ವಿರೋಧ, ಬಿಗಿ ಭದ್ರತೆ, ನಿರ್ಬಂಧ ನಡುವೆ ಇಂದು ಮಹಿಷಾ ದಸರಾ ಆಚರಣೆ: ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ

ಈ ಬಾರಿ ಮೈಸೂರು ದಸರಾ ವಿಶೇಷ ಸುದ್ದಿಯಲ್ಲಿದೆ, ಕಾರಣ ಮಹಿಷಾ ದಸರಾ ಆಚರಣೆ, ಬಿಜೆಪಿ ನಾಯಕರು ಮತ್ತು ಹಲವರ ವಿರೋಧದ ನಡುವೆ ಇಂದು ಶುಕ್ರವಾರ ಮಹಿಷಾ ದಸರಾ ಆಚರಣೆಯಾಗುತ್ತಿದ್ದು, ಮೈಸೂರು ನಗರದಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಈ ಬಾರಿ ಮೈಸೂರು ದಸರಾ ವಿಶೇಷ ಸುದ್ದಿಯಲ್ಲಿದೆ, ಕಾರಣ ಮಹಿಷಾ ದಸರಾ ಆಚರಣೆ, ಬಿಜೆಪಿ ನಾಯಕರು ಮತ್ತು ಹಲವರ ವಿರೋಧದ ನಡುವೆ ಇಂದು ಶುಕ್ರವಾರ ಮಹಿಷಾ ದಸರಾ ಆಚರಣೆಯಾಗುತ್ತಿದ್ದು, ಮೈಸೂರು ನಗರದಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. 

ಇಂದು ಬೆಳ್ಳಂಬೆಳಗ್ಗೆಯೇ ಮೈಸೂರಿಗೆ ಆಗಮಿಸುವವರನ್ನು ಪೊಲೀಸರು ತಪಾಸಣೆ ನಡೆಸಿದ್ದು, ಚಾಮುಂಡಿ ಬೆಟ್ಟಕ್ಕೆ ಹೋಗುವವರನ್ನು ಬೆಟ್ಟದ ತಪ್ಪಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಪಾಸಣೆ ಮಾಡಿದ್ದಾರೆ. ಮತ್ತೊಂದೆಡೆ ಇಂದು ಚಾಮುಂಡಿ ಬೆಟ್ಟಕ್ಕೆ ಬರು ಭಕ್ತರಿಗೂ ನಿರ್ಬಂಧ ವಿಧಿಸಲಾಗಿದೆ.

ಮೈಸೂರು ನಗರದ ಪುರಭವನದಲ್ಲಿ ಮಹಿಷ ದಸರಾ ಆರಂಭವಾಗುತ್ತಿದ್ದು, ಟೌನ್‌ಹಾಲ್‌ನಲ್ಲಿ ಕುಳಿತುಕೊಳ್ಳಲು ಎರಡು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.  ಈಗಾಗಲೇ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಷ ದಸರಾಕ್ಕೆ ಜನರು ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ನಂತರ ಪುರಭವನದ ಆವರಣದಲ್ಲಿ ದಮ್ಮ ದೀಕ್ಷಾ ಸಮಾರಂಭ ನಡೆಯಲಿದೆ.

ಮಂಡ್ಯದಿಂದ ಮೈಸೂರಿಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಸಮಾನ ಮನಸ್ಕರ ವೇದಿಕೆಯಿಂದ ನೂರಾರು ಸಂಖ್ಯೆಯಲ್ಲಿ ಮಹಿಷ ದಸರಾಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಇತ್ತ ಮಹಿಷ ಉತ್ಸವಕ್ಕೆ ಚಾಮರಾಜನಗರದಿಂದಲೂ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಮೈಸೂರಿಗೆ ಆಗಮಿಸಿದ್ದು, ಚಾಮರಾಜನಗರ ಜಿಲ್ಲೆಯ ವಿವಿಧೆಡೆಯಿಂದ ಹೊರಟ ಕಾರ್ಯಕರ್ತರು ಹತ್ತಾರು ಬಸ್‌ಗಳಲ್ಲಿ ಮೈಸೂರಿನತ್ತ ಆಗಮಿಸಿದ್ದಾರೆ. ಆರಂಭದಲ್ಲಿ ಚಾಮರಾಜನಗರದಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಹಿಷಾಸುರನಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಮೈಸೂರಿನತ್ತ ಪಯಣ ಬೆಳೆಸಿದರು.

ಯಾರ್ಯಾರು ಭಾಗಿ: ಇಂದು ನಡೆಯುವ ಮಹಿಷ ದಸರಾ ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿ, ಇತಿಹಾಸ ತಜ್ಞ ನಂಜರಾಜೇ ಅರಸು, ಕೆ ಎಸ್ ಭಗವಾನ್, ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು ಸೇರಿದಂತೆ ಪ್ರಗತಿಪರ ಚಿಂತಕರು, ದಲಿತ ನಾಯಕರು ಭಾಗಿಯಾಗಲಿದ್ದಾರೆ.

ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹಿನ್ನೆಲೆ ಬೆಟ್ಟದ ಮೇಲೆ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿಬೆಟ್ಟದ ಮಾರ್ಗ ತಾವರೆಕಟ್ಟೆ ಬಳಿ ಬ್ಯಾರಿಕೇಡ್ ಹಾಕಿ ಎಲ್ಲರನ್ನೂ ತಡೆಯಲಾಗಿದ್ದು, ಇಬ್ಬರು ಎಸಿಪಿ, 5 ಜನ ಇನ್ಸಪೆಕ್ಟರ್, 6 ಸಬ್ ಇನ್ಸ್‌ಪೆಕ್ಟರ್, ಎಎಸ್‌ಐ ಸೇರಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 2 ksrp ತುಕಡಿ 2 cr ತುಕಡಿ 2 ಖಾಲಿ ಬಸ್ ನಿಯೋಜನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com