ಬೆಂಗಳೂರು: ಮನೆಗಳ್ಳತನ, ಅಪಹರಣ: ಐವರು ಡಕಾಯಿತರ ಬಂಧನ

ಐವರು ಡಕಾಯಿತರ ತಂಡವೊಂದು ಗಾರ್ವೆಭಾವಿಪಾಳ್ಯ ಬಳಿಯ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆ ಸೇರಿದಂತೆ ಮೂವರನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ 3.30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐವರು ಡಕಾಯಿತರ ತಂಡವೊಂದು ಗಾರ್ವೆಭಾವಿಪಾಳ್ಯ ಬಳಿಯ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆ ಸೇರಿದಂತೆ ಮೂವರನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ 3.30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ. 

ನಂತರ ಮನೆಯಲ್ಲಿದ್ದ ಒಬ್ಬರನ್ನು ಆಟೋದಲ್ಲಿ ಬಲವಂತವಾಗಿ ಕರೆದೊಯ್ದ ಮೂವರು ಆರೋಪಿಗಳು 5 ಲಕ್ಷ ರೂ. ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದರೆ, ಇಬ್ಬರು ಡರೋಡೆಕೋರರು ಸಂತ್ರಸ್ತರೊಂದಿಗೆ ಮನೆಯಲ್ಲಿಯೇ ಇದ್ದರು. ಆಟೋದಲ್ಲಿ ಹೋದ ವ್ಯಕ್ತಿಯೊಬ್ಬರನ್ನು ನೀಲಗಿರಿ ತೋಪಿನೊಳಗೆ, ನಂತರ ಕೂಡ್ಲು ಗೇಟ್ ಕಡೆಗೆ ಕರೆದೊಯ್ಯಲಾಗಿತ್ತು.  

ಆತ ಹಣ ಹೊಂದಿಸಲು ಕರೆ ಮಾಡುತ್ತಿದ್ದಾಗ, ಸ್ನೇಹಿತರೊಬ್ಬರು ಹತ್ತಿರ ಬರುತ್ತಿರುವುದನ್ನು ಕಂಡು ಸಹಾಯಕ್ಕಾಗಿ ಕಿರುಚಾಡಿದ್ದಾರೆ. ನಂತರ ಸ್ನೇಹಿತ ಆಟೊದತ್ತ ಧಾವಿಸಿದ ಬಳಿಕ ಪರಾರಿಯಾಗಿದ್ದ ಆರೋಪಿಗಳು, ಮನೆಯಲ್ಲಿದ್ದ ತಮ್ಮ ಸಹಚರರಿಗೆ ಕರೆ ಮಾಡಿ, ಅವರನ್ನೂ ಪರಾರಿಯಾಗುವಂತೆ ಹೇಳಿದ್ದಾರೆ. ಚಿನ್ನಾಭರಣ ಹಾಗೂ ಮೊಬೈಲ್‌ಗಳೊಂದಿಗೆ ತಂಡ ಪರಾರಿಯಾಗಿತ್ತು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರು ರೌಡಿಶೀಟರ್‌ಗಳಾಗಿದ್ದಾರೆ.

ಮರುದಿನ ಸಂತ್ರಸ್ತರಲ್ಲಿ ಒಬ್ಬರಾದ ನ್ಯೂ ಮೈಕೋ ಲೇಔಟ್‌ನ ನಿವಾಸಿ ಜಿಬಿ ಸತೀಶ್  ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಗಳು ಮನೆಯೊಳಗೆ ನುಗ್ಗಿದಾಗ ಸ್ನೇಹಿತ ರವಿಯೊಂದಿಗೆ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದೆ ಎಂದು ಸತೀಶ್ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಸತೀಶ್‌ನನ್ನು ಕರೆದುಕೊಂಡು ಹೋಗುವ ಮುನ್ನ ಮೂವರಿಂದ ಸುಮಾರು 1.95 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದರು. ದೂರುದಾರರು ವಿರೋಧಿಸಲು ಮುಂದಾದಾಗ ಟ್ಯೂಬ್ ಲೈಟ್‌ನಿಂದ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಆತನನ್ನು ಬೊಮ್ಮನಹಳ್ಳಿ ಸರ್ಕಲ್‌ಗೆ, ನಂತರ ಕೂಡ್ಲು ಗೇಟ್ ಕಡೆಗೆ ಕರೆದೊಯ್ದು ಅಲ್ಲಿ ಹಣದ ವ್ಯವಸ್ಥೆ ಮಾಡಲು ಫೋನ್ ನೀಡಿದ್ದರು. ಕರೆ ಮಾಡಲು ಆಟೋದಿಂದ ಹೊರಬಂದಾಗ ಆಕಸ್ಮಿಕವಾಗಿ ತನ್ನ ಸ್ನೇಹಿತನನ್ನು ನೋಡಿ ಸಹಾಯಕ್ಕಾಗಿ ಕೂಗಿದ್ದಾನೆ. ಐವರು ಆರೋಪಿಗಳ ಪೈಕಿ ಮೂವರು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ಗಳಾಗಿದ್ದು, ಅವರು ದೋಚಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com