ಸಲಿಂಗ ವಿವಾಹ: 'ಸುಪ್ರೀಂ' ಮುಂದೆ ಮಕ್ಕಳ ಭವಿಷ್ಯದ ಕಾನೂನು ತೊಡಕು, ವೈದ್ಯಕೀಯ ಸಮಸ್ಯೆ ವಿಚಾರ ಎತ್ತಿದ ಬೆಂಗಳೂರು ಮೂಲದ ಸೋಮ್ ಥಾಮಸ್

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ಸೋಮ್ ಥಾಮಸ್ ಎಂಬುವವರು ತಾವು ಸಲ್ಲಿಸಿದ್ದ 40 ಪುಟಗಳ ಅರ್ಜಿಯಲ್ಲಿ ವಾದ ಮುಂದಿಟ್ಟಿದ್ದಾರೆ. ನ್ಯಾಯಪೀಠದ ಮುಂದೆ ಮೌಕಿಖವಾಗಿ ಕೂಡ ವಾದ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ಸೋಮ್ ಥಾಮಸ್ ಎಂಬುವವರು ತಾವು ಸಲ್ಲಿಸಿದ್ದ 40 ಪುಟಗಳ ಅರ್ಜಿಯಲ್ಲಿ ವಾದ ಮುಂದಿಟ್ಟಿದ್ದಾರೆ. ನ್ಯಾಯಪೀಠದ ಮುಂದೆ ಮೌಕಿಖವಾಗಿ ಕೂಡ ವಾದ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಹಾಗಾದರೆ ಸೋಮ್ ಥಾಮಸ್ ಅವರ ಪಾತ್ರವೇನು ಎಂದು ಕೇಳಿದಾಗ ಅವರು ತಮ್ಮ ಕಾರ್ಪೊರೇಟ್ ವೃತ್ತಿಜೀವನದ ಮೆಲುಕು ಹಾಕುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ವಿಶೇಷ ಚೇತನರಿಗೆ ಹೆಚ್ಚು ಅವಕಾಶ ನೀಡಬೇಕೆಂದು ಒತ್ತಡ, ಬೇಡಿಕೆಗಳು ಕೇಳಿಬರುತ್ತಿದ್ದ ಸಮಯದಲ್ಲಿ ಎಲ್ ಜಿಬಿಟಿಕ್ಯು ಸಮುದಾಯದವರಿಗೂ ಉತ್ತಮ ಉದ್ಯೋಗಾವಕಾಶಗಳು, ಕೆಲಸದ ಸ್ಥಳಗಳಲ್ಲಿ ಉತ್ತಮ ವಾತಾವರಣ ಸಿಗಬೇಕೆಂದು ಒತ್ತಡ ಕೇಳಿಬರುತ್ತಿತ್ತು. ಆರಂಭದಲ್ಲಿ ಇದು ಉತ್ತಮ ನಡೆ, ಸಮಾಜ ಸುಧಾರಣೆಯಲ್ಲಿ ಕಡೆಗೆ ಉತ್ತಮ ಹೆಜ್ಜೆ ಎಂದು ಭಾವಿಸಲಾಗುತ್ತಿತ್ತು. ಆದರೆ ಸಮಯಗಳು, ವರ್ಷಗಳುರುಳುತ್ತಿದ್ದಂತೆ ಇದು ಸಲಿಂಗ ಕಾಮ, ಸಲಿಂಗ ವಿವಾಹದೆಡೆಗೆ ವಿಷಯಾಂತರವಾಗತೊಡಗಿತು' ಎನ್ನುತ್ತಾರೆ ಸೋಮ್ ಥಾಮಸ್. 

ಕಾರ್ಪೊರೇಟ್ ವಲಯದಲ್ಲಿ ಈ ಪ್ರಯತ್ನ ತಪ್ಪು ಪ್ರಚಾರಗಳಿಗೆ ಎಡೆಮಾಡಿಕೊಟ್ಟಿತು ಎನ್ನುತ್ತಾರೆ. 1971ರ ದಿನಗಳವು, ಫ್ರಾಂಕ್ ಕೆಮೆನಿ ಎನ್ನುವವರು ಸಲಿಂಗ ಕಾಮಿ ಒಳ್ಳೆಯದು ಎಂದು ಕರೆದರು. ಆ ಸಮಯದಲ್ಲಿ ಅಮೆರಿಕದ ಮನಃಶಾಸ್ತ್ರ ಸಂಘಟನೆ ಸಲಿಂಗಕಾಮವನ್ನು ರೋಗ ಎಂದು ವ್ಯಾಖ್ಯಾನಿಸಿತು. ಸಲಿಂಗಕಾಮಿಗಳನ್ನು ಇದರಿಂದಾಗಿ ತುಚ್ಛವಾಗಿ ಕಾಣುತ್ತಾರೆ ಎಂದು ಭಾವಿಸಿ 1971-72ರಲ್ಲಿ ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಅಂಶಗಳ ಕೈಪಿಡಿ(DSM)ನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದರು. ಇದು ವೈಜ್ಞಾನಿಕ ನಿರ್ಧಾರವಾಗಿರದೆ ಅಪಪ್ರಚಾರವಾದರೂ ಕೂಡ ನಂತರ ಎಲ್ ಜಿಬಿಟಿಕ್ಯು ಪ್ರಚಾರ ಹೆಚ್ಚಾಗತೊಡಗಿತು ಎನ್ನುತ್ತಾರೆ ಥಾಮಸ್.

2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 377ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠ ಸಲಿಂಗಕಾಮ ಸಹಜಪ್ರಕ್ರಿಯೆ ಎಂದು ವ್ಯಾಖ್ಯಾನಿಸಿತ್ತು. 

ಮಕ್ಕಳ ಭವಿಷ್ಯ: ಸಲಿಂಗ ವಿವಾಹದಲ್ಲಿನ ಕಾನೂನು ತೊಡಕುಗಳು: ಸಲಿಂಗ ವಿವಾಹ ಮಾಡಿಕೊಂಡ ಜೋಡಿ ಮಗುವನ್ನು ದತ್ತು ಪಡೆದುಕೊಂಡರೆ ಅಗರ ಕಾನೂನು ಪರಿಧಿ ಮತ್ತು ಮಗುವನ್ನು ಬೆಳೆಸುವ ವಿಚಾರದಲ್ಲಿ ಕಾನೂನು ಕುಂದು ಕೊರತೆಗಳು ಎದುರಾಗುತ್ತವೆ. ವಿವಾಹ ಕಾನೂನು ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಭಾರತದ ಸಾಲಿಸಿಟರ್ ಜನರಲ್ ಹೇಳುತ್ತಾರೆ, ಉದಾಹರಣೆಗೆ, ಹಿಂದೂ ಉತ್ತರಾಧಿಕಾರ ಕಾಯಿದೆಯು ವಿಭಿನ್ನ ರಕ್ತ ಸಂಬಂಧಗಳನ್ನು ವ್ಯಾಖ್ಯಾನಿಸುತ್ತದೆ. ಬಾಡಿಗೆ ತಾಯಿಗೆ ವೀರ್ಯವನ್ನು ದಾನ ಮಾಡಿದ ಸಲಿಂಗಕಾಮಿ ಪುರುಷನಿಗೆ ಮಗು ಜನಿಸಿದರೆ ಅಥವಾ ಅಪರಿಚಿತರಿಂದ ವೀರ್ಯವನ್ನು ಪಡೆದ ಲೆಸ್ಬಿಯನ್ ಮಹಿಳೆಗೆ ಮಗು ಜನಿಸಿದರೆ, ಈ ಕಾನೂನುಗಳನ್ನು ಹೇಗೆ ಅನ್ವಯಿಸಬಹುದು ಎಂದು ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಸಲಿಂಗ ವಿವಾಹವನ್ನು ಮಾನ್ಯ ಮಾಡಲು ಸಂಪೂರ್ಣ ವಿವಾಹದ ವ್ಯಾಖ್ಯಾನವನ್ನು ಬದಲಾಯಿಸಬೇಕಾಗಿದೆ ಎಂದಿದ್ದರು.

ಭವಿಷ್ಯದಲ್ಲಿ ಎಲ್ ಜಿಬಿಟಿಕ್ಯು ಸಮುದಾಯದವರು ಏನು ಮಾಡಬಹುದು?: ಸಲಿಂಗ ವಿವಾಹಕ್ಕೆ ಒಂದು ಅರ್ಥ ಸಿಗುವಂತೆ ಮಾಡಲು ಈ ಸಮುದಾಯದವರು ಒಟ್ಟು ಸೇರುವಿಕೆ ಎಂಬ ಶಬ್ದವನ್ನು ಬಳಸಬಹುದು. ಸಲಿಂಗ ಜೋಡಿಗಳ ಮಕ್ಕಳ ಭವಿಷ್ಯ ಅವರ ಕಾನೂನು ಉತ್ತರದಾಯಿತ್ವ ಸಮಸ್ಯೆಯಾಗಬಹುದು ಎಂಬುದು ನ್ಯಾಯಾಧೀಶರುಗಳ ಅಭಿಪ್ರಾಯವಾಗಿದೆ. 

ಸಲಿಂಗಕಾಮಿ ಮಹಿಳೆಯರ ಮಕ್ಕಳು ಭಿನ್ನಲಿಂಗೀಯ ಪೋಷಕರ ಮಕ್ಕಳನ್ನು ಹೋಲುತ್ತಾರೆ ಎಂದು ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಹೇಳುತ್ತದೆ, ಆದರೆ ಸಲಿಂಗಕಾಮಿ ಪುರುಷರ ಮಕ್ಕಳು ಅಂತಹ ಹಕ್ಕನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಸಲಿಂಗಕಾಮಿ ಪೋಷಕರು ಮಕ್ಕಳನ್ನು ಪರಿಣಾಮಕಾರಿಯಾಗಿ ಭಿನ್ನಲಿಂಗ ಪೋಷಕರಂತೆ ಸಹಜವಾಗಿ ಬೆಳೆಸಬಹುದು ಎಂಬ ಸಾಮಾನ್ಯ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಸಲಿಂಗ ವಿವಾಹದಲ್ಲಿ ಮಕ್ಕಳ ಕಾನೂನು ಭವಿಷ್ಯ ಮತ್ತು ಪೋಷಣೆಯ ವಿಚಾರದಲ್ಲಿ ತೊಡಗುಂಟಾಗುತ್ತವೆ ಎಂದು ಸೋಮ್ ಥಾಮಸ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com