ಭಾರತೀಯ ಭಾಷೆಗಳು ಹೆಚ್ಚು ಸೃಜನಶೀಲ; ಕಥೆ ಹೇಳುವ ಮತ್ತು ಕೇಳುವ ಪ್ರವೃತ್ತಿ ನಮ್ಮ ರಕ್ತದಲ್ಲಿದೆ: ಚಂದ್ರಶೇಖರ ಕಂಬಾರ (ಸಂದರ್ಶನ)

ಪ್ರಾಥಮಿಕ ಶಾಲೆಯವರೆಗೆ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಖ್ಯಾತ ಕವಿ, ನಾಟಕಕಾರ, ಜಾನಪದ ತಜ್ಞ ಚಂದ್ರಶೇಖರ ಕಂಬಾರ. ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 86ರ ಇಳಿ ವಯಸ್ಸಿನಲ್ಲಿ ಕೂಡ ಚಂದ್ರಶೇಖರ ಕಂಬಾರ ಅವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಬರೆಯುತ್ತಾರೆ.
ಕನ್ನಡದ ಕವಿ, ಸಾಹಿತಿ ಡಾ ಚಂದ್ರಶೇಖರ ಕಂಬಾರ
ಕನ್ನಡದ ಕವಿ, ಸಾಹಿತಿ ಡಾ ಚಂದ್ರಶೇಖರ ಕಂಬಾರ

ಪ್ರಾಥಮಿಕ ಶಾಲೆಯವರೆಗೆ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಮಕ್ಕಳಿಗೆ ಕಲಿಸಬೇಕು ಎನ್ನುತ್ತಾರೆ ಖ್ಯಾತ ಕವಿ, ನಾಟಕಕಾರ, ಜಾನಪದ ತಜ್ಞ ಚಂದ್ರಶೇಖರ ಕಂಬಾರ.  ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ  86ರ ಇಳಿ ವಯಸ್ಸಿನಲ್ಲಿ ಕೂಡ ಚಂದ್ರಶೇಖರ ಕಂಬಾರ ಅವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಬರೆಯುತ್ತಾರೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದರೂ ಅವರ ಮನಸ್ಸು ಹೃದಯ ಇರುವುದು ಬೆಳಗಾವಿಯ ಹಳ್ಳಿಯಲ್ಲಿ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಕಂಬಾರರು ಭಾರತೀಯ ಭಾಷೆಗಳು ವಿಶ್ವದಲ್ಲೇ ಅತ್ಯಂತ ಸೃಜನಶೀಲವಾಗಿವೆ ಎನ್ನುತ್ತಾರೆ, 
“ನಾವು ಭಾರತೀಯರು ಒಂದೇ ಕಥೆಗಳನ್ನು ವಿಭಿನ್ನ ರೀತಿಯಲ್ಲಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಭಾರತೀಯ ಭಾಷೆಗಳು ಹೆಚ್ಚು ಸೃಜನಶೀಲವಾಗಿವೆ, ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಪಾದಕರು ಮತ್ತು ಸಿಬ್ಬಂದಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪಕ ಉಪಕುಲಪತಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಸಂದರ್ಶನದ ಆಯ್ದ ಭಾಗಗಳು ಇಂತಿದೆ: 
ಭಾಷೆ ಮತ್ತು ಸಾಹಿತ್ಯ ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಅಗತ್ಯ ಎಂದು ನೀವು ಭಾವಿಸುತ್ತೀರಾ?
ಖಂಡಿತಾ ಇಲ್ಲ. 12ನೇ ಶತಮಾನದಲ್ಲಿ ವಚನ ಸಾಹಿತ್ಯ ಮುನ್ನಲೆಗೆ ಬಂತು. ಆದರೆ ಅದರ ಬೆಳವಣಿಗೆಗೆ ಯಾವ ಚಕ್ರವರ್ತಿ ಕೊಡುಗೆ ನೀಡಿದರು ಹೇಳಿ? ಆದರೂ ಸಾಕಷ್ಟು ಸಾಹಿತ್ಯ ರಚನೆಯಾಯಿತು. ಎಲ್ಲ ಕನ್ನಡಿಗರು ಜಾತಿ ಮತ ಬೇಧವಿಲ್ಲದೆ ಒಟ್ಟಾಗಿ ಸೇರಿ ರಚಿಸಿದರು. ಸಾಹಿತ್ಯ ಚೆನ್ನಾಗಿದ್ದರೆ, ಪ್ರಸ್ತುತವಾಗಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದರು. ಇದು ವಿಶ್ವದ ಅತ್ಯುತ್ತಮ ಸಾಹಿತ್ಯವಾಗಿದ್ದು, 80 ಭಾಷೆಗಳಿಗೆ ಅನುವಾದವಾಗಿದೆ. ಸಾಹಿತ್ಯವನ್ನು ರಚಿಸದಿರುವುದಕ್ಕೆ ಕ್ಷಮೆಯಿಲ್ಲ ಮತ್ತು ಅದಕ್ಕೆ ಬೇರೆಯವರ ಪ್ರೋತ್ಸಾಹದ ಕೊರತೆ ಕಾರಣ ಎಂದು ದೂಷಿಸಬಾರದು.

ನಿಮ್ಮ ಕೃತಿಗಳಲ್ಲಿ ಸ್ತ್ರೀ ಪಾತ್ರಗಳಿಗೆ ಪ್ರಾಧಾನ್ಯತೆ ದೊರೆಯುತ್ತದೆ. ಸಮಾಜದಲ್ಲಿ ಕೂಡ ಸ್ತ್ರೀಯರಿಗೆ ಇದೇ ರೀತಿ ಪ್ರೋತ್ಸಾಹ ಇದೆ ಎಂದು ನೀವು ಭಾವಿಸುತ್ತೀರಾ?
ಹಳ್ಳಿಗಳಲ್ಲಿ, ನೀವು ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳಬಹುದು, ಆದರೆ ಅವರ ಪಾತ್ರವು ಜೀವನದಲ್ಲಿ ಮಹತ್ವದ್ದಾಗಿದೆ. ಮುಸ್ಲಿಂ ರಾಜರು ನಮ್ಮ ಮೇಲೆ ದಾಳಿ ಮಾಡಿದ ನಂತರ ಪಿತೃ ಪ್ರಧಾನ ವ್ಯವಸ್ಥೆ ನಮ್ಮ ದೇಶಕ್ಕೆ ಬಂದಿತು. ಅದರ ಬಗ್ಗೆ ನಾನು ನಿಮಗೆ ಕಥೆಗಳನ್ನು ಹೇಳಬಲ್ಲೆ.

ವರ್ಷಗಳುರುಳಿದಂತೆ ಓದುಗರ ಮನಸ್ಥಿತಿ ಬದಲಾಗಿದೆಯೇ?
ಓದುಗರು ಈಗ ಸೆಲ್‌ಫೋನ್‌ಗಳಂತಹ ಅನೇಕ ಆಯ್ಕೆಗಳನ್ನು ಕಂಡುಕೊಳ್ಳುತ್ತಾರೆ, ಅಲ್ಲಿ ಕಥೆಗಳನ್ನು ಹೇಳಬಹುದು. ನಮ್ಮ ದೇಶದಲ್ಲಿ, ನಾವು ಕಥೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ.

ಇಂಗ್ಲಿಷ್ ಭಾಷೆಯ ವ್ಯಾಮೋಹ ಭಾರತೀಯ ಭಾಷೆಗಳ ಮೇಲೆ ಪರಿಣಾಮ ಬೀರಿದೆ. ಜನರು ಪ್ರಾದೇಶಿಕ ಭಾಷೆಗಳ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆಯೇ? ಅದನ್ನು ಜಯಿಸುವುದು ಹೇಗೆ?
ಹೌದು, ಇಂಗ್ಲಿಷ್ ಭಾಷೆ ಜನರ ಜೀವನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ರೀತಿ ಆಗುವುದು ಸಹಜ ಕೂಡ. ಇಂಗ್ಲಿಷ್ ಭಾಷೆ ಅಧಿಕಾರವನ್ನು ತಲುಪಿದೆ. ಮೆಕಾಲೆಯ ಕಾಲದಿಂದಲೂ, ನಾವು ಇದನ್ನು ಜಯಿಸಲು ಹೆಣಗಾಡುತ್ತಿದ್ದೇವೆ. ಇಲ್ಲಿ ನಾವು ಒಂದು ವಿಷಯವನ್ನು ಅರಿತುಕೊಳ್ಳಬೇಕು. ಭಾರತೀಯ ಭಾಷೆಗಳಿಲ್ಲದೆ ಸೃಜನಶೀಲತೆ ಇಲ್ಲ. ಅದು ನಮ್ಮ ಪರಮಾಧಿಕಾರ. ಹೆಚ್ಚಿನ ಕಥೆಗಳು ಭಾರತದಲ್ಲಿ ಹುಟ್ಟಿವೆ ಕಥೆಗಳನ್ನು ಹೇಳುವುದು, ಕೇಳುವುದು ನಮ್ಮ ರಕ್ತದಲ್ಲಿಯೇ ಇದೆ.

ಟಿವಿ ಮತ್ತು ಇಂಟರ್ನೆಟ್‌ ಲಭ್ಯತೆ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕಥೆ ಹೇಳುವ ಕೌಶಲ್ಯವಿದೆಯೇ?
ಮುಕ್ತತೆ ಕಥೆಯ ಸೃಜನಶೀಲತೆಯನ್ನು ಸಾಯಿಸುತ್ತದೆ, ಇದು ಕಥೆಯನ್ನು ನಿರ್ದಿಷ್ಟ ರೀತಿಯಲ್ಲಿ ಹೇಳಬೇಕು, ಹೀಗೆ ಮತ್ತು ಹಾಗೆ ಹೇಳಬೇಕು ಎಂದು ಸರ್ವಾಧಿಕಾರ ಚಲಾಯಿಸುತ್ತದೆ. ಆದರೆ ಭಾರತದ ಶಕ್ತಿ ಮಾತಿನಲ್ಲಿದೆ. ಜಗತ್ತಿನಲ್ಲಿ ಸುಮಾರು 2 ಲಕ್ಷ ಕಥೆಗಳಿವೆ, ಎಲ್ಲವೂ ಭಾರತದಲ್ಲಿ ಹುಟ್ಟಿವೆ. ಬೇರೆಯವರು ನಮ್ಮಿಂದ ಎರವಲು ಪಡೆಯುತ್ತಾರೆ. 

ಹೊಸ ಪ್ರಕಾರದ ಬರಹಗಾರರ ಬಗ್ಗೆ ಏನು ಹೇಳುತ್ತೀರಿ?
ಅವರಿಗೆ ಸಾಕಷ್ಟು ವ್ಯಾಪ್ತಿ ಮತ್ತು ಅವಕಾಶಗಳಿವೆ. ನಾವು ಚಿಕ್ಕವರಾಗಿದ್ದಾಗ ಬೆಳಗಾವಿಯ ವ್ಯಕ್ತಿಯೊಬ್ಬರು ನಮ್ಮ ಹಳ್ಳಿಗೆ ರೇಡಿಯೋ ತಂದಿದ್ದರು. ನಾವೆಲ್ಲರೂ ಅವರ ಹಿಂದೆಯೇ ಓಡಾಡಿ ರೇಡಿಯೊ ಆಲಿಸಿ ವಿಷಯ ಕೇಳುತ್ತಿದ್ದೆವು. ರೇಡಿಯೊದಲ್ಲಿ ಬರುತ್ತಿದ್ದ ಕಥೆಗಳು ಆ ದಿನಗಳಲ್ಲಿ ನಮಗೆ ಊಹೆಗೂ ನಿಲುಕದವು. ರೇಡಿಯೋ ಮತ್ತು ಟಿವಿ ಹೊಸದಾಗಿತ್ತು. ಅದರೊಳಗೆ ಮನುಷ್ಯರಿರಬಹುದು ಎಂದುಕೊಂಡೆವು. ಆ ಕಾಲದಲ್ಲಿ ನಡೆದ ‘ಬಯಲಾಟ’ ನಾಟಕಗಳಲ್ಲಿ ಜನರು ಇದನ್ನು ಉಲ್ಲೇಖಿಸುತ್ತಿದ್ದರು. ಹೊಸ ವಿಷಯಗಳು ಬಂದಾಗ, ಅವು ಬದಲಾವಣೆಯನ್ನು ತರುತ್ತವೆ.

ತಂತ್ರಜ್ಞಾನದ ಬೆಳವಣಿಗೆಗಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆಯೇ?
ತಂತ್ರಜ್ಞಾನವು ಕಥೆ ಹೇಳುವ ವೇಗ ಹೆಚ್ಚಿಸುತ್ತದೆ. ಒಬ್ಬರು ಸನ್ನೆಗಳನ್ನು ಸಹ ಸಂವಹನ ಮಾಡಬಹುದು. ತಂತ್ರಜ್ಞಾನವು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಾವು ಸೆಲ್ ಫೋನ್‌ಗಳಲ್ಲಿ ಕಥೆಗಳನ್ನು ಹೇಳುವುದಿಲ್ಲವೇ? ಆಗುತ್ತಿದೆ ಮತ್ತು ಅದು ನಿಂತ ನೀರಾಗಿಲ್ಲ. ಏನೇ ಬದಲಾವಣೆಗಳಿದ್ದರೂ, ನಮ್ಮ ಕಥೆ ಹೇಳುವಿಕೆಯು ಅದಕ್ಕೆ ಹೊಂದಿಕೊಳ್ಳುತ್ತದೆ. ಅದು ನಮ್ಮ ಶಕ್ತಿ.

ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಲು ಸರ್ಕಾರ ಏನು ಮಾಡಬೇಕು?
7ನೇ ತರಗತಿವರೆಗೆ ಬೋಧನಾ ಮಾಧ್ಯಮ ಕನ್ನಡವಾಗಿರಬೇಕು. ಪ್ರತಿಯೊಂದು ವಿಷಯವನ್ನು ಕನ್ನಡದಲ್ಲಿ ಕಲಿಸಬೇಕು. ಆ ನಂತರ ಸಾಧ್ಯವಾದರೆ ಎಸ್ ಎಸ್ ಎಲ್ ಸಿ ವರೆಗೆ ವಿಸ್ತರಿಸಿ. ಸರಕಾರ ಈ ರೀತಿ ಮಾಡಿದರೆ ವಿದ್ಯಾರ್ಥಿಗಳು ಕನ್ನಡ ಕಲಿಯುವುದಷ್ಟೇ ಅಲ್ಲ, ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಅವರು ಇಂಗ್ಲಿಷ್ ಕಥೆಗಳನ್ನು ಕನ್ನಡದಲ್ಲಿ ಹೇಳಲು ಪ್ರಾರಂಭಿಸುತ್ತಾರೆ. ಕನ್ನಡ ವಿಶ್ವವಿದ್ಯಾಲಯದೊಂದಿಗೆ ನಾನು ಇದ್ದ ಸಮಯದಲ್ಲಿ, ನಾವು ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಅವುಗಳನ್ನು ರಾಜ್ಯಾದ್ಯಂತ ತ್ವರಿತವಾಗಿ ಮಾರಾಟ ಮಾಡಲಾಯಿತು. ವಿದ್ಯಾರ್ಥಿಗಳು ಕನ್ನಡದಲ್ಲಿ ಪಾಠಗಳನ್ನು ಓದುತ್ತಿದ್ದರು ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದರು. ಅವರು ತಮ್ಮ ಮಾತೃಭಾಷೆಯಲ್ಲಿದ್ದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದು ನಮ್ಮ ಸರ್ಕಾರಕ್ಕೆ ಸಾಧ್ಯ, ಆದರೆ ಅವರು ಅದನ್ನು ಮಾಡುವುದಿಲ್ಲ. ಈ ಪ್ರಯೋಗದಲ್ಲಿ ನಾವು ಯಶಸ್ವಿಯಾಗುತ್ತೇವಂತೆ ಹಾಗಿರುವ ಸರ್ಕಾರಕ್ಕೆ ಏಕೆ ಸಾಧ್ಯವಾಗುವುದಿಲ್ಲ?

ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣಗಳು ಕೂಡ ಮಾತೃಭಾಷೆಯಲ್ಲಿಯೇ ಇರಬೇಕೆ?
ಇದ್ದರೆ ಉತ್ತಮ. ಆದರೆ ಶಿಕ್ಷಕರಿಗೆ ಇಂಗ್ಲಿಷ್ ವ್ಯಾಮೋಹ. ಅವರು ಇಂಗ್ಲಿಷ್‌ನಲ್ಲಿ ಕಲಿಸಿದರೆ, ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚು ಗೌರವಿಸುತ್ತಾರೆ ಎಂದು ಅವರು ಭಾವಿಸುತ್ತಾರೆ. ಅಂತಹ ಕೀಳರಿಮೆ ಅವರಲ್ಲಿದೆ.

ಕನ್ನಡಿಗರಿಗೆ ಖಾಸಗಿ ವಲಯಗಳಲ್ಲಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಶಿಫಾರಸು ಮಾಡುವ ಸರೋಜಿನಿ ಮಹಿಷಿ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ನಮ್ಮ ಮಾತೃಭೂಮಿ. ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಶೇಕಡವಾರು ಮೀಸಲಾತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ಧರಿಸಬೇಕು. ಬೇರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬಂದವರಿದ್ದು, ಅವರೂ ಕನ್ನಡ ಕಲಿಯಲು ಬಯಸುತ್ತಿದ್ದಾರೆ. ಭಾಷೆಗಳ ಮೇಲೆ ಜಗಳವಾಡುವುದು ಮೂರ್ಖತನ. ಎಲ್ಲವೂ ನಮ್ಮ ಭಾಷೆಗಳು.

ಹಿಂದಿ ಹೇರಿಕೆ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಯಾರು ಹೆಚ್ಚು ಮೂರ್ಖರು ಎಂದು ಎರಡು ಗುಂಪುಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡು ಅವಧಿಗೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ಸಂಸ್ಥೆಯನ್ನು ನಡೆಸಲು ನಾನು ಅನಿವಾರ್ಯವಾಗಿ ಇಂಗ್ಲಿಷಿನಲ್ಲಿ ಮಾತನಾಡಬೇಕಿತ್ತು.

ಸರ್ಕಾರದ ವಿರುದ್ಧ ಪ್ರತಿಭಟಿಸಲು ಕೆಲವು ಬರಹಗಾರರು ಪ್ರಶಸ್ತಿಗಳನ್ನು ಹಿಂದಿರುಗಿಸಿದ ಬಗ್ಗೆ ನೀವು ಏನು ಹೇಳುತ್ತೀರಿ?
ಪ್ರಶಸ್ತಿಗಳನ್ನು ಹಿಂತಿರುಗಿಸಿದರೂ ಪರವಾಗಿಲ್ಲ. ಅಂಥವರಿಗೆ ಅನಗತ್ಯ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಪ್ರಶಸ್ತಿಗಳನ್ನು ಉಳಿಸಿಕೊಳ್ಳಬೇಕೋ ಅಥವಾ ಹಿಂದಿರುಗಿಸಬೇಕೋ ಎಂಬುದು ಬರಹಗಾರರಿಗೆ ಬಿಟ್ಟ ವಿಚಾರ.

ಕನ್ನಡ ಬಿಟ್ಟು ಬೇರೆ ಭಾಷೆಗಳು ಹೆಚ್ಚಾಗಿ ಕೇಳಿಬರುವ ಬೆಂಗಳೂರನ್ನು ನೀವು ಹೇಗೆ ನೋಡುತ್ತೀರಿ?
ಇಲ್ಲಿ ಅನೇಕ ಹೊರಗಿನವರು ಇದ್ದಾರೆ. ಅದಕ್ಕಾಗಿಯೇ ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಒಂದು ಭಾಷೆಯ ಬಲವು ಇತರ ಭಾಷೆಗಳಿಗೆ ಹಾಸುಹೊಗುತ್ತವೆ. ನಮ್ಮ ಕಥೆಗಳನ್ನು ಹಲವು ಭಾಷೆಗಳಲ್ಲಿ ಹೇಳಬಹುದು. ಬ್ರಿಟಿಷರಿಗೆ ಕಥೆ ಹೇಳುವುದನ್ನು ಕಲಿಸಿದ್ದು ನಾವೇ.

ಹೆಚ್ಚಿನ ಕಥೆಗಳು ಗ್ರಾಮೀಣ ಪ್ರದೇಶಗಳಿಂದ ಹುಟ್ಟಿಕೊಂಡಿವೆ. ಆದರೆ ಹಳ್ಳಿಗಳಿಂದ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ನಮ್ಮ ಕಥೆ ಹೇಳುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸುತ್ತೀರಾ?
ನಾವು ವಲಸೆಯನ್ನು ತಡೆಯಲು ಸಾಧ್ಯವಿಲ್ಲ. ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದವನು. ನಾನು ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ಆದರೆ ನನ್ನ ಹಳ್ಳಿಯಂತೆ ಯಾವುದೂ ನನಗೆ ಅನಿಸುವುದಿಲ್ಲ. ಹಳ್ಳಿಯಲ್ಲಿ ಅಂತಹ ಅದ್ಭುತ ಜೀವನವಿದೆ. ಆದರೆ ಹಳ್ಳಿಯ ಆ ಸೊಗಡುತನ ಕಳೆದುಹೋಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಜನರು ಹಳ್ಳಿಗಳಲ್ಲಿ ಉಳಿಯಲು ಸಿದ್ಧರಿಲ್ಲ.

ಕನ್ನಡ ರಂಗಭೂಮಿಯ ಸ್ಥಿತಿ ಏನು?
ಜನ ಸಿನಿಮಾವನ್ನು ರಂಗಭೂಮಿಗೆ ಹೋಲಿಸುತ್ತಾರೆ. ಈಗ ಹಳ್ಳಿಗಳಲ್ಲಿ ನಾಟಕ ನೋಡಲು ಯಾರೂ ಹೋಗುವುದಿಲ್ಲ. ಅಕ್ಕಪಕ್ಕದ ಹಳ್ಳಿಗಳಲ್ಲಿ ನಾಟಕಗಳನ್ನು ನೋಡಲು ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿದ್ದೆವು.

ಅನೇಕ ಬರಹಗಾರರಿಗೆ ಬೆದರಿಕೆ ಕರೆಗಳು ಮತ್ತು ಪತ್ರಗಳು ಬಂದವು. ಇದು ಎಷ್ಟು ಅಪಾಯಕಾರಿ?
ಇದು ಒಳ್ಳೆಯ ಬೆಳವಣಿಗೆಯಲ್ಲ.

ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರಕ್ಕೆ ನಿಮ್ಮ ಸಂದೇಶವೇನು? ಕನ್ನಡದ ಬೆಳವಣಿಗೆಗೆ ಏನು ಮಾಡಬೇಕು?
ಸರ್ಕಾರಗಳು ಬದಲಾದಂತೆ ನೀತಿಗಳು ಬದಲಾಗುತ್ತವೆ ಮತ್ತು ಪಠ್ಯಪುಸ್ತಕಗಳನ್ನು ಬದಲಾಯಿಸುತ್ತವೆ. ಈ ಬಾರಿ ಪಠ್ಯಪುಸ್ತಕ ಬದಲಾವಣೆ ಮಾಡಿ ಹಳೆಯ ಪಠ್ಯಪುಸ್ತಕಗಳನ್ನು ಮರಳಿ ತಂದರು. ಮಕ್ಕಳ ಭವಿಷ್ಯದ ಜೊತೆ ಆಟವಾಡಬಾರದು. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳು ತಮ್ಮ ರಾಜಕೀಯವನ್ನು ಬೇರೆಡೆಯಲ್ಲಿ ಆಡಲಿ, ಆದರೆ ಪಠ್ಯಪುಸ್ತಕ ಮತ್ತು ಭಾಷೆಯ ಮೇಲೆ ಅಲ್ಲ. ಇದು ಕಲಿಕೆಯ ಪ್ರಕ್ರಿಯೆಯಲ್ಲಿರುವ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಗುವು ತನ್ನ ಶಿಕ್ಷಕರು ಹೇಳುವ ಕಥೆಯನ್ನು ಪಡೆದು ಅದನ್ನು ತನ್ನ ತಾಯಿ, ಸ್ನೇಹಿತರು ಮತ್ತು ವಿವಿಧ ಜನರಿಗೆ ವಿವಿಧ ರೀತಿಯಲ್ಲಿ ಹೇಳುತ್ತದೆ. ನಮ್ಮ ಭಾಷೆ ಎಷ್ಟು ಸೃಜನಾತ್ಮಕವಾಗಿದೆ ಎಂದರೆ ಒಂದೊಂದು ಕಥೆಯನ್ನು ವಿವಿಧ ರೀತಿಯಲ್ಲಿ ನಿರೂಪಿಸಬಹುದು. ಅದು ಭಾರತೀಯ ಭಾಷೆಗಳ ಶಕ್ತಿ. ಧರ್ಮ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಕ್ರೈಸ್ತರು ಇದರಿಂದ ಸಂತಸಗೊಂಡರು. ರಾಮಾಯಣ ಮತ್ತು ಮಹಾಭಾರತದ ಅಸಂಖ್ಯಾತ ಆವೃತ್ತಿಗಳಿವೆ. ಇದು ನಮ್ಮ ದೇಶದ ಸೃಜನಶೀಲತೆಗೆ ಸಾಕ್ಷಿಯಾಗಿದೆ. ನೀವು ಎಲ್ಲಿಗೆ ಹೋದರೂ, ನಿಮಗೆ ವಿವಿಧ ಕಥೆಗಳು ಕಂಡುಬರುತ್ತವೆ.

ಈ ವರ್ಷ 68 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತಿದೆಯಲ್ಲವೇ?
ಕಲಾವಿದರು, ಸಾಹಿತಿಗಳಿಗೆ ಪ್ರಶಸ್ತಿ ನೀಡಬೇಕು. ಸಿನಿಮಾ ಮಂದಿಗೆ ಹಲವು ಪ್ರಶಸ್ತಿಗಳು ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ನಮ್ಮ ಕಲಾವಿದರಿಗೆ ಆದ್ಯತೆ ನೀಡಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ. ಅವುಗಳನ್ನು ಪರಿಗಣಿಸಬೇಕು.

ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೀರಿ, ಭಾಷೆಗಳ ಬಗ್ಗೆ ಅವರ ಅಭಿಪ್ರಾಯವೇನು?
ಅವರು ಭಾಷೆಗಳನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ ಕೂಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com