ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವವನ್ನು ಸರಿಪಡಿಸಲು ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಅಭಾವದಿಂದ ವಿದ್ಯುತ್ ಕೊರತೆಯಾಗಿದೆ, ಗಾಳಿಯೂ ಸರಿಯಾಗಿ ಬೀಸದೆ ವಿಂಡ್ ಎನರ್ಜಿ ಕೂಡಾ ಕಡಿಮೆಯಾಗಿದೆ. 16000 ಮೆಗಾ ವ್ಯಾಟ್‍ಗೆ ಬೇಡಿಕೆ ಇದೆ ಸದ್ಯ ರಾಜ್ಯದಲ್ಲಿ 1500 ಮೆಗಾ ವ್ಯಾಟ್ ಕೊರತೆಯಾಗಿದೆ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಿ ವಿದ್ಯುತ್ ಖರೀದಿ ಮಾಡುತ್ತಿದೆ. ಕೊರತೆ ನೀಗಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕೆಲ ಸರ್ಕಾರಿ ಭೂಮಿಗಳಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ನಿರ್ಧರಿಸಲಾಗಿದೆ. ರೈತರಿಂದಲೂ ಭೂಮಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಗಳ ಬಯೋ ಗ್ಯಾಸ್ ನಿಂದ ವಿದ್ಯುತ್ ಬರುತ್ತೆ ಅದನ್ನು ಬಳಕೆ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಲಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ಏನು ಮಾಡದ ಬಿಜೆಪಿ ನಾಯಕರು ರಾಜ್ಯಕ್ಕಿದ್ದ ವಿದ್ಯುತ್ ಹಂಚಿಕೆಯನ್ನು ವಾಪಸ್ ಬಿಟ್ಟುಕೊಟ್ಟಿದೆ. ನಮ್ಮ ವಿದ್ಯುತ್ ಪಾಲನ್ನು ಈಗ ಬೇರೆ ರಾಜ್ಯಗಳು ಬಳಕೆ. ನಮ್ಮ ಸರ್ಕಾರ ಬಂದು ಈಗ ಮೂರು ತಿಂಗಳಾಗಿದೆ, ಸಮಸ್ಯೆ ಪರಿಹರಿಸಲು ಸಮಯಬೇಕಾಗುತ್ತದೆ, ಬಿಜೆಪಿ ವೈಫಲ್ಯದಿಂದ ಈ ಎಲ್ಲಾ ಸಮಸ್ಯೆ ಬಂದಿದೆ, ಜನರು ಅಥವಾ ರೈತರು ಪ್ರತಿಭಟನೆ ಮಾಡುವುದಾದರೆ ಬಿಜೆಪಿ ಕಚೇರಿ ಮುಂದೆ ಹೋಗಿ ಪ್ರತಿಭಟಿಸಲಿ. ಇಂದಿನ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ’ ಎಂದು ಆರೋಪಿಸಿದರು.
ಇದೇ ವೇಳೆ ಜಾರ್ಜ್ ಕಾಣೆಯಾಗಿದ್ದಾರೆ ಎಂಬ ಬಿಜೆಪಿ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಅವರು, ‘ಜಾರ್ಜ್ ಕಾಣೆಯಾಗಿಲ್ಲ. ದೆಹಲಿಗೆ ಬಂದು ಇಂಧನ ಸಚಿವರನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಕೇಂದ್ರ ಗ್ರಿಡ್‌ನಿಂದ ಹೆಚ್ಚುವರಿ ವಿದ್ಯುತ್ ಒದಗಿಸುವಂತೆ ಒತ್ತಡ ಹೇರಿದ್ದೇನೆ’ ಎಂದರು. ನಾನು ಬಿಜೆಪಿ ಕಚೇರಿಗೆ ಹೋಗಿ ಕುಳಿತುಕೊಳ್ಳಬೇಕಾ ಅಥವಾ ಬೊಮ್ಮಾಯಿ ಮನೆಗೆ ಹೋಗಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದರು.
Advertisement