ಬೆಂಗಳೂರು: ಪೀಕ್-ಅವರ್ ನಲ್ಲಿ ತುಂಬಿ ತುಳುಕುತ್ತೆ ನಮ್ಮ ಮೆಟ್ರೋ; 2ನೇ ಮಹಿಳಾ ಕೋಚ್ ಗೆ ಬೇಡಿಕೆ

ಒಂದು ಕಾಲದಲ್ಲಿ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದ ಪ್ರಯಾಣವಾಗಿದ್ದ ನಮ್ಮ ಮೆಟ್ರೋದ ಸವಾರಿ ಈಗ, ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಸುತ್ತಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಒಂದು ಕಾಲದಲ್ಲಿ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದ ಪ್ರಯಾಣವಾಗಿದ್ದ ನಮ್ಮ ಮೆಟ್ರೋದ ಸವಾರಿ ಈಗ, ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಸುತ್ತಾರೆ. 

ಕೆಆರ್ ಪುರ-ಬೈಯಪ್ಪನಹಳ್ಳಿ ಮಾರ್ಗವನ್ನು ಆರಂಭಿಸಿ 45 ದಿನಗಳು ಕಳೆದಿವೆ. ನವೆಂಬರ್‌ನಲ್ಲಿ ದಿನಕ್ಕೆ ಸರಾಸರಿ 6.5 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆದರೆ 73.81 ಕಿಮೀ ಮಾರ್ಗವನ್ನು ಕವರ್ ಮಾಡಲು ಕೇವಲು 52 ರೈಲುಗಳಿದ್ದು, ಸದ್ಯಕ್ಕೆ ಬೇರೆ ಪರಿಹಾರ ಕಾಣುತ್ತಿಲ್ಲ.

ಪ್ಲಾಟ್‌ಫಾರ್ಮ್‌ಗಳಲ್ಲಿರುವ ಭದ್ರತಾ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ ರೈಲುಗಳ ಒಳಗೆ ಮತ್ತು ಹೊರಗೆ ಹೋಗುವ ಜನಸಂದಣಿಯನ್ನು ನಿಯಂತ್ರಿಸಲು ಪರದಾಡುತ್ತಿದ್ದಾರೆ. ಕೆಲವು ಸಿಬ್ಬಂದಿ ಸ್ವಯಂ ಚಾಲಿತ ಬಾಗಿಲುಗಳನ್ನು ಮುಚ್ಚಲು ಜನರನ್ನು ತಳ್ಳಬೇಕಾಗುತ್ತಿದೆ. ಅನೇಕ ನಿಲ್ದಾಣಗಳಲ್ಲಿ, ಬೋಗಿಗಳೊಳಗಿನ ಪ್ರಯಾಣಿಕರು ಹತ್ತಲು ಪ್ರಯತ್ನಿಸುವವರಿಗೆ "ಜಾಗ ಇಲ್ಲಾ, ಜಾಗ ಇಲ್ಲ" ಎಂದು ಕಿರುಚುತ್ತಾರೆ. ಪ್ರತಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಹತ್ತಲು ವಿಫಲರಾದವರು ಮುಂದಿನ ರೈಲಿಗಾಗಿ ಕಾಯಬೇಕಾಗುತ್ತದೆ.

ಮೆಟ್ರೋ ಪ್ರಯಾಣದ ಅನುಭವ ಕುರಿತು ಎರಡೂ ಮಾರ್ಗಗಳಲ್ಲಿ ಹಲವಾರು ಪ್ರಯಾಣಿಕರೊಂದಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾತನಾಡಿದ್ದು, ''ಮೊದಲು ಪ್ರತಿ ರೈಲಿನಲ್ಲಿ ಮಹಿಳೆಯರಿಗೆ ಮತ್ತೊಂದು ಕೋಚ್ ಮೀಸಲಿಡಿ. ಅವರು ನಜ್ಜುಗುಜ್ಜಾಗುವ ರೀತಿಯನ್ನು ನೋಡಿದರೆ ನನಗೆ ದುಃಖವಾಗುತ್ತದೆ. ಮೆಟ್ರೋದಲ್ಲಿ ಈ ರೀತಿ ಪ್ರಯಾಣಿಸಲು ಹೇಗೆ ಅನುಮತಿಸಲಾಗಿದೆ? 80 ಮತ್ತು 90 ರ ದಶಕದಲ್ಲಿ ಬಿಟಿಎಸ್ ಬಸ್‌ಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತಿದ್ದವು ಎಂದು ಹಿರಿಯ ನಾಗರಿಕ ರಾಕೇಶ್ ಗೌಡ ಅವರು ಹೇಳಿದ್ದಾರೆ.

ಪೀಕ್ ಅವರ್‌ನಲ್ಲಿ ಮಹಿಳಾ ಕೋಚ್‌ನಲ್ಲಿ ಒಂದು ಇಂಚು ಕೂಡ ಜಾಗ ಇರುವುದಿಲ್ಲ. ಹೀಗಾಗಿ ನಾನು ಜನರಲ್ ಕೋಚ್‌ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕಳೆದ ಒಂದು ತಿಂಗಳಿನಿಂದ ಬಹಳ ಕಷ್ಟಪಟ್ಟು ಪ್ರಯಾಣಿಸುತ್ತಿದ್ದೇನೆ ಎಂದು ಎಂಜಿ ರಸ್ತೆಯಿಂದ ದೀಪಾಂಜಲಿ ನಗರಕ್ಕೆ ಪ್ರತಿದಿನ ಪ್ರಯಾಣಿಸುವ ರುಕ್ಸಾನಾ ಖನ್ನಾ ಹೇಳಿದ್ದಾರೆ.

ವಿಧಾನಸೌಧದಿಂದ ಜಯನಗರದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದ ಮೂವರು ಸಹೋದ್ಯೋಗಿಗಳು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣದಲ್ಲಿ ರೈಲು ಬದಲಾಯಿಸಲು ಧಾವಿಸುತ್ತಿದ್ದವನ್ನು ಮಾತನಾಡಿಸಿದ TNIE, ನಿಮಗೆ ಕುಳಿತುಕೊಳ್ಳಲು ಸ್ಥಳವಿದೆಯೇ ಎಂದು ಕೇಳಿದಾಗ, ಅವರು ನಗಲು ಪ್ರಾರಂಭಿಸಿದರು. “ನಮಗೆ ನಿಲ್ಲಲು ಸಹ ಒಂದು ಇಂಚು ಜಾಗ ಇರಲ್ಲ. ಆಸನದ ಬಗ್ಗೆ ಯೋಚಿಸುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಸರ್ಕಾರಕ್ಕೆ ಒಂದೇ ಒಂದು ಮನವಿ: ದಯವಿಟ್ಟು ರೈಲುಗಳ ನಡುವಿನ ಸಮಯವನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com