ಗದಗ: ಪಟ್ಟೆ ಕತ್ತೆಕಿರುಬ ಮೃತದೇಹ ಪತ್ತೆ, ರೇಬೀಸ್ ಕುರಿತು ಹೆಚ್ಚಿದ ಆತಂಕ!

ಅಳಿವಿನಂಚಿನಲ್ಲಿರುವ ಪಟ್ಟೆ ಕತ್ತೆಕಿರುಬದ ಮೃತದೇಹವೊಂದು ಗಜೇಂದ್ರಗಡದ ಅರಣ್ಯದ ಬಳಿ ಪತ್ತೆಯಾಗಿದ್ದು, ಕತ್ತೆಕಿರುಬ ಮೃತದೇಹದ ಕುರಿತು ಪ್ರಾಣಿಪ್ರಿಯದಲಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಳಿವಿನಂಚಿನಲ್ಲಿರುವ ಪಟ್ಟೆ ಕತ್ತೆಕಿರುಬದ ಮೃತದೇಹವೊಂದು ಗಜೇಂದ್ರಗಡದ ಅರಣ್ಯದ ಬಳಿ ಪತ್ತೆಯಾಗಿದ್ದು, ಕತ್ತೆಕಿರುಬ ಮೃತದೇಹದ ಕುರಿತು ಪ್ರಾಣಿಪ್ರಿಯದಲಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕತ್ತೆಕಿರುಬಗಳು ಅಥವಾ ಹೈನಾಗಳು ಹೈನಿಡೇ ಕುಟುಂಬದ ಮಾಂಸಾಹಾರಿ ಸಸ್ತನಿಗಳಾಗಿದ್ದು, ಏಷ್ಯಾ ಮತ್ತು ಆಫ್ರಿಕಾ ಎರಡರಲ್ಲೂ ಕಂಡುಬರುವ ಪ್ರಾಣಿಯಾಗಿದೆ. ಇದರಲ್ಲಿ ಎರಡು ಪ್ರಭೇದಗಳ ಪ್ರಾಣಿಗಳಿದ್ದು, ಅಸ್ತಿತ್ವದಲ್ಲಿರುವ ಎರಡು ಪ್ರಭೇದಗಳೆಂದರೆ ಪಟ್ಟೆ ಕತ್ತೆಕಿರುಬ ಮತ್ತು ಚುಕ್ಕೆಯ ಕತ್ತೆಕಿರುಬವಾಗಿದೆ. ಈ ಕತ್ತೆಕಿರುಬ ಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರಲಿದ್ದು, ಹಾಗಿದ್ದರೂ ಈ ಪ್ರಾಣಿ ಯಾವ ಕಾರಣಕ್ಕೆ ಮೃತಪಟ್ಟಿರಬಹುದು ಎಂಬುದರ ಕುರಿತು ವನ್ಯಜೀವಿ ಕಾರ್ಯಕರ್ತರು, ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರಲ್ಲಿ  ಹಲವು ಪ್ರಶ್ನೆಗಳು ಮೂಡತೊಡಗಿವೆ.

ಹೀಗಾಗಿ ಅರಣ್ಯ ಪ್ರದೇಶಗಳಿಂದ ದೂರ ಇರುವಂತೆ ಹಾಗೂ ಬೇಟೆಯಾಡಲು ಗುಡ್ಡಗಾಡು ಪ್ರದೇಶಗಳಿಗೆ ಹೋಗುವುದು, ಅರಣ್ಯ ಪ್ರದೇಶಗಳಿಗೆ ಹೋಗುವವರ ಮೇಲೆ ನಿಗಾ ಇಡುವಂತೆ ಗ್ರಾಮಸ್ಥರಿಗೆ ಅರಣ್ಯಾಧಿಕಾರಿಗಳು ಸೂಚನೆಗಳನ್ನು ನೀಡುತ್ತಿದ್ದಾರೆ.

ಜೀವವೈವಿಧ್ಯ ತಜ್ಞ ಮಂಜುನಾಥ ನಾಯಕ್ ಮಾತನಾಡಿ, ‘ರೇಬಿಸ್ ಅಥವಾ ಇತರ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದ ಪ್ರಾಣಿಯ ಮಾಂಸ ಸೇವಿಸಿದಾಗ ಈ ಪ್ರಾಣಿಗೂ ರೇಬೀಸ್ ವೈರಸ್ ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಬೀದಿ ನಾಯಿಗಳು ರೇಬೀಸ್ ವೈರಸ್‌ನ ಮುಖ್ಯ ವಾಹಕಗಳಾಗಿವೆ. ಇದು ನರಿಗಳು, ತೋಳಗಳು ಮತ್ತು ಬೆಕ್ಕುಗಳು ಮತ್ತು ಕೆಲವು ಸಸ್ತನಿಗಳು ಸೇರಿದಂತೆ ದೇಶೀಯ ಮತ್ತು ಕಾಡು ಜಾತಿಯ ಸಸ್ತನಿ ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಗದಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ನಿಖಿಲ್ ಕುಲಕರ್ಣಿ ಮಾತನಾಡಿ, ಶವಪರೀಕ್ಷೆಯ ನಂತರ ಪಟ್ಟೆ ಕತ್ತೆಕಿರುಬ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಶವಪರೀಕ್ಷೆ ವರದಿಯ ವಿವರಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್)ಗಳಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಗದಗ ಡಿಸಿಎಫ್ ದೀಪಿಕಾ ಬಾಜಪೈ ಅವರು ಮಾತನಾಡಿ, ಪ್ರಾಣಿಯ ಸಾವು ಸಾಮಾನ್ಯ ಸಾವಿನಂತೆ ಕಂಡುಬರುತ್ತಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ರೇಬೀಸ್ ವೈರಸ್ ಇರುವಿಕೆಯು ಅಸಂಭವವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com