ಧಾರವಾಡ: ಕ್ರಿಕೆಟ್ ಆಡುತ್ತಿದ್ದ 16 ವರ್ಷದ ಬಾಲಕನಿಗೆ ವಿದ್ಯುತ್ ಸ್ಪರ್ಶ, ಸಾವು

ವಿದ್ಯುತ್ ಸ್ಪರ್ಶಿಸಿ  ಕ್ರಿಕೆಟ್ ಆಡುತ್ತಿದ್ದ 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹತ್ತಿರದ ನಿರ್ಮಾಣದ ಸ್ಥಳವೊಂದರಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ.
ಸಾವನ್ನಪ್ಪಿದ್ದ ಬಾಲಕ
ಸಾವನ್ನಪ್ಪಿದ್ದ ಬಾಲಕ

ಧಾರವಾಡ: ವಿದ್ಯುತ್ ಸ್ಪರ್ಶಿಸಿ  ಕ್ರಿಕೆಟ್ ಆಡುತ್ತಿದ್ದ 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹತ್ತಿರದ ನಿರ್ಮಾಣದ ಸ್ಥಳವೊಂದರಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ.

ಚೆಂಡನ್ನು ತರಲು ಹೋದ ಶ್ರೇಯಸ್ ಎಸ್ ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ  ಆತ ಮೃತಪಟ್ಟಿದ್ದಾನೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಮೀಪವೇ ವಿದ್ಯುತ್ ಲೈನ್ ಹಾದು ಹೋಗಿರುವುದು ಇಲ್ಲಿನ ಮಕ್ಕಳಿಗೆ ತಿಳಿದಿದೆ. ಚೆಂಡನ್ನು ಪಡೆಯುವಾಗ ಬಾಲಕನಿಗೆ ಆಕಸ್ಮಿಕವಾಗಿ 11ಕೆವಿ ತಂತಿ ಸ್ಪರ್ಶಿಸಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜೆ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಏಕಾಏಕಿ ಸಹಾಯಕ್ಕಾಗಿ ಕಿರುಚಲು ಆರಂಭಿಸಿದ್ದಾರೆ. ಆಗ ಜನರು ಸ್ಥಳಕ್ಕೆ ಧಾವಿಸಿದಾಗ, ಬಾಲಕ ಮಲಗಿದ್ದನ್ನು ನೋಡಿದ್ದು, ಆತ ಜೀವಂತವಾಗಿದ್ದನು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com