ಸ್ವಯಂ-ಚಿಕಿತ್ಸೆ ನಿಲ್ಲಿಸಿ: ಜನತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯ ವ್ಯಾಪಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ(ಎಂಎಂಆರ್) ಅನಗತ್ಯವಾಗಿ ಬಳಕೆ ಮಾಡುತ್ತಿದ್ದು, ಇಂದು ಗಂಭೀರ ವಿಚಾರವಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯ ಏರುಪೇರಾಗುತ್ತಿದೆ. ಜನರು ಸ್ವಯಂ ಚಿಕಿತ್ಸೆ ನಿಲ್ಲಿಸಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯ ವ್ಯಾಪಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ(ಎಂಎಂಆರ್) ಅನಗತ್ಯವಾಗಿ ಬಳಕೆ ಮಾಡುತ್ತಿದ್ದು, ಇಂದು ಗಂಭೀರ ವಿಚಾರವಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯ ಏರುಪೇರಾಗುತ್ತಿದೆ. ಜನರು ಸ್ವಯಂ ಚಿಕಿತ್ಸೆ ನಿಲ್ಲಿಸಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ 2023 ಕುರಿತಂತೆ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮತಾನಾಡಿದರು.

ಈ ವೇಳೆ ಆ್ಯಂಟಿ ಬಯೋಟಿಕ್‌ ಗಳ ಅತಿಯಾದ ಬಳಕೆ ಒಳ್ಳೆಯದಲ್ಲ. ದಿನೇ ದಿನೇ ಇದರ ಪ್ರಮಾಣ ಹೆಚ್ಚಾಗುತ್ತಿದ್ದು, ಅದರಲ್ಲೂ ಕೋಳಿ ಸಾಕಣೆ, ಪಶುಪಾಲನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಉತ್ಪಾದನೆ ಹೆಚ್ಚು ಮಾಡುವ ಸಲುವಾಗಿ ಆ್ಯಂಟಿ ಬಯೋಟೆಕ್‌ ಗಳನ್ನು ಬಳಕೆ ಮಾಡುತ್ತಿದ್ದಾರೆ. ಜೊತೆಗೆ, ಇದು ಸುಲಭವಾಗಿ ಜನರ ಕೈ ಸೇರುತ್ತಿದೆ. ಯಾವುದೇ ಮಾಹಿತಿ ಇಲ್ಲದೆ ಸಾರ್ವಜನಿಕರು ಸಹ ಸ್ವಯಂ ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಾತಾವರಣ ಇಲ್ಲದಂತೆ ಮಾಡಬೇಕಿದ್ದು, ಈ ಬಗ್ಗೆ ಇಲಾಖೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದು, ಕೃಷಿ ಒಳಗೊಂಡತೆ ಇತರೆ ಇಲಾಖೆಗಳೊಂದಿಗೆ ಸಭೆ ನಡೆಸಿ, ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಬಳಕೆ ಕುರಿತು ಒಂದು ನೀತಿ ರೂಪಿಸಬೇಕಿದೆ ಎಂದು ಹೇಳಿದರು.

ನ.22ರಂದು ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಬಾರಿ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧವನ್ನು ಒಟ್ಟಾಗಿ ತಡೆಗಟ್ಟೋಣ ಘೋಷ ವಾಕ್ಯದಡಿ ಆಚರಣೆ ಮಾಡಲಾಗುತ್ತಿದೆ. ಇನ್ನೂ, ಎಎಂಆರ್ ಪ್ರಮಾಣದಿಂದಾಗಿ ಮರಣ ಪ್ರಮಾಣ ಅಧಿಕವಾಗುತ್ತಿದೆ. ಅನಾರೋಗ್ಯವೂ ಹೆಚ್ಚಾಗುತ್ತಿದ್ದು, ಹೀಗಾಗಿ, ಬಳಕೆ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com