ದೇವಾಲಯಗಳ ಮಾಹಿತಿ ಒದಗಿಸಲು ಕಾಲ್ ಸೆಂಟರ್ ಪ್ರಾರಂಭಿಸಲು ದತ್ತಿ ಇಲಾಖೆ ಮುಂದು!

ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತಾಧಿಗಳಿಗೆ/ ಸಾರ್ವಜನಿಕರಿಗೆ ಒದಗಿಸಲು ಕಾಲ್ ಸೆಂಟರ್ ತೆರೆಯಲು ದತ್ತಿ ಇಲಾಖೆ ಮುಂದಾಗಿದೆ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ರಾಮಲಿಂಗಾ ರೆಡ್ಡಿ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ರಾಮಲಿಂಗಾ ರೆಡ್ಡಿ.

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತಾಧಿಗಳಿಗೆ/ ಸಾರ್ವಜನಿಕರಿಗೆ ಒದಗಿಸಲು ಕಾಲ್ ಸೆಂಟರ್ ತೆರೆಯಲು ದತ್ತಿ ಇಲಾಖೆ ಮುಂದಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯಲ್ಲಿ 20 ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಲಾಗಿದೆ.

ಬೆಂಗಳೂರು: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ, ಕಾಶಿಯಾತ್ರೆಗೆ ಗಯಾ ಸೇರ್ಪಡೆ, ದೇವಾಲಯಗಳ ಮಾಹಿತಿಗೆ ಕಾಲ್‌ಸೆಂಟರ್ ಆರಂಭ, ಹಿರಿಯ ನಾಗರಿಕರಿಗೆ ನೇರ ದರ್ಶನ ಸೇರಿದಂತೆ 20 ಪ್ರಮುಖ ನಿರ್ಧಾರಗಳನ್ನು 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯಲ್ಲಿ ಕೈಗೊಳ್ಳಲಾಯಿತು.

ಶಾಂತಿನಗರದಲ್ಲಿರುವ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ ನಡೆಯಿತು.

ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಾಲಯಗಳ ಸ್ಥಿತಿಗತಿಗಳ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು. ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ, ಭಕ್ತರಿಗೆ ಅನುಕೂಲ, ದೇವಾಲಯ ನೌಕರರಿಗೆ ನೆರವು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿಯವರು, ಭಕ್ತರು ಕೊಠಡಿಗಳನ್ನು ಕಾಯ್ದಿರಿಸಲು, ದೇವಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳ ವಿವರ ನೀಡಲು, ಆನ್‌ಲೈನ್ ಪೂಜಾ ಸೇವೆ ಹಾಗೂ ಭಕ್ತರಿಗೆ ಇತರೆ ಸೌಲಭ್ಯಗಳ ಒದಗಿಸುವ ಸಲುವಾಗಿ ಕಾಲ್ ಸೆಂಟರ್ ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ಕಾಲ್ ಸೆಂಟರ್ ಸಂಖ್ಯೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗವುದು ಎಂದು ಹೇಳಿದರು.

ರಾಜ್ಯ ಸರ್ಕಾರವು 33,000 ಕ್ಕೂ ಹೆಚ್ಚು ಸರ್ಕಾರಿ ಸ್ವಾಮ್ಯದ ದೇವಾಲಯಗಳನ್ನು ಹೊಂದಿದ್ದು, ಈ ದೇವಾಲಯಗಳು ಮತ್ತು ಸೌಲಭ್ಯಗಳ ವಿವರಗಳನ್ನು ಕಾಲ್ ಸೆಂಟರ್ ಗಳ ಮೂಲಕ ಜನರು ಪಡೆಯಬಹುದು. ಇದಲ್ಲದೆ, ಕರ್ನಾಟಕದ ಹೊರಗಿನ ಕೆಲವು ದೇವಾಲಯಗಳಲ್ಲಿಯೂ ರಾಜ್ಯ ಸರ್ಕಾರ ವಸತಿ ಸೌಲಭ್ಯಗಳನ್ನು ಒದಗಿಸುತ್ತದೆ, ಭಕ್ತರು ಇಲ್ಲಿಂದ ಕೊಠಡಿಗಳನ್ನು ಕಾಯ್ದಿರಿಸಬಹುದು. ಸಭೆಯಲ್ಲಿ ಕಾಲ್ ಸೆಂಟರ್ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ದೇವಾಲಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಷನ್ ಗ್ರೂಪ್ ರಚನೆ, ದೇವಾಲಯಗಳ ಅಭಿವೃದ್ಧಿಗಾಗಿ ಹಲವರು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳ ಸ್ವೀಕರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com