ತೃತೀಯ ಲಿಂಗಿಯ ರೂ.10 ಲಕ್ಷಕ್ಕೂ ಅಧಿಕ ಮೌಲ್ಯದ  50 ಕುರಿ, ಮೇಕೆ ಕಳ್ಳತನ, ಕಳ್ಳರ ಬಂಧನಕ್ಕೆ ಒತ್ತಾಯ

ತೃತೀಯ ಲಿಂಗಿಯೊಬ್ಬರ ಜಮೀನಿನಲ್ಲಿ ರೂ. 10 ಲಕ್ಷಕ್ಕೂ ಅಧಿಕ ಮೌಲ್ಯದ 50 ಮೇಕೆಗಳು ಮತ್ತು ಕುರಿಗಳ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು,  ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಪತ್ತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. 
ಅರುಂಧತಿ
ಅರುಂಧತಿ

ಚಿತ್ರದುರ್ಗ: ತೃತೀಯ ಲಿಂಗಿಯೊಬ್ಬರ ಜಮೀನಿನಲ್ಲಿ ರೂ. 10 ಲಕ್ಷಕ್ಕೂ ಅಧಿಕ ಮೌಲ್ಯದ 50 ಮೇಕೆಗಳು ಮತ್ತು ಕುರಿಗಳ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು,  ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಪತ್ತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

 ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬರಮಸಾಗರ ಗ್ರಾಮದ ನಿವಾಸಿಯಾಗಿರುವ ತೃತೀಯಲಿಂಗಿ ಅರುಂಧತಿ ಡೈರಿ ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಆದಾಗ್ಯೂ, ಅಕ್ಟೋಬರ್ 26 ರಂದು 50   ಕುರಿ ಮತ್ತು ಮೇಕೆಗಳು, 100 ಕ್ಕೂ ಹೆಚ್ಚು ಕೋಳಿಗಳು ಕಳ್ಳತನವಾದ ನಂತರ ಆಕೆಯ ಬದುಕು ಆತಂತ್ರವಾಗಿದೆ.

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಅರುಂಧತಿ, ''ದೂರು ದಾಖಲಾಗಿದ್ದರೂ ಬರಮಸಾಗರ ಪೊಲೀಸರು ಇನ್ನೂ ಕ್ರಮಕೈಗೊಂಡಿಲ್ಲ. ಸ್ವಾವಲಂಬಿ ಜೀವನ ನಡೆಸಬೇಕೆಂದು ಬಯಸಿದ್ದೆ ಆದರೆ ರೂ. 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಲ್ಲಾ ಜಾನುವಾರುಗಳನ್ನು ಕಳೆದುಕೊಂಡಿದ್ದೇನೆ. ಪೊಲೀಸರಿಗೆ ಇನ್ನೂ ಕಳ್ಳರನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಸೋಮವಾರ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಲಿದ್ದು, ಕ್ರಮ ಕೈಗೊಳ್ಳಲು ಕಾರ್ಯ ವ್ಯಾಪ್ತಿಯ ಪೊಲೀಸರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com