ನಮ್ಮ ಮೆಟ್ರೋದಿಂದ 'ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್‌' ಪರಿಚಯ: ಹೊಸ ಸೌಲಭ್ಯ ನ.16 ರಿಂದ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನವೆಂಬರ್ 16 ರಿಂದ ಜಾರಿಗೆ ಬರುವಂತೆ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್‌ ಗಳನ್ನು ಪರಿಚಯಿಸುವುದಾಗಿ ಶನಿವಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನವೆಂಬರ್ 16 ರಿಂದ ಜಾರಿಗೆ ಬರುವಂತೆ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್‌ ಗಳನ್ನು ಪರಿಚಯಿಸುವುದಾಗಿ ಶನಿವಾರ ತಿಳಿಸಿದೆ.

ಪ್ರಸ್ತುತ ಮೊಬೈಲ್‌ ಕ್ಯೂಆರ್‌ ಟಿಕೆಟ್‌ಗಳನ್ನು ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್‌ ನೀಡಲಾಗುತ್ತಿದೆ. ಗುಂಪು ಟಿಕೆಟ್‌ಗಳನ್ನೂ ಕ್ಯೂಆರ್‌ ಕೋಡ್‌ ಮೂಲಕ ನೀಡಬೇಕು ಎಂದು ಪ್ರಯಾಣಿಕರಿಂದ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮೊಬೈಲ್‌ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಜಾರಿಗೆ ತರಲಾಗಿದೆ. ಈ ಟಿಕೆಟ್‌ಗಳು ಟೋಕನ್‌ ದರಕ್ಕಿಂತ ಶೇ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತದೆ.

ಟಿಕೆಟ್‌ ಕೌಂಟರ್‌ಗಳಲ್ಲಿ ಟೋಕನ್‌ ಖರೀದಿಸಲು ಸರತಿ ನಿಲ್ಲುವುದನ್ನು ತಪ್ಪಿಸಲು, ಪ್ರಯಾಣಿಕರು ಮನೆ, ಕಚೇರಿ ಸಹಿತ ತಾವಿರುವ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರ ಸಂಖ್ಯೆಗೆ ಎನ್‌ಕ್ರಿಪ್ಟ್ ಮಾಡಿದ ಕ್ಯೂಆರ್ ಟಿಕೆಟ್ ಬರುತ್ತದೆ. ಈ ಕ್ಯೂಆರ್ ಟಿಕೆಟ್ ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಎಫ್‌ಸಿ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ.

“ಟಿಕೆಟ್ ಕೌಂಟರ್‌ಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು, ಪಯಾಣಿಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಮನೆ/ಕಚೇರಿಯಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com