ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ: ಖರೀದಿದಾರರಿಗೆ ನೆರವಿಗೆ ಬಂತು 'ಕ್ಯೂಆರ್ ಕೋಡ್'!

ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲಿ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದ್ದು, ಈ ನಡುವಲ್ಲೇ ಹಸಿರು ಪಟಾಕಿ ಬಗ್ಗೆ ತಿಳಿಯದ ಸಾಕಷ್ಟು ಮಂದಿ ಗೊಂದಲಗಳು ಗೊಂದಲಕ್ಕೊಳಗಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲf ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದ್ದು, ಈ ನಡುವಲ್ಲೇ ಹಸಿರು ಪಟಾಕಿ ಬಗ್ಗೆ ತಿಳಿಯದ ಸಾಕಷ್ಟು ಮಂದಿ ಗೊಂದಲಗಳು ಗೊಂದಲಕ್ಕೊಳಗಾಗಿದ್ದಾರೆ.

ಅನಾಥ ಮತ್ತು ನಿರ್ಗತಿಕರಿಗೆ ಪಟಾಕಿ ವಿತರಿಸುವ ಸಾಮಾಜಿಕ ಕಾರ್ಯಕರ್ತ ರಾಮಚಂದ್ರನ್ ಮಾತನಾಡಿ, ಹಸಿರು ಪಟಾಕಿಗಳ ಬಗ್ಗೆ ನನಗೆ ತಿಳಿದಿಲ್ಲ. ಅಂಗಡಿಗಳಲ್ಲಿ ಲಭ್ಯವಿರುವ ಪಟಾಕಿ ಬಾಕ್ಸ್ ಗಳನ್ನು ಖರೀದಿಸುತ್ತೇನೆ ಎಂದರು.

“ಕಳೆದ ದೀಪಾವಳಿಯಲ್ಲಿ ಹಸಿರು ಲೋಗೋ ಇರುವ ಪಟಾಕಿ ಬಾಕ್ಸ್ ಗಳನ್ನು ಖರೀದಿ ಮಾಡಲಾಗಿತ್ತು. ಅವುಗಳನ್ನು ಸಿಡಿಸುವಾಗ ಅವು ಸಾಮಾನ್ಯ ಪಟಾಕಿಗಳು ಎಂದುಕೊಂಡಿದ್ದೆವು ಎಂದು ತ್ಯಾಜ್ಯ ಕಾಗದವನ್ನು ಮರುಬಳಕೆ ಮಾಡುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವ ಅರ್ಬನ್ಸ್ ಸಂಸ್ಥಾಪಕ ವಿನೋದ್ ಜಯಪಾಲ್ ಹೇಳಿದ್ದಾರೆ.

ತಮಿಳುನಾಡಿನ ಪಟಾಕಿ ತಯಾರಕರ ಸಂಘದ ಉಪಾಧ್ಯಕ್ಷರೂ ಆಗಿರುವ ಅಯ್ಯನ್‌ ಪಟಾಕಿ ಕಾರ್ಖಾನೆ ಎಂಡಿ ಜಿ ಅಬಿರುಬೆನ್‌ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಶಿವಕಾಶಿಯಲ್ಲಿ ಪಟಾಕಿ ತಯಾರಕರು ಹಸಿರು ಪಟಾಕಿ ಉತ್ಪಾದನೆ ಮಾಡುತ್ತಿದ್ದಾರೆ. ಹಸಿರು ಲೋಗೋ ಹೊರತುಪಡಿಸಿ, ಈ ವರ್ಷ ನಾವು ‘ಕ್ಯೂಆರ್ ಕೋಡ್’ನೊಂದಿಗೆ ಬರುತ್ತಿದ್ದೇವೆಂದು ತಿಳಿಸಿದ್ದಾರೆ.

ಈ ಕ್ಯೂಆರ್ ಕೋಡ್'ನ್ನು ಸ್ಕ್ಯಾನ್ ಮಾಡಿದರೆ, ಶೇ.100ಕ್ಕೆ 100ರಷ್ಟು ಹಸಿರು ಪಟಾಕಿಗಳ ಮಾರಾಟ ಮಾಡುವ ಕಂಪನಿಗಳ ಪಟ್ಟಿ ನಿಮಗೆ ಸಿಗುತ್ತದೆ. ಅದರಲ್ಲಿ ಕಂಪನಿಯಿರುವ ಸ್ಥಳ ಹಾಗೂ ಇನ್ನಿತರೆ ವಿವರಗಳೂ ಕೂಡ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.

ಅಪಾಯಕಾರಿ ಪಟಾಕಿಗಳು ಇನ್ನೂ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು ಮಾರಾಟವಾಗದ ಪಟಾಕಿಗಳನ್ನು ಸಂಗ್ರಹಿಸಿಟ್ಟುಕೊಂಡಿರಬಹುದು. ಅವುಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ. ಆದರೆ, ಹಸಿರು ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚುತ್ತಿದೆ, ಮುಂದಿನ ದಿನಗಳಲ್ಲಿ ಹಸಿರು ಪಟಾಕಿಗಳು ಮಾತ್ರ ಇರುತ್ತವೆ ಎಂದರು.

ಹಸಿರು ಪಟಾಕಿಗಳು ಪರಿಸರ ಸ್ನೇಹಿಯಾಗಿದ್ದು ಸೀಸ, ಬೇರಿಯಂ, ಆರ್ಸೆನಿಕ್ ಮತ್ತು ಲಿಥಿಯಂ ಗಳು ಅದರಲ್ಲಿರುವುದಿಲ್ಲ. ಈ ಪಟಾಕಿಗಳು ಧೂಣಿನ ಕಣ ಮೇಲೇರಲು ಬಿಡುವುದಿಲ್ಲ. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಸಣ್ಣ ಶೆಲ್ ಗಾತ್ರವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ಹಸಿರು ಪಟಾಕಿಗಳ ಬಾಕ್ಸ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನ ಹಸಿರು ಲೋಗೋವನ್ನು ಹೊಂದಿರುತ್ತದೆ ಎಂದು ಮಾಹಿತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com