2023-24 ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಉತ್ಪಾದನೆ ಶೇ.42 ರಷ್ಟು ಕುಸಿತ

2023-24 ನೇ ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಉತ್ಪಾದನೆ ಶೇ.42 ರಷ್ಟು ಅಂದರೆ 34.51 ಲಕ್ಷ ಟನ್ ಗಳಿಗೆ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2023-24 ನೇ ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಉತ್ಪಾದನೆ ಶೇ.42 ರಷ್ಟು ಅಂದರೆ 34.51 ಲಕ್ಷ ಟನ್ ಗಳಿಗೆ ಕುಸಿತ ಕಂಡಿದೆ.

ಕಬ್ಬು ಅರೆಯುವ ಚಟುವಟಿಗಳು ಈಗಾಗಲೇ ಪ್ರಾರಂಭವಾಗಿದ್ದು, ಕಡಿಮೆ ಕಬ್ಬು ಇಳುವರಿಯ ಕಾರಣದಿಂದಾಗಿ ಸಕ್ಕರೆ ಉತ್ಪಾದನೆ 34.51 ಲಕ್ಷ ಟನ್ ಗಳಿಗೆ ಕುಸಿತ ಕಂಡಿದೆ. ಕರ್ನಾಟಕ ಭಾರತದಲ್ಲಿ ಮೂರನೇ ಅತಿ ದೊಡ್ಡ ಸಕ್ಕರೆ ತಯಾರಿಕೆ ಪ್ರದೇಶವಾಗಿದೆ.

2022-23 (ಅಕ್ಟೋಬರ್-ಸೆಪ್ಟೆಂಬರ್) ಋತುವಿನಲ್ಲಿ  ರಾಜ್ಯದಲ್ಲಿ 59.81 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ, ಹಿಂದಿನ ಋತುವಿನಲ್ಲಿದ್ದ 705 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಬ್ಬು ಉತ್ಪಾದನೆ 2023-24 ರಲ್ಲಿ 520 ಲಕ್ಷ ಟನ್‌ಗಳಿಗೆ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.

ಕಬ್ಬಿನ ಲಭ್ಯತೆ ಕಳೆದ ಅವಧಿಯ 603.55 ಲಕ್ಷ ಟನ್‌ಗೆ ಹೋಲಿಸಿದರೆ 442 ಲಕ್ಷ ಟನ್‌ಗೆ ಕಡಿಮೆಯಾಗಿದೆ. ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಸಕ್ಕರೆ ಉತ್ಪಾದನೆ 2023-24ರಲ್ಲಿ 34.51 ಲಕ್ಷ ಟನ್‌ಗಳಾಗಲಿದೆ ಎಂದು ಅಂದಾಜಿಸಲಾಗಿದೆ, ಹಿಂದಿನ ಋತುವಿನಲ್ಲಿ 59.81 ಲಕ್ಷ ಟನ್‌ಗಳಿಂದ ಸಕ್ಕರೆ ಉತ್ಪಾದನೆಯಾಗಿತ್ತು. ಆದಾಗ್ಯೂ, ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆಯು ಹಿಂದಿನ ಋತುವಿನಲ್ಲಿ ಉತ್ಪಾದನೆಯಾಗಿದ್ದ 35 ಕೋಟಿ ಲೀಟರ್‌ಗಳಿಗೆ ಹೋಲಿಸಿದರೆ 2023-24 ರಲ್ಲಿ 40 ಕೋಟಿ ಲೀಟರ್‌ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com