್ರಸ್ಟ್‌ (Chosen Generation Charitable Trust) ನೊಂದಿಗೆ ಪಾಲುದಾರರಾಗಿದ್ದಾರೆ. "ಸಾಮಾನ್ಯ ಮತ್ತು ಕ್ರೀಡಾ ಶೂಗಳು, ಚಪ್ಪಲಿಗಳು, ಸ್ಯಾಂಡಲ್ಗಳು, ಫೋಮ್ ಮತ್ತು ರಬ್ಬರ್ ಶೂಗಳನ್ನು ಸಂಗ್ರಹಿಸಲಾಗುತ್ತದೆ. ವಿವಿಧ ಸಂಸ್ಥೆಗಳು ಮತ್ತು ಸಂಘಗಳು ತಮ್ಮ ಸ್ಥಳೀಯ ಸಮುದಾಯಗಳಲ್ಲಿ ಈ ಬೂಟುಗಳನ್ನು ಸಂಗ್ರಹಿಸಲು ಮತ್ತು ನಂತರ ಅವುಗಳನ್ನು ನಿರ್ದಿಷ್ಟ ಸಂಗ್ರಹಣಾ ಕೇಂದ್ರಕ್ಕೆ ತಲುಪಿಸಲು ಅವಕಾಶವನ್ನು ಹೊಂದಿವೆ,”ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಮತ್ ಅವರು ವಿವಿಧ ಸಾಮಾಜಿಕ ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಅವರು 4,000 ಪಾದರಕ್ಷೆಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. “ದಾನದಲ್ಲಿ ಹಲವಾರು ವಿಧಗಳಿವೆ. ಕೆಲವರು ಶಿಕ್ಷಣ ನೀಡಲು ಹಣವನ್ನು ದಾನ ಮಾಡುತ್ತಾರೆ. ಕೆಲವರು ಭೂರಹಿತರಿಗೆ ಭೂಮಿ ದಾನ ಮಾಡುತ್ತಾರೆ. ಪಾದರಕ್ಷೆಯಿಲ್ಲದ ಅನೇಕ ಮಕ್ಕಳನ್ನು ಕಂಡಾಗ ನಡಿಗೆ ನನ್ನ ನೆನಪಿಗೆ ಬಂದಿತು,” ಎಂದು ಅವರು ವಿವರಿಸಿದ್ದಾರೆ.

ಗ್ರೀನ್‌ಸೋಲ್‌ನಲ್ಲಿ, ಕ್ರೀಡಾ ಪಟುಗಳಾದ ಭಂಡಾರಿ ಮತ್ತು ಧಾಮಿ ವಾರ್ಷಿಕವಾಗಿ ತಮ್ಮ ಏಳರಿಂದ ಎಂಟು ಜೋಡಿ ಶೂಗಳನ್ನು ವಿಲೇವಾರಿ ಮಾಡುವ ಬಗ್ಗೆ ಚಿಂತಿಸುತ್ತಿದ್ದರು ಎಂದು ಕಾಮತ್ ಹೇಳುತ್ತಾರೆ. "ಪರಿಸರಕ್ಕೆ ಹೊರೆಯಾಗದಂತೆ ಹಳೆಯ ಬೂಟುಗಳನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಲು ಅವರು ಆರ್ & ಡಿಗೆ ತೊಡಗಿಸಿಕೊಳ್ಳಲು ಯೋಚಿಸಿದರು, ಆಗಲೇ ಈ ಗ್ರೀನ್‌ಸೋಲ್ ಎಂಬ ಪರಿಕಲ್ಪನೆ ಹುಟ್ಟಿದ್ದಾಗಿ” ಕಾಮತ್ ತಿಳಿಸಿದ್ದಾರೆ.

ಕಾಮತ್ ಈ ಉಪಕ್ರಮ ಶ್ಲಾಘನೀಯ ಎನ್ನುತ್ತಾರೆ ಭಂಡಾರಿ. "ಈ ಅಭಿಯಾನದ ಮೂಲಕ ಜನರು ಒಳ್ಳೆಯ ಉದ್ದೇಶಕ್ಕಾಗಿ ಒಗ್ಗೂಡಬಹುದು" ಎಂದು ಅವರು ಹೇಳುತ್ತಾರೆ. ಬಳಸಿದ ಪಾದರಕ್ಷೆಗಳನ್ನು ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಸಂಗ್ರಹಿಸಲಾಗುವುದು. ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರದ ಮಹಿಳಾ ವಿಭಾಗದ ಅಧ್ಯಕ್ಷೆ  ಉಡುಪಿಯ ಮಹಿಳಾ ವಿಭಾಗದ ಅಧ್ಯಕ್ಷ್ಯೆ ಶೈನಿ ಸತ್ಯಭಾಮಾ ಅವರು ಹಳೆಯ ಪಾದರಕ್ಷೆಗಳನ್ನು ವಿಲೇವಾರಿ ಮಾಡುವುದೂ ದೊಡ್ಡ ಸವಾಲಾಗಿದೆ ಏಕೆಂದರೆ ತ್ಯಾಜ್ಯ ಸಂಗ್ರಹಕಾರರು ಸಹ ಅವುಗಳನ್ನು ತಿರಸ್ಕರಿಸುತ್ತಾರೆ, ಇದು ಹೊರೆಯಾಗುತ್ತದೆ.  

ನಗರ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಿಸುವವರಿಗೆ ಹಳೆಯ ಪಾದರಕ್ಷೆಗಳನ್ನು ನೀಡಿದರೆ ಅದನ್ನು ಕಸದ ರಾಶಿಗೆ ಹಾಕುತ್ತಾರೆ ಎನ್ನುತ್ತಾರೆ. ಇದನ್ನು ನಿಲ್ಲಿಸಲು, ತ್ಯಾಜ್ಯ ಶೂಗಳ ಉತ್ತಮ ಬಳಕೆಯ ಅಗತ್ಯವಿದೆ. "ನಾವು ಉತ್ತಮ ಪರಿಸರಕ್ಕೆ ಈ ರೀತಿಯಲ್ಲಿ ಕೊಡುಗೆ ನೀಡಬಹುದು" ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com