ಪಾರದರ್ಶಕ ಗಾಜಿಗೆ ಗುದ್ದಿಕೊಂಡು ಗಾಯ: ಸಮಯಕ್ಕೆ ಸಿಗದ ವೈದ್ಯರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿಡಿಶಾಪ ಹಾಕಿದ ಮಹಿಳಾ ಪ್ಯಾಸೆಂಜರ್!

ತುರ್ತು ಸಮಯದಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸಿಗದ ಕಾರಣ ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಘಟನೆಯೊಂದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತುರ್ತು ಸಮಯದಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸಿಗದ ಕಾರಣ ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಘಟನೆಯೊಂದು ವರದಿಯಾಗಿದೆ.

ಮಹಿಳೆ ಹಾಗೂ ಆಕೆಯ ಪತಿ ಪ್ರಶಾಂತ್ ದಾರುಕಾ ಎಂಬುವವರು ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ನಿಲ್ದಾಣದಲ್ಲಿ ಪಾರದರ್ಶಕ ಗಾಜನ್ನು ಗಮನಿಸದ ಮಹಿಳೆ, ಗುದ್ದಿಕೊಂಡು ಗಾಯಗೊಂಡಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆಯಲು ವಿಮಾನ ನಿಲ್ದಾಣದಲ್ಲಿ ವೈದ್ಯರಿರಲಿಲ್ಲ ಎಂದು ಮಹಿಳೆಯ ಪತಿ ಪ್ರಶಾಂತ್ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪಾರದರ್ಶಕ ಗಾಜಿನಿಂದಾಗಿ ನನ್ನ ಪತ್ನಿ ಗಾಯಗೊಂಡಿದ್ದಳು. ವೈದ್ಯರ ಬಳಿ ಹೋಗಲು ರೂ.1000 ಖರ್ಚು ಮಾಡಬೇಕಾಯಿತು. ಇಂತಹ ಘಟನೆಗಳ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವಿಮಾನ ನಿಲ್ದಾಣದಲ್ಲಿ ಉಚಿತ ವೈದ್ಯರು ಇರಬೇಕಲ್ಲವೇ? ಇದು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಇರಬೇಕಾದ ಮೂಲ ಸೌಕರ್ಯವಲ್ಲವೇ? ಎಂದು ಪ್ರಶ್ನಿಸಿ, ಬೆಂಗಳೂರ ವಿಮಾನ ನಿಲ್ದಾಣದ ವಿರುದ್ಧ ಕಿಡಿಕಾರಿದ್ದರು.

ಟ್ವೀಟ್ ಗೆ ಪ್ರತಿಕ್ರಿಯೆ ಅಧಿಕೃತ ಟ್ವಿಟ್ ಖಾತೆಯ ಮೂಲಕವೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಅನಿಸಿಕೆಯನ್ನು ನಾವು ಸ್ವೀಕರಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಯಾಣ ಮತ್ತು ಸಂಪರ್ಕದ ಮೂಲಕ ಮಾಹಿತಿ ಹಂಚಿಕೊಳ್ಳಿ ಎಂದು ಹೇಳಿದೆ.

ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ಆರೋಪ ಮಾಡಿರುವ ಪ್ರಯಾಣಿಕರೊಂದಿಗೆ ನಾವು ಮಾತನಾಡಿದ್ದೇವೆ. ನನ್ನ ಪತ್ನಿಯದ್ದೇ ತಪ್ಪು ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಯಾವುದೇ ಹೇಳಿಕೆಗಳನ್ನೂ ನೀಡುವುದಿಲ್ಲ. ಆರೋಪ ಮಾಡಿರುವ ಪ್ರಯಾಣಿಕರನ್ನೇ ಪ್ರಶ್ನಿಸಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com