ಸಾರ್ವಜನಿಕರು ಮೆಟ್ರೊ ರೈಲು ಬಳಕೆ ಹೆಚ್ಚಿಸಲು ಸಾರಿಗೆ ನೀತಿ ಬದಲಾವಣೆಗೆ ಒತ್ತಾಯ: ಡಿಸಿಎಂ ಜೊತೆ ಬಿಎಂಆರ್ ಸಿಎಲ್ ಸಭೆ

ನಮ್ಮ ಮೆಟ್ರೊದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಿಸುವ ನಿಟ್ಟಿನಲ್ಲಿ, ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಿಸುವ ನಿಟ್ಟಿನಲ್ಲಿ, ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪರ್ಮಿಟ್ ಶೇರ್ ಆಟೋಗಳು ಮತ್ತು ನಗರದೊಳಗೆ ಬಿಎಂಟಿಸಿ ಬಸ್ಸುಗಳ ಕಾರ್ಯಾಚರಣೆಯಲ್ಲಿ ಏಕಸ್ವಾಮ್ಯವನ್ನು ತೊಡೆದುಹಾಕಲು ಬಿಎಂಆರ್ ಸಿಎಲ್ ಬಯಸುತ್ತಿದೆ.

ಬ್ರಾಂಡ್ ಬೆಂಗಳೂರು ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಡಿಸಿಎಂ ಡಿ ಕೆ ಶಿವಕುಮಾರ್, ಸರ್ಕಾರ ಮತ್ತು ಪೊಲೀಸ್ ಇಲಾಖೆಗಳ ಪ್ರಸ್ತುತ ಮತ್ತು ಹಿಂದಿನ ಉನ್ನತ ಅಧಿಕಾರಿಗಳೊಂದಿಗೆ ಮೊನ್ನೆ ಸೋಮವಾರ ರಹಸ್ಯ ಸಭೆ ನಡೆಸಿದ್ದರು. 

ಈ ಬಗ್ಗೆ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಸಿಕ್ಕಿದ್ದು, ಈಗ ಜಾರಿಯಲ್ಲಿರುವ ಪುರಾತನ ಸಾರಿಗೆ ನೀತಿಯನ್ನು ಬದಲಾಯಿಸುವ ಅಗತ್ಯತೆಯ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಸಭೆಯಲ್ಲಿ ಡಿಸಿಎಂ ಅವರನ್ನು ಒತ್ತಾಯಿಸಿದ್ದಾರೆ. ಪ್ರತಿ ಮೆಟ್ರೋ ನಿಲ್ದಾಣದ 2 ಕಿಮೀ ವ್ಯಾಪ್ತಿಯಲ್ಲಿ ಶೇರ್ ಆಟೋಗಳಿಗೆ ಅನುಮತಿ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮೆಟ್ರೊ ನಿಲ್ದಾಣಗಳ ಸುತ್ತಮುತ್ತಲಲ್ಲಿ ಮಾತ್ರ ಇದಕ್ಕೆ ಅನುಮತಿ ನೀಡಬೇಕಾಗಿದ್ದು, ನಗರದಾದ್ಯಂತ ಅಗತ್ಯವಿಲ್ಲ. ಪ್ರಯಾಣ ದರವು 5 ಅಥವಾ 6 ರೂ.ಗಳಾಗಬಹುದು, ಇದರಿಂದಾಗಿ ಸಾರ್ವಜನಿಕರು ಕೊನೆಯ ಮೈಲಿ ಸಂಪರ್ಕವನ್ನು ಸುಲಭ ಮತ್ತು ಅಗ್ಗವಾಗಿಸಬಹುದು. ಅದು ಎಲೆಕ್ಟ್ರಿಕ್ ಬಸ್ಸು ಅಥವಾ ಪೆಟ್ರೋಲ್ ಬಸ್ಸುಗಳೂ ಆಗಿರಬಹುದು. 

ವೈಟ್‌ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣದ ಸಂಪರ್ಕವನ್ನು ನಗರದ ಉಳಿದ ಭಾಗಗಳೊಂದಿಗೆ ಸ್ಥಾಪಿಸಲಾಗಿದ್ದು, ಪ್ರಸ್ತುತ ಬಿಎಂಟಿಸಿ ಮಾತ್ರ ಹೊಂದಿರುವ ಸ್ಟೇಜ್ ಕ್ಯಾರೇಜ್ ಪರವಾನಗಿಯನ್ನು ಅಗತ್ಯವಿರುವ ಕೆಲವು ಖಾಸಗಿ ವ್ಯಕ್ತಿಗಳಿಗೆ ವಿಸ್ತರಿಸಬಹುದು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಪ್ರಸ್ತುತ, ಇತರ ನಿರ್ವಾಹಕರು ಕೇವಲ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆಗಳನ್ನು ಹೊಂದಿದ್ದಾರೆ ಅಂದರೆ ಅವರು ಖಾಸಗಿ ಸಂಸ್ಥೆಗಳ ಬಸ್‌ಗಳು ಮಾಡುವಂತೆ ಪಾಯಿಂಟ್ ಟು ಪಾಯಿಂಟ್ ಮಾತ್ರ ಕಾರ್ಯನಿರ್ವಹಿಸಬಹುದು. ಇದಕ್ಕೆ ಸಾರಿಗೆ ನೀತಿಯಲ್ಲಿಯೂ ಮಾರ್ಪಾಡು ಅಗತ್ಯವಿದೆ. ಐಟಿ ಸಂಸ್ಥೆಗಳ ಗುಂಪು ಒಟ್ಟಾಗಿ ಬಸ್ ನ್ನು ನಿರ್ವಹಿಸಬಹುದು ಸಾರ್ವಜನಿಕರು ಇಳಿಯಲು ಅಥವಾ ಹತ್ತಲು ಅಗತ್ಯವಿರುವ ನಿಲ್ದಾಣಗಳಲ್ಲಿ ನಿಲ್ಲಬಹುದು”ಎಂದು ಅವರು ವಿವರಿಸಿದರು. ಬಿಎಂಆರ್ ಸಿಎಲ್ ಶೀಘ್ರದಲ್ಲೇ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಗಳಿಂದ ಬೃಹತ್ ಬೇಡಿಕೆಯನ್ನು ಹೊಂದಲಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡಲು ಮತ್ತು ನಗರಕ್ಕೆ ಪ್ರವೇಶಿಸದಂತೆ ಮೆಟ್ರೋ ಜಾಲದ ಅಂತ್ಯಗೊಳ್ಳುವ ನಿಲ್ದಾಣಗಳ ಬಳಿ (ಪ್ರಸ್ತುತ ನಾಲ್ಕು) 10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಚಿವರು ಪ್ರಸ್ತಾಪಿಸಿದರು. ಬಿಎಂಟಿಸಿ ಬಸ್ಸುಗಳು ಅಲ್ಲಿಂದ ಹೊರಡಬಹುದು. ಇದರ ಜೊತೆಗೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ನ್ನು ಒದಗಿಸಬಹುದು, ಇದರಿಂದ ಮೆಟ್ರೋ ಬಳಕೆಯನ್ನು ಹೆಚ್ಚಿಸಬಹುದು ಎಂದು ಇನ್ನೊಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com