ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೆಡಿ, ಸ್ಟೆಡಿ.. ಗೋ... ಕರಾವಳಿಯ ಕಂಬಳಕ್ಕೆ ಬೆಂಗಳೂರು ಸಜ್ಜು: ಇಂದಿನಿಂದ ಆರಂಭ

ಉದ್ಯಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿ ಕರಾವಳಿಯ ಕಂಬಳಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳು ಔಪಚಾರಿಕವಾಗಿ ಶುರುವಾಗಲಿವೆ. ಎರಡು ದಿನಗಳ ಕಾಲ ಬೆಂಗಳೂರು ಕಂಬಳ ನಡೆಯಲಿದೆ.
Published on

ಬೆಂಗಳೂರು: ಉದ್ಯಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿ ಕರಾವಳಿಯ ಕಂಬಳಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳು ಔಪಚಾರಿಕವಾಗಿ ಶುರುವಾಗಲಿವೆ. ಎರಡು ದಿನಗಳ ಕಾಲ ಬೆಂಗಳೂರು ಕಂಬಳ ನಡೆಯಲಿದೆ.

ವಿಶೇಷ ರೇಸ್ ಟ್ರ್ಯಾಕ್ ರಚಿಸಲು 1,000 ಕಾರ್ಮಿಕರು ಶ್ರಮಿಸುತ್ತಿದ್ದು, 15 ಲಕ್ಷ ರೂಪಾಯಿಗಳ ಖರ್ಚು ಮಾಡಲಾಗಿದೆ, ಶನಿವಾರ ಮತ್ತು ಭಾನುವಾರ ಕೆಸರು ಗದ್ದೆಯಲ್ಲಿ ಕೋಣಗಳ ಓಟ ಆರಂಭವಾಗಲಿದೆ.

ಕಂಬಳ ಎಂದರೆ ಭತ್ತ ಬೆಳೆಯುವ ಕೆಸರಿನ ಗದ್ದೆ. 1800 ರ ದಶಕದಿಂದಲೂ 'ಕೋಣಗಳ'  ಓಟವು ಜನಪ್ರಿಯ ಕ್ರೀಡೆ ಮನರಂಜನಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವುದರಿಂದ ಮಡ್ಡಿ ಕಂಬಳದ ಸಾರವು ನಗರದಾದ್ಯಂತ ಹರಡುತ್ತದೆ ಎಂದು  ಕಂಬಳ ಅಕಾಡೆಮಿ ಅಧ್ಯಕ್ಷ ಪ್ರಾಧ್ಯಾಪಕ ಕೆ.ಗುಣಪಾಲ ಕದಂಬ ಹೇಳಿದ್ದಾರೆ.

ರೇಸ್ ಟ್ರ್ಯಾಕ್ ಸಾಮಾನ್ಯವಾಗಿ 145 ಮೀಟರ್ ಉದ್ದವಿರುತ್ತದೆ, ಆದರೆ, ಈ ಬಾರಿ ಅದನ್ನು 155 ಮೀಟರ್‌ಗೆ ವಿಸ್ತರಿಸಲಾಗಿದ್ದು, ಸಮಯವನ್ನು ನಿಖರವಾಗಿ ಓದಲು ಸಂಪೂರ್ಣ ಸ್ವಯಂಚಾಲಿತ ಸಮಯ (ಎಫ್‌ಎಟಿ) ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಸ್ಪರ್ಧೆಯ ಸಮಯದಲ್ಲಿ ಯಾವುದೇ ಗೊಂದಲ, ವಿವಾದಗಳು ಉಂಟಾಗದಂತೆ ಮಾಡಲು ‘ಲೇಸರ್‌ ಬೀಮ್‌ ನೆಟ್‌ವರ್ಕ್‌ ಸಿಸ್ಟಂ ವಿತ್‌ ಎಲೆಕ್ಟ್ರಾನಿಕ್‌ ಟೈಮಿಂಗ್ಸ್‌’ ಅಳವಡಿಸಲಾಗಿದೆ. ಗುರಿ ಮುಟ್ಟಿದ ಕೂಡಲೇ ಲೇಸರ್‌ ದೀಪ ಉರಿಯುವುದಲ್ಲದೇ ಎಷ್ಟು ಸೆಕೆಂಡ್ಸ್‌ನಲ್ಲಿ ತಲುಪಿವೆ ಎಂಬುದನ್ನೂ ಅದು ತೋರಿಸುತ್ತದೆ. ಇದರಿಂದ ಸೋತವರಿಗೂ ತಮ್ಮ ಕೋಣಗಳು ಎಷ್ಟು ವೇಗವಾಗಿ ಓಡಿವೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಕಂಬಳ ಸಮಿತಿಯು ಪ್ರಥಮ ಬಾರಿಗೆ ನಗರದಲ್ಲಿ ಕಂಬಳ ಆಯೋಜಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ 18 ಲಕ್ಷ ಜನರಲಲ್ಲಿ ಖುಷಿ ತಂದಿದೆ, ಮೊದಲ ಬಾರಿಗೆ, ಜನರು ತುಳು ಸಂಸ್ಕೃತಿ, ಸಂಗೀತ, ನೃತ್ಯ ಮತ್ತು ಆಹಾರವನ್ನು ಅನುಭವಿಸುತ್ತಾರೆ ಮತ್ತು ಮೊದಲ ಬಾರಿಗೆ ಓಟವನ್ನು ವೀಕ್ಷಿಸುತ್ತಾರೆ. ಹಣಾಹಣಿಯ ಒಂದು ದಿನ ಮುಂಚಿತವಾಗಿ, ಜಾಕಿಗಳು ಕೋಣಗಳಿಗೆಸ್ನಾನ ಮಾಡಿಸಿ ಮತ್ತು ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಿದ್ದಪಡಿಸುತ್ತಿದ್ದಾರೆ.

ಓಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಸಮಿತಿಗಳು ನಗರದಲ್ಲಿ ಜಮಾಯಿಸಿವೆ. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳದ ಕ್ರೇಜ್‌ಗೆ ‘ಕಾಂತಾರ’ ಸಿನಿಮಾ ಕಾರಣವಾಗಿದೆ ಎಂದಿದ್ದಾರೆ.

ಕಂಬಳ ನಡೆಯುವ ಅರಮನೆ ಮೈದಾನದಲ್ಲಿ ಅಂಬ್ಯುಲೆನ್ಸ್‌ಗಳು, ಪ್ರೇಕ್ಷಕರಿಗೆ ಮೀಸಲಾದ ಗ್ಯಾಲರಿಗಳು, ಆಹಾರ ಮಳಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ಸಭಾಂಗಣವನ್ನು ಸಜ್ಜುಗೊಳಿಸಲಾಗಿದೆ. 10 ಲಕ್ಷ ಜನರು ಕಂಬಳವನ್ನು ಉಚಿತವಾಗಿ ಅನುಭವಿಸುವ ನಿರೀಕ್ಷೆಯಲ್ಲಿದ್ದಾರೆ.

ಭಾರತೀಯ ಪ್ರಾಣಿಗಳ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟದ (ಎಫ್‌ಐಎಪಿಒ) ಸಿಇಒ ಭಾರತಿ ರಾಮಚಂದ್ರನ್ ಮಾತನಾಡಿ, ಯಾವುದೇ ರೀತಿಯ ಮನರಂಜನೆ ಅಥವಾ ಕ್ರೀಡೆಗೆ ಪ್ರಾಣಿಗಳನ್ನು ಬಳಸುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕೋಣಗಳು ದೈಹಿಕವಾಗಿ ಓಟಕ್ಕೆ ಸೂಕ್ತವಲ್ಲ. ಈ  ರೀತಿಯ  ಅಭ್ಯಾಸಗಳು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ಉಲ್ಲಂಘಿಸುತ್ತವೆ, ಇದು ಹಿಂದೆ ಕಂಬಳವನ್ನು ನಿಷೇಧಿಸಲು ಕಾರಣವಾಯಿತು ಎಂದಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com