ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾತು ಕೇಳದ ಮಕ್ಕಳ ಮೇಲೆ ಹಲ್ಲೆ, ತಾಯಿ ಆತ್ಮಹತ್ಯೆ: ಪುತ್ರಿ ಸಾವು, ಗಂಭೀರ ಸ್ಥಿತಿಯಲ್ಲಿ ಮಗ!

ಹೆತ್ತ ತಾಯಿಯೇ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. 

ವಿಜಯನಗರ: ಹೆತ್ತ ತಾಯಿಯೇ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. 

ಹಲ್ಲೆಯಲ್ಲಿ 18 ವರ್ಷದ ಶಮಬಾನು ಮೃತಪಟ್ಟಿದ್ದರೆ 16 ವರ್ಷದ ಅಮಾನುಲ್ಲಾ ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳ ಮೇಲೆ ಹಲ್ಲೆ ನಡೆಸಿದ ನಂತರ 45 ವರ್ಷದ ಬೇಗಮ್‌ಬಿ ಶರಣಾಗಿದ್ದಾರೆ. 

ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಮಕ್ಕಳ ಮೇಲೆ ಬೇಗಮ್‌ಬಿ ಜಗಳ ಮಾಡಿದ್ದಾರೆ. ನಂತರ ಕೋಪದಲ್ಲಿ ದೊಣ್ಣೆಯಿಂದ ಮಕ್ಕಳ ತಲೆಗೆ ಹೊಡೆದಿದ್ದು ತೀವ್ರವಾಗಿ ಗಾಯಗೊಂಡಿದ್ದ ಶಮಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅಮಾನುಲ್ಲಾ ಪ್ರಜ್ಞಾಹೀನನಾಗಿದ್ದಾರೆ. ನಂತರ ತಾಯಿ ಬೇಗಮ್‌ಬಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಮಾನುಲ್ಲಾ ಕೋಮಾಗೆ ಜಾರಿದ್ದು ಆತನನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com