ಕರ್ನಾಟಕ, ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಸಿರಿನ ಪ್ರಮಾಣದಲ್ಲಿ ಇಳಿಕೆ!

ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿನ “ಕಠಿಣ ಪರಿಸ್ಥಿತಿ” ಕುರಿತು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಸಂಶೋಧಕರು ಮತ್ತು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿನ “ಕಠಿಣ ಪರಿಸ್ಥಿತಿ” ಕುರಿತು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಸಂಶೋಧಕರು ಮತ್ತು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 

ಐಐಎಸ್‌ಸಿಯ ಪ್ರಕಾರ, ಎರಡೂ ರಾಜ್ಯಗಳ ಜಲಾನಯನ ಪ್ರದೇಶದಲ್ಲಿ ಹಸಿರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ ಮತ್ತು ಕೃಷಿ ಸಾಗುವಳಿ ಪ್ರದೇಶ ಹೆಚ್ಚಾಗಿದೆ. ಇದರಿಂದಾಗಿ ಎರಡು ರಾಜ್ಯಗಳಲ್ಲಿ ನೀರಿನ ಬೇಡಿಕೆ ಹೆಚ್ಚಿದೆ.

ಮಂಗಳವಾರ ಬಿಡುಗಡೆಯಾದ ‘ಕಾವೇರಿ ನದಿ: ಭೂ ಬಳಕೆ ಡೈನಾಮಿಕ್ಸ್ ಜೀವವೈವಿಧ್ಯ ಮತ್ತು ಜಲವೈಜ್ಞಾನಿಕ ಸ್ಥಿತಿ’ ಎಂಬ ವರದಿಯಲ್ಲಿ, 1965ರಿಂದ 2016ರ ನಡುವೆ ಅರಣ್ಯದ ಪ್ರಮಾಣ ಕಡಿಮೆಯಾಗಿದೆ ಮತ್ತು ನೀರಿನ ಬೇಡಿಕೆ ಹೆಚ್ಚಳದ ಬಗ್ಗೆ ವಿವರಿಸಲಾಗಿದೆ.

2016ರಿಂದ ಇಲ್ಲಿಯವರೆಗೆ ಎರಡೂ ರಾಜ್ಯಗಳಲ್ಲಿ ಪ್ರತಿ ವರ್ಷ ಕೃಷಿ ಪ್ರದೇಶ ಶೇ. 2 ರಷ್ಟು ಹೆಚ್ಚಳವಾಗಿದೆ. ಇದು ನೀರಿನ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿಯ ಸಹ ಲೇಖಕ ಪ್ರೊ.ಟಿ.ವಿ.ರಾಮಚಂದ್ರ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೂರು ತಿಂಗಳೊಳಗೆ ಅಂತಿಮ ವರದಿ ಬಿಡುಗಡೆಯಾಗಲಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಿವೆ ಎಂದು ಪ್ರಾಥಮಿಕ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇದಲ್ಲದೆ, ಎರಡೂ ರಾಜ್ಯಗಳಲ್ಲಿ ಕೆರೆಗಳ ಹೂಳು ತೆಗೆಯಲಾಗಿಲ್ಲ. ಈ ಕಾರಣದಿಂದಾಗಿ, ಅವರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಇದು ಸಹ ನೀರಿನ ಕಠಿಣ ಪರಿಸ್ಥಿತಿಗೆ ಕಾರಣವಾಗುತ್ತದೆ. ಅಧಿಕಾರಿಗಳು ಸಕಾಲದಲ್ಲಿ ಕೆರೆಗಳ ಹೂಳು ತೆಗೆಯುತ್ತಿದ್ದರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿತ್ತು ಎಂದಿದ್ದಾರೆ.

ನೈಸರ್ಗಿಕ ಸಸ್ಯವರ್ಗದ ವ್ಯಾಪ್ತಿಯು 28194 ಚ.ಕಿ.ಮೀ.ನಿಂದ 15345 ಚ.ಕಿ.ಮೀ.ಗೆ ಇಳಿಕೆಯಾಗಿದೆ. ಇದು ಕಳೆದ ಐದು ದಶಕಗಳಲ್ಲಿ ಶೇ. 45.55 ರಷ್ಟು ಅರಣ್ಯ ನಷ್ಟವನ್ನು ಸೂಚಿಸುತ್ತದೆ. ಕರ್ನಾಟಕವು 57 ರಷ್ಟು (9664 ಚದರ ಕಿಮೀ) ಮತ್ತು ತಮಿಳುನಾಡು ಶೇ. 29 ರಷ್ಟು (2905 ಚದರ ಕಿಮೀ) ಅರಣ್ಯ ಕಳೆದುಕೊಂಡಿವೆ. ಈ ಅವಧಿಯಲ್ಲಿ ಕೇರಳ ಶೇ. 27 ರಷ್ಟು (279 ಚದರ ಕಿಮೀ) ನೈಸರ್ಗಿಕ ಸಸ್ಯವರ್ಗವನ್ನು ಕಳೆದುಕೊಂಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೆಚ್ಚಳ
ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ ಎಂದು ವರದಿ ಹೇಳಿದೆ.

ತಮಿಳುನಾಡಿನಲ್ಲಿ, ಈ ದಶಕದವರೆಗೆ ನೀರಾವರಿ ಪ್ರದೇಶ 6556 ಚದರ ಕಿಮೀ(13.8%) ನಿಂದ 20233 ಚದರ ಕಿಮೀ (42.7%) ಕ್ಕೆ ಏರಿದೆ. ಕರ್ನಾಟಕದಲ್ಲಿ ನೀರಾವರಿ ಪ್ರದೇಶ 1193 ಚದರ ಕಿಮೀ(3.42%) ನಿಂದ 8497 ಚದರ ಕಿಮೀ(24.3%) ಕ್ಕೆ ಏರಿಕೆಯಾಗಿದೆ.

ವರ್ಷಗಳು ಕಳೆದಂತೆ ನೀರಿನ ಬೇಡಿಕೆಯೂ ಹೆಚ್ಚಾಯಿತು. 1971 ರವರೆಗೆ ತಮಿಳುನಾಡಿನಲ್ಲಿ ನೀರಿನ ಬೇಡಿಕೆ 429 ಟಿಎಂಸಿಯಿಂದ ನಿಂದ 573 ಟಿಎಂಸಿಗೆ ಮತ್ತು ಕರ್ನಾಟಕದಲ್ಲಿ 72 ಟಿಎಂಸಿಯಿಂದ 171 ಟಿಎಂಸಿಗೆ ಹೆಚ್ಚಾಯಿತು ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com