ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಶೇ.32 ರಷ್ಟು ಏರಿಕೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಏರಿಕೆ ಮುಂದುವರಿದಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ 32 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ದ ಅಂಕಿಅಂಶಗಳ ವರದಿ ಸೂಚಿಸುತ್ತಿದೆ. 
ಕೆಂಪೇಗೌಡ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಏರಿಕೆ ಮುಂದುವರಿದಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ 32 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ದ ಅಂಕಿಅಂಶಗಳ ವರದಿ ಸೂಚಿಸುತ್ತಿದೆ.

ಇದು ಇದೇ ಅವಧಿಯಲ್ಲಿ ರಾಷ್ಟ್ರೀಯ ಸರಾಸರಿ 22.1 ಶೇಕಡಾ (18.31 ಕೋಟಿ) ಗಿಂತ ಹೆಚ್ಚಾಗಿದೆ ಎಂದು ಅದರ ಏರ್ ಟ್ರಾಫಿಕ್ ವರದಿಯಲ್ಲಿ ಉಲ್ಲೇಖವಾಗಿದೆ. 

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷದ 1,39,93,742 ಪ್ರಯಾಣಿಕರಿಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 1,84,74,104 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರು 16,77,541 ಕ್ಕೆ ಹೋಲಿಸಿದರೆ ಸುಮಾರು 22,29,524 ರಷ್ಟಿದ್ದು, ಶೇಕಡಾ 32.9 ರಷ್ಟು ಏರಿಕೆ ಕಂಡಿದೆ, ಅಂತರಾಷ್ಟ್ರೀಯ ದಟ್ಟಣೆಯನ್ನು ದೇಶೀಯ ದಟ್ಟಣೆಗಿಂತ ಶೇಕಡಾ 1ರಷ್ಟು (ಈ ಹಿಂದಿನ ಶೇ.31.9) ಹೆಚ್ಚಿಸಿದೆ.

ಬೆಳಗಾವಿ, ಮೈಸೂರು ಮತ್ತು ಕಲಬುರಗಿಯಂತಹ ವಿಮಾನ ನಿಲ್ದಾಣಗಳ ಮೇಲೆ ತೀವ್ರ ಪರಿಣಾಮ ಬೀರಿದ ಕೆಲವು ಮಾರ್ಗಗಳ ಸ್ಥಗಿತತೆಯಿಂದ ಬೆಂಗಳೂರು ವಿಮಾನ ನಿಲ್ದಾಣವು ಬಾಧಿತವಾಗಿಲ್ಲ. ರಾಜ್ಯದಲ್ಲಿ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ಮಂಗಳೂರು ತನ್ನ ಅಂತರಾಷ್ಟ್ರೀಯ ವಿಮಾನಯಾನದಲ್ಲಿ ಶೇಕಡಾ 0.9 ರಷ್ಟು ಕುಸಿತ ಕಂಡಿದೆ. ಆದಾಗ್ಯೂ, 6,86,726 ಪ್ರಯಾಣಿಕರನ್ನು ದಾಖಲಿಸುವ ಮೂಲಕ ದೇಶೀಯ ಸಂಚಾರವು ಶೇಕಡಾ 9.5 ರಷ್ಟು ಹೆಚ್ಚಳವನ್ನು ತೋರಿಸಿದೆ. ಹುಬ್ಬಳ್ಳಿಯಲ್ಲೂ ಶೇ.30.1ರಷ್ಟು ಏರಿಕೆ ಕಂಡಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.

ಆದಾಗ್ಯೂ, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕ್ರಮವಾಗಿ ಶೇ.35.8 ಮತ್ತು ಶೇ.28.4ರಷ್ಟು ಸಂಚಾರ ದಟ್ಟಣೆಯಲ್ಲಿ  ಕುಸಿತ ಕಂಡುಬಂದಿದೆ. ಮೈಸೂರು ಶೇಕಡಾ 26.7 ರಷ್ಟು ಕುಸಿತವನ್ನು ಕಂಡಿದ್ದು, ಕಳೆದ ವರ್ಷ 1,04,330 ರಷ್ಟಿದ್ದ ಪ್ರಯಾಣಿಕರ ಸಂಖ್ಯೆ ಕೇವಲ 76,475ಕ್ಕೆ ಕುಸಿದಿದೆ.

ಬೆಳಗಾವಿ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, “ವಿವಿಧ ವಿಮಾನಯಾನ ಸಂಸ್ಥೆಗಳು ವಿವಿಧ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿರುವುದು ನಮಗೆ ತೀವ್ರವಾಗಿ ತಟ್ಟಿದೆ ಮತ್ತು ಪ್ರೋತ್ಸಾಹದಲ್ಲಿ ತೀವ್ರ ಕುಸಿತವನ್ನು ಉಂಟುಮಾಡಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್‌ಗೆ ಸ್ಪೈಸ್‌ಜೆಟ್ ವಿಮಾನಗಳು, ಪುಣೆಗೆ ಅಲಯನ್ಸ್ ಏರ್ ಮತ್ತು ನಾಸಿಕ್‌ಗೆ ಸ್ಟಾರ್ ಏರ್‌ಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗಿದೆ.

ಮೈಸೂರು ವಿಮಾನ ನಿಲ್ದಾಣದ ಮೂಲಗಳು, “ನಾವು ಮೈಸೂರಿನಿಂದ ಬೆಳಗಾವಿಗೆ ಟ್ರೂಜೆಟ್ ವಿಮಾನಗಳು ಪೂರ್ಣವಾಗಿ ಚಲಿಸುತ್ತಿದ್ದವು, ಆದರೆ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ನಿಲ್ಲಿಸಿವೆ. ಮೈಸೂರಿನಿಂದ ಹುಬ್ಬಳ್ಳಿಗೆ ಇಂಡಿಗೋ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ. ಮೈಸೂರಿನಿಂದ ಮಂಗಳೂರಿಗೆ ಕಾರ್ಯಾಚರಣೆ ನಡೆಸುತ್ತಿರುವ ಅಲಯನ್ಸ್ ಏರ್‌ಗೆ ಉತ್ತಮ ಪ್ರೋತ್ಸಾಹ ಸಿಕ್ಕಿಲ್ಲ. ನಮ್ಮ ಪ್ರಸ್ತುತ ರನ್ ವೇ ATR-72 ವಿಮಾನಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. ರನ್‌ವೇಯನ್ನು ವಿಸ್ತರಿಸಿದಾಗ, ಇತರ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಗಳನ್ನು ಪರಿಗಣಿಸಬಹುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com