ಸೂರ್ಯನತ್ತ ಹೆಜ್ಜೆ ಹಾಕಿದ ಇಸ್ರೋ: ಆದಿತ್ಯ-L1 ಮಿಷನ್‌ ಉಡಾವಣೆಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ವಿಜ್ಞಾನಿಗಳ ತಂಡ

ಪಿಎಸ್‌ಎಲ್‌ವಿಯಲ್ಲಿ ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್1 ಇನ್ನು ಕೆಲವೇ ಗಂಟೆಗಳಲ್ಲಿ ಉಡಾವಣೆಗೊಳ್ಳಲಿದ್ದು, ಇದಕ್ಕೂ ಮುನ್ನ ಯೋಜನೆ ಯಶಸ್ವಿಯಾಲೆಂದು ಪ್ರಾರ್ಥಿಸಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ವಿಜ್ಞಾನಿಗಳ ತಂಡ ತಿರುಪತಿ ಹಾಗೂ ಸುಳ್ಳೂರುಪೇಟೆ ಪಟ್ಟಣದ ಚೆಂಗಾಲಮ್ಮ ದೇವಸ್ಥಾನದಲ್ಲಿ ಭೇಟಿ ನೀಡಿ ವಿಶೇಶ ಪೂಜೆ ಸಲ್ಲಿಸಿದರು.
ಸುಳ್ಳೂರುಪೇಟೆಯ ಶ್ರೀ ಚೆಂಗಾಲಮ್ಮ ದೇವಸ್ಥಾನದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ್ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.
ಸುಳ್ಳೂರುಪೇಟೆಯ ಶ್ರೀ ಚೆಂಗಾಲಮ್ಮ ದೇವಸ್ಥಾನದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ್ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.

ನೆಲ್ಲೂರು: ಪಿಎಸ್‌ಎಲ್‌ವಿಯಲ್ಲಿ ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್1 ಇನ್ನು ಕೆಲವೇ ಗಂಟೆಗಳಲ್ಲಿ ಉಡಾವಣೆಗೊಳ್ಳಲಿದ್ದು, ಇದಕ್ಕೂ ಮುನ್ನ ಯೋಜನೆ ಯಶಸ್ವಿಯಾಲೆಂದು ಪ್ರಾರ್ಥಿಸಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ವಿಜ್ಞಾನಿಗಳ ತಂಡ ತಿರುಪತಿ ಹಾಗೂ ಸುಳ್ಳೂರುಪೇಟೆ ಪಟ್ಟಣದ ಚೆಂಗಾಲಮ್ಮ ದೇವಸ್ಥಾನದಲ್ಲಿ ಭೇಟಿ ನೀಡಿ ವಿಶೇಶ ಪೂಜೆ ಸಲ್ಲಿಸಿದರು.

ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಪ್ರತಿಕೃತಿಯನ್ನು ಹೊತ್ತೊಯ್ದ ವಿಜ್ಞಾನಿಗಳ ತಂಡ, ಯೋಜನೆ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು.

ಚೆಂಗಾಲಮ್ಮ ದೇವಸ್ಥಾನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎ ಶ್ರೀನಿವಾಸುಲು ರೆಡ್ಡಿ ನೇತೃತ್ವದಲ್ಲಿ ಅರ್ಚಕರು ವಿಜ್ಞಾನಿಗಳಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, ಶನಿವಾರ ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಆದಿತ್ಯ ಎಲ್-1 ಮಿಷನ್ ಸೂರ್ಯನನ್ನು ಅಧ್ಯಯನ ಮಾಡಲಿದೆ.  ಈ ಕಾರ್ಯಾಚರಣೆಯು ನಿಖರವಾದ ತ್ರಿಜ್ಯವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಜುಲೈನಲ್ಲಿ ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ತಂಡ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತ್ತು. ಚಂದ್ರನ ಮಿಷನ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸವನ್ನು ಬರೆದಿದೆ. ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಏಕೈಕ ದೇಶವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com