ಬೆಂಗಳೂರು: ತಂತ್ರಜ್ಞಾನದ ಸಹಾಯದಿಂದ 10 ಸಾವಿರ ಸೊಳ್ಳೆ ಸಂತಾನೋತ್ಪತ್ತಿ ತಾಣ ಪತ್ತೆ

ಡೆಂಗ್ಯೂ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು PRISM-H (ಪ್ಲಾಟ್‌ಫಾರ್ಮ್ ಫಾರ್ ಇಂಟಿಗ್ರೇಟೆಡ್ ಸರ್ವೆಲೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಆಫ್ ಹೆಲ್ತ್) ಅಪ್ಲಿಕೇಶನ್ ಸಹಾಯದಿಂದ ಒಂದು ತಿಂಗಳೊಳಗೆ 10,000 ಸೊಳ್ಳೆ - ಸಂತಾನೋತ್ಪತ್ತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡೆಂಗ್ಯೂ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು PRISM-H (ಪ್ಲಾಟ್‌ಫಾರ್ಮ್ ಫಾರ್ ಇಂಟಿಗ್ರೇಟೆಡ್ ಸರ್ವೆಲೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಆಫ್ ಹೆಲ್ತ್) ಅಪ್ಲಿಕೇಶನ್ ಸಹಾಯದಿಂದ ಒಂದು ತಿಂಗಳೊಳಗೆ 10,000 ಸೊಳ್ಳೆ - ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಲಾಗಿದೆ ಮತ್ತು ನಗರದಲ್ಲಿ ಎರಡು ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲು ಅದು ಸಹಾಯ ಮಾಡಿದೆ.ಕಳೆದ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 225 ವಾರ್ಡ್‌ಗಳಲ್ಲಿ ಈ ಅಪ್ಲಿಕೇಶನ್ ಗೆ ಚಾಲನೆ ನೀಡಲಾಗಿತ್ತು ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಎಐ ಮತ್ತು ಟೆಕ್ನಾಲಜಿ ಪಾರ್ಕ್ (ಆರ್‌ಟಿಪಿಆರ್‌ಕೆ) ಕಾರ್ಯಕ್ರಮ ನಿರ್ದೇಶಕ ಡಾ. ಭಾಸ್ಕರ್ ರಾಜ್‌ಕುಮಾರ್ ಅವರು ಹೇಳಿದ್ದಾರೆ.

ಈ ಅಪ್ಲಿಕೇಶನ್ ಅನ್ನು ಬೆಂಗಳೂರಿನ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು(ASHA) ಹೆಚ್ಚು ವೇಗವಾಗಿ ಅಳವಡಿಸಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕ್ಷೇತ್ರ ಕಾರ್ಯಕರ್ತರು ಅಪ್ಲಿಕೇಶನ್ ಬಿಡುಗಡೆಯಾದ ಒಂದು ತಿಂಗಳೊಳಗೆ ಎರಡು ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಿ, 10,000 ಸೊಳ್ಳೆ-ಸಂತಾನೋತ್ಪತ್ತಿ ಸ್ಥಳಗಳನ್ನು ಗುರುತಿಸಿದ್ದಾರೆ.

ತಂತ್ರಜ್ಞಾನದ ಏಕೀಕರಣದೊಂದಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಸೊಳ್ಳೆ-ಸಂತಾನೋತ್ಪತ್ತಿ ತಾಣಗಳು ಮತ್ತು ಪಾಸಿಟಿವ್ ಡೆಂಗ್ಯೂ ಪ್ರಕರಣಗಳಿರುವ ಮನೆಗಳ ಭೌಗೋಳಿಕ ಸ್ಥಳವನ್ನು ಛಾಯಾಚಿತ್ರ ಸಾಕ್ಷ್ಯದೊಂದಿಗೆ ಗುರುತಿಸಲು ಸಾಧ್ಯವಾಗಿದೆ. ಬ್ರೀಡಿಂಗ್ ಸ್ಪಾಟ್‌ಗಳ ತೆರವು ಅಥವಾ ಧೂಮೀಕರಣದಂತಹ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಉತ್ತಮವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಮಾತನಾಡಿ, ಈ ಹಿಂದೆ ದತ್ತಾಂಶವನ್ನು ಒಟ್ಟುಗೂಡಿಸುವಲ್ಲಿ ಸಮಸ್ಯೆಗಳಿದ್ದವು. ಸಮೀಕ್ಷೆಗಳನ್ನು ನಡೆಸಲಾಗಿದ್ದರೂ, ಅವುಗಳನ್ನು ಸಮರ್ಥವಾಗಿ ದಾಖಲಿಸಲಾಗಿಲ್ಲ. ಈ ರೋಗದ ಕಣ್ಗಾವಲು ವ್ಯವಸ್ಥೆಯ ಸಹಾಯದಿಂದ, ಅವರು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿ ತಾಣಗಳನ್ನು ಸರಿಯಾಗಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೆಂಗ್ಯೂಗೆ ಸಂಬಂಧಿಸಿದಂತೆ, ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ 4,000 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ಈಗ ಇಳಿಮುಖದ ಪ್ರವೃತ್ತಿಗೆ ಸಾಕ್ಷಿಯಾಗಿದೆ. ನಗರದಲ್ಲಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುಮಾರು 400 ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳವರೆಗೆ ಸುಮಾರು 500 ಪ್ರಕರಣಗಳು ವರದಿಯಾಗಿವೆ. ಇನ್ನೂ 20 ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com