ನಿಯಮ ಉಲ್ಲಂಘನೆ: 79 ಹೊಟೆಲ್ ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳ ದಾಳಿ; 5ಕ್ಕೆ ಬೀಗ, 26ಕ್ಕೆ ನೋಟಿಸ್

ನಿಯಮ ಉಲ್ಲಂಘನೆ ಮಾಡಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇರೆಗೆ ಬಿಬಿಎಂಪಿ ಆರೋಗ್ಯ ಘಟಕದ ಅಧಿಕಾರಿಗಳು ಮಂಗಳವಾರ ನಗರದ 79 ಹೊಟೆಲ್ ಗಳ ಮೇಲೆ ದಾಳಿ ಮಾಡಿದ್ದು, ಈ ಪೈಕಿ 5 ಹೊಟೆಲ್ ಗಳಿಗೆ ಬೀಗ ಜಡಿದಿದ್ದಾರೆ.
ಹೊಟೆಲ್ ಗಳಿಗೆ ಬಿಬಿಎಂಪಿ ಅಧಿಕಾರಿಗಳ ದಾಳಿ
ಹೊಟೆಲ್ ಗಳಿಗೆ ಬಿಬಿಎಂಪಿ ಅಧಿಕಾರಿಗಳ ದಾಳಿ
Updated on

ಬೆಂಗಳೂರು: ನಿಯಮ ಉಲ್ಲಂಘನೆ ಮಾಡಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇರೆಗೆ ಬಿಬಿಎಂಪಿ ಆರೋಗ್ಯ ಘಟಕದ ಅಧಿಕಾರಿಗಳು ಮಂಗಳವಾರ ನಗರದ 79 ಹೊಟೆಲ್ ಗಳ ಮೇಲೆ ದಾಳಿ ಮಾಡಿದ್ದು, ಈ ಪೈಕಿ 5 ಹೊಟೆಲ್ ಗಳಿಗೆ ಬೀಗ ಜಡಿದಿದ್ದಾರೆ.

ಹೌದು.. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ 8 ವಿಭಾಗಗಳಲ್ಲಿ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಬೊಮ್ಮನಹಳ್ಳಿ, ದಾಸರಹಳ್ಳಿ, ಬೆಂಗಳೂರು ಪೂರ್ವ, ಮಹಾದೇವಪುರ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಟಿಮ ಮತ್ತು ಯಲಹಂಕ ವಿಭಾಗದಲ್ಲಿನ ಒಟ್ಟು 79 ಹೋಟೆಲ್ ಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಪೈಕಿ ಮಹಾದೇವಪುರ ವಿಭಾಗಲ್ಲಿನ 2, ಬೆಂಗಳೂರು ದಕ್ಷಿಣ ವಿಭಾಗದ 12, ಯಲಹಂಕ ವಿಭಾಗದ 12 ಹೊಟೆಲ್ ಗಳಿಗೆ ಅಧಿಕಾರಿನ ನಿಯಮ ಪಾಲಿಸದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ.

ಅಂತೆಯೇ ಆರ್ ಆರ್ ನಗರ ವಿಭಾಗದ ವ್ಯಾಪ್ತಿಯ ಒಟ್ಟು ಐದು ಹೊಟೆಲ್ ಗಳನ್ನು ನಿಯಮ ಬಾಹಿರವಾಗಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಈ ಹೊಟೆಲ್ ಗಳಿಗೆ ಬೀಗ ಜಡಿಯಲಾಗಿದೆ.

ಈ ಪೈಕಿ ಕೆಂಗೇರಿ ಉುಪನಗರದಲ್ಲಿರುವ ಬ್ರ್ಯೂ ಕಿಂಗ್ಸ್ ಹೊಟೆಲ್, ಆರ್ ಆರ್ ನಗರದ ಕೆಹೆಚ್ ಬಿ ಕಾಲೋನಿಯಲ್ಲಿರುವ ಮರಾಠ ಹಳ್ಳಿಯ ಪಬ್ ಹೌಸ್, ಚನ್ನರ್ಸಂದ್ರದ ಬ್ಯಾಂಬೂಸ್ ಶೂಟ್ಸ್ ಹೊಟೆಲ್, ನಾಗರಭಾವಿಯ ಬಿಡಿಎ ಬಡಾವಣೆಯ ದೀಪಾ ಕಾಂಪ್ಲೆಕ್ಸ್ ನಲ್ಲಿರುವ ಹೆಚ್ಐವಿ 5 ಹೊಟೆಲ್ ಮತ್ತು ಚನ್ನಸಂದ್ರದ ಮುಖ್ಯರಸ್ತೆಯಲ್ಲಿರುವ ಆನಂದ್ ಬಾರ್ ಮತ್ತು ರೆಸ್ಟೋರೆಂಟ್ ನ ರೂಫ್ ಟಾಪ್ (ಮೇಲ್ಛಾವಣಿ)ಗೆ ಬೀಗ ಹಾಕಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com