ಬೆಂಗಳೂರು: ಅಲಂಕಾರಿಕ ಮೀನುಗಾರಿಕೆ ಮಾರುಕಟ್ಟೆಯಿಂದ 100 ಕೋಟಿ ರೂ. ಆದಾಯ!

ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ (ಕೆಎಎಫ್‌ಎಸ್‌ಯು) ಮೀನುಗಾರಿಕಾ ವಿಜ್ಞಾನಿ ಡಾ. ಎನ್. ಚೇತನ್, ಈ ಹಿಂದೆ ಮೀನುಗಾರಿಕೆ ವ್ಯಾಪಾರ ಅಲ್ಲಲ್ಲಿ ನಡೆಯುತ್ತಿತ್ತು, ಆದರೆ, ಕಳೆದ ಐದು ವರ್ಷಗಳಲ್ಲಿ ವ್ಯಾಪಾರದಲ್ಲಿ ಶೇ. 15 ರಿಂದ 20 ರಷ್ಟು ಏರಿಕೆಯಾಗಿದೆ. ನಗರದಲ್ಲಿ ಸುಮಾರು 2,500 ಚಿಲ್ಲರೆ ಅಂಗಡಿಗಳು ಲಾಭದಾಯಕ ವ್ಯಾಪಾರ ನಡೆಸುತ್ತಿವೆ ಎಂದು ಹೇಳಿದರು. 

ಕೆಎಎಫ್ ಎಸ್ ಯು ಇತ್ತೀಚೆಗೆ ನಗರದಲ್ಲಿ ಆಯೋಜಿಸಲಾದ ಕೃಷಿ ಮೇಳ 2023 ರಲ್ಲಿ ಗೋಲ್ಡ್ ಫಿಶ್, ಗಪ್ಪಿ, ಸ್ವೋರ್ಡ್ ಟೇಲ್, ಮೊಲಿ ಮತ್ತು ವಿಡೋ ಟೆಟ್ರಾಸ್‌ನಂತಹ ಮೀನುಗಳನ್ನು ಪ್ರದರ್ಶಿಸಲಾಯಿತು. ಗೋಲ್ಡ್ ಫಿಶ್ ಹೆಚ್ಚು ಮಾರಾಟವಾದ ಅಲಂಕಾರಿಕ ಮೀನುಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ ಗಪ್ಪಿ ನಂತರದ ಸ್ಥಾನದಲ್ಲಿದೆ ಎಂದು ಡಾ ಚೇತನ್ ಹೇಳಿದರು. ಮೇಳ ಪ್ರಾರಂಭವಾದ ಒಂದು ದಿನದೊಳಗೆ ಸುಮಾರು 800 ಸಣ್ಣ ಮೀನುಗಳನ್ನು ಅವರು ಮಾರಾಟ ಮಾಡಿದ್ದಾರೆ. 

ಈಗ ಖಾದ್ಯ ಮತ್ತು ಅಲಂಕಾರಿಕ ಮೀನುಗಳ ಮೀನುಗಾರಿಕೆ ವ್ಯವಹಾರ ಹೆಚ್ಚು ಸುವ್ಯವಸ್ಥಿತವಾಗಿದೆ ಮತ್ತು ರೈತರು ಮೀನುಗಾರಿಕೆಯನ್ನು ಪರ್ಯಾಯ ಆದಾಯದ ಮೂಲವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಮೀನುಗಾರಿಕಾ ಇಲಾಖೆಯು ಉತ್ತಮವಾದ ಮೀನುಗಾರಿಕೆ ವ್ಯವಹಾರವನ್ನು ಹೊಂದಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಸಮನಾಗಿ ಕರ್ನಾಟಕವನ್ನು ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 50 ರೈತರಿಗೆ ಅಲಂಕಾರಿಕ ಮೀನು ವ್ಯಾಪಾರದ ಬಗ್ಗೆ ಶಿಕ್ಷಣ ನೀಡಲು, ಅವರ ಜಮೀನಿನಲ್ಲಿ ಸಣ್ಣ ಕೆರೆ ವ್ಯವಸ್ಥೆ, ಮೀನುಗಳ ಸಂತಾನೋತ್ಪತ್ತಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲು ಮತ್ತು ಸೂಕ್ತವಾದ ಸಾಧನಗಳನ್ನು ಬಳಸಲು ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ  ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com