‘ನಮ್ಮ ಮೆಟ್ರೊ’ದಲ್ಲಿ ಶೂಟಿಂಗ್ ಗೆ ಅವಕಾಶ: ಬಿಎಂಆರ್‌ಸಿಎಲ್‌ ಮಾರ್ಗಸೂಚಿ ಪ್ರಕಟ

ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ತನ್ನ ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ಶುಲ್ಕಪರಿಷ್ಕರಿಸಿದೆ ಮತ್ತು ಹೊಸ ನಿಯಮಗಳೊಂದಿಗೆ ಬಂದಿದೆ. ‘ನಮ್ಮ ಮೆಟ್ರೊ’ದಲ್ಲಿ ಸಿನಿಮಾ, ಕಿರುಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ನೀಡಿ ಬಿಎಂಆರ್‌ಸಿಎಲ್‌ ಮಾರ್ಗಸೂಚಿ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ತನ್ನ ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ಶುಲ್ಕಪರಿಷ್ಕರಿಸಿದೆ ಮತ್ತು ಹೊಸ ನಿಯಮಗಳೊಂದಿಗೆ ಬಂದಿದೆ. ‘ನಮ್ಮ ಮೆಟ್ರೊ’ದಲ್ಲಿ ಸಿನಿಮಾ, ಕಿರುಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ನೀಡಿ ಬಿಎಂಆರ್‌ಸಿಎಲ್‌ ಮಾರ್ಗಸೂಚಿ ಪ್ರಕಟಿಸಿದೆ.

ಚೆನ್ನೈ ಹಾಗೂ ದೆಹಲಿ ಮೆಟ್ರೊದಲ್ಲಿ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶವಿತ್ತು. ಅದರಂತೆ ಇನ್ನು ಮುಂದೆ ನಮ್ಮ ಮೆಟ್ರೊ ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಗಲಿದೆ. ಚಿತ್ರೀಕರಣಕ್ಕೆ ಅವಕಾಶ ನೀಡಬೇಕೆಂದು ಕನ್ನಡ ಚಲನ ಚಿತ್ರೋದ್ಯಮದ ಸದಸ್ಯರು ,ಈ ಹಿಂದೆ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದರು. ಮನವಿಗೆ ಈಗ ಒಪ್ಪಿಗೆ ಸಿಕ್ಕಿದೆ.

ಮೆಟ್ರೊ ರೈಲು ಹಾಗೂ ನಿಲ್ದಾಣಕ್ಕೆ ಯಾವುದೇ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ದಟ್ಟಣೆ ಅಲ್ಲದ ಅವಧಿಯಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ಸಿಗಲಿದೆ. ಚಿತ್ರೀಕರಣದ ವೇಳೆ ಪ್ರಯಾಣಿಕರಿಗೆ ತೊಂದರೆ ಆಗಬಾರದು. ಚಿತ್ರೀಕರಣ ಸಮಯದಲ್ಲಿ ಭದ್ರತೆ ಒದಗಿಸಲು ಹೆಚ್ಚುವರಿ ಪೊಲೀಸರು ಮತ್ತು ಗೃಹರಕ್ಷಕರನ್ನು ನಿಯೋಜಿಸಬೇಕು.

ಮೆಟ್ರೊ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ದಿನಕ್ಕೆ 6 ಲಕ್ಷ ಡೆಪಾಸಿಟ್ ಹಾಗೂ ಒಂದು ತಾಸಿಗೆ 50 ಸಾವಿರ ಹಣ ಮುಂಗಡವಾಗಿ ಪಾವತಿಸಬೇಕು. ಕನ್ನಡ ಚಲನಚಿತ್ರಗಳಿಗೆ ಶೇ 25 ರಿಯಾಯಿತಿ ಇರಲಿದೆ. ಚಿತ್ರೀಕರಣ ಮಾಡಲು ಆಸಕ್ತಿ ಹೊಂದಿರುವ ಚಲನಚಿತ್ರ ಮತ್ತು ಧಾರಾವಾಹಿ ತಂಡಗಳು ಬಿಎಂಆರ್‌ಸಿಎಲ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಚಿತ್ರೀಕರಣಕ್ಕಾಗಿ ಅರ್ಜಿಯನ್ನು ಭಾರತೀಯ ಪ್ರಜೆಗಳು 30 ದಿನಗಳ ಮುಂಚಿತವಾಗಿ ಮತ್ತು ವಿದೇಶಿ ಪ್ರಜೆಗಳು 60 ದಿನಗಳ ಮುಂಚಿತವಾಗಿ ವಿವರವಾದ ಸ್ಕ್ರಿಪ್ಟ್‌ನೊಂದಿಗೆ ಸಲ್ಲಿಸಬೇಕಾಗುತ್ತದೆ. ಪೂರ್ವಾನುಮತಿ ಇಲ್ಲದೆ ಟ್ರ್ಯಾಕ್‌ಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುವುದಿಲ್ಲ ಮತ್ತು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.

ದೇಶ ಅಥವಾ ರಾಜ್ಯ ಅಥವಾ ನಮ್ಮ ಮೆಟ್ರೋದ ಇಮೇಜ್ ಗೆ ಹಾನಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ. (ರೈಲು) ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ರವರೆಗೆ, ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ರಾತ್ರಿ 9 ರಿಂದ ರಾತ್ರಿ 11 ರವರೆಗೆ ಮಾತ್ರ ಲಭ್ಯವಿರುತ್ತದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.. ಶೂಟ್‌ಗಾಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಲಾಗುವುದು ಮತ್ತು ಕೆಲಸ ಮಾಡುವವರು ಶುಲ್ಕವನ್ನು ಭರಿಸಬೇಕು. ಶೂಟಿಂಗ್ ಉದ್ದೇಶಗಳಿಗಾಗಿ ರೈಲಿನೊಳಗೆ ಅಪಾಯಕಾರಿ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ.

ಡ್ರೋನ್‌ನಿಂದ ಶೂಟ್ ಮಾಡಿದರೆ, ಶೇ, 25 ತೆರಿಗೆ ಹೆಚ್ಚುವರಿಯಾಗಿರುತ್ತದೆ. ಚಲನಚಿತ್ರ ಚಿತ್ರೀಕರಣಕ್ಕೆ 5 ಕೋಟಿ ಮತ್ತು ಸಾಕ್ಷ್ಯಚಿತ್ರಗಳಿಗೆ 2.5 ಕೋಟಿ ರೂಪಾಯಿಗಳ ಸಮಗ್ರ ಸಾಮಾನ್ಯ ಹೊಣೆಗಾರಿಕೆ ವಿಮೆಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಮೆಟ್ರೋ ಸ್ವತ್ತುಗಳು, ಅದರ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಒಳಗೊಳ್ಳುತ್ತದೆ.

ಬಿಡುಗಡೆಗೂ ಮುನ್ನ ಚಲನಚಿತ್ರವನ್ನು BMRCL ನಲ್ಲಿ ಅಂತಿಮ ರೂಪದಲ್ಲಿ ಪ್ರದರ್ಶಿಸಬೇಕು ಮತ್ತು 'ಎನ್ ಒಸಿ' ಪ್ರಮಾಣಪತ್ರವನ್ನು ಪಡೆಯಬೇಕು ಎಂದು ತಿಳಿಸಿದೆ. ಮೆಟ್ರೋ ಆವರಣದೊಳಗೆ ಚಿತ್ರೀಕರಣವನ್ನು ಅನುಮತಿಸಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು ಮತ್ತೆ  ಅದನ್ನು ಪುನರಾರಂಭಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com