ಗದಗ: ಸೋಮೇಶ್ವರ ದೇವಸ್ಥಾನದಲ್ಲಿ ನಿಧಿ ಶೋಧ; ಶಿವನ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ಲಕ್ಕುಂಡಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಶುಕ್ರವಾರ ಹೊರತೆಗೆದಿದ್ದಾರೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ನಿಧಿಯನ್ನು ಪರಿಶೀಲಿಸಲು ದುಷ್ಕರ್ಮಿಗಳು ಶಿವನ ಮೂರ್ತಿಯನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಆಳಕ್ಕೆ ನೆಲವನ್ನು ಅಗೆದಿದ್ದಾರೆ.
ಸೋಮೇಶ್ವರ ದೇಗುಲದಲ್ಲಿ ನಿಧಿ ಶೋಧ ನಡೆಸಿರುವ ದುಷ್ಕರ್ಮಿಗಳು
ಸೋಮೇಶ್ವರ ದೇಗುಲದಲ್ಲಿ ನಿಧಿ ಶೋಧ ನಡೆಸಿರುವ ದುಷ್ಕರ್ಮಿಗಳು
Updated on

ಗದಗ: ಲಕ್ಕುಂಡಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಶುಕ್ರವಾರ ಹೊರತೆಗೆದಿದ್ದಾರೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

ನಿಧಿಯನ್ನು ಪರಿಶೀಲಿಸಲು ದುಷ್ಕರ್ಮಿಗಳು ಶಿವನ ಮೂರ್ತಿಯನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಆಳಕ್ಕೆ ನೆಲವನ್ನು ಅಗೆದಿದ್ದಾರೆ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ರಾತ್ರಿ ಅಗೆಯುವುದರಿಂದ ಐತಿಹಾಸಿಕ ಸ್ಥಳಗಳಲ್ಲಿ ಚಿನ್ನದ ಮಡಕೆಗಳು ಅಥವಾ ಗುಪ್ತ ನಿಧಿಗಳು ಸಿಗುತ್ತವೆ ಎಂಬ ವದಂತಿಗಳು ಜಿಲ್ಲೆಯಲ್ಲಿ ಹೇರಳವಾಗಿವೆ.

ಹಲವು ಐತಿಹಾಸಿಕ ದೇವಾಲಯಗಳಿರುವ ಜಿಲ್ಲೆಯ ಲಕ್ಕುಂಡಿ, ಗಜೇಂದ್ರಗಡ ಮತ್ತಿತರ ಕಡೆಗಳಲ್ಲಿ ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಗದಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಜ್ಯೋತಿಷಿಗಳು ಇನ್ನೂ ಅನೇಕ ಕಡೆಗಳಲ್ಲಿ ದೇವರ ವಿಗ್ರಹಗಳ ಕೆಳಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಅಲಂಕಾರಿಕ ಪಾತ್ರೆಗಳು ಇವೆ. ಹಿಂದೆ ರಾಜರು ಮತ್ತು ಅವರ ಮಂತ್ರಿಗಳು ತಮ್ಮ ಆಭರಣಗಳನ್ನು ಅಲ್ಲಿ ಸಂಗ್ರಹಿಸಿಡುತ್ತಿದ್ದರು ಎಂದು ನಂಬುತ್ತಾರೆ.  ಇದು ಗುಪ್ತ ಸಂಪತ್ತನ್ನು ಹುಡುಕುವ ಆಶಯದೊಂದಿಗೆ ವಿಗ್ರಹಗಳನ್ನು ಕಿತ್ತುಹಾಕಲು ದುಷ್ಕರ್ಮಿಗಳನ್ನು ಪ್ರೇರೇಪಿಸಿದೆ.

ಇನ್ನಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಇತಿಹಾಸ ಪ್ರೇಮಿಗಳು, ಇತಿಹಾಸ ತಜ್ಞರು ಆಗ್ರಹಿಸಿದ್ದಾರೆ. ಆದಾಗ್ಯೂ, ಈ ಹಲವಾರು ಐತಿಹಾಸಿಕ ದೇಗುಲಗಳು ಅವರ ಅಡಿಯಲ್ಲಿ ಬಾರದ ಕಾರಣ, ಅವರು ತಮ್ಮ ಮೇಲ್ವಿಚಾರಣೆಯಡಿ ಬರುವುದನ್ನು ಮಾತ್ರ ರಕ್ಷಿಸಲು ಸಿದ್ಧರಾಗಿದ್ದಾರೆ.

ದೇವಸ್ಥಾನದ ಅರ್ಚಕ ಸಿದ್ರಾಮಯ್ಯ ಮಾಯಕರಮಠ ಮಾತನಾಡಿ, ಹುಣ್ಣಿಮೆಯ ಮರುದಿನ ರಾತ್ರಿ (ನೂಲ ಹುಣ್ಣಿಮೆ) ಪೂಜೆ ಸಲ್ಲಿಸಲು ಬಂದಿದ್ದೆ. ಈ ವೇಳೆ ಶಿವ, ಬಸವಣ್ಣ ಮೂರ್ತಿಗಳನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಗುಂಡಿ ತೋಡಿರುವುದು ಕಂಡು ಬಂದಿದೆ. ಎರಡು ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂದರು.

ಈ ಸ್ಥಳವನ್ನು ಒಂದು ಕಾಲದಲ್ಲಿ ಸೋಮನಕಟ್ಟಿ ಎಂದು ಕರೆಯಲಾಗುತ್ತಿತ್ತು. ಶತಮಾನಗಳ ಹಿಂದೆ ಇಲ್ಲಿ ಜನವಸತಿ ಇತ್ತು. ಹಾಗಾಗಿ ಕೆಲವರು ಇಲ್ಲಿ ನಿಧಿಗಳಿವೆ ಎಂದು ಭಾವಿಸುತ್ತಾರೆ ಮತ್ತು ಅವರು ಆಭರಣ ಮತ್ತು ನಿಧಿಯ ದುರಾಸೆಯಿಂದ ಐತಿಹಾಸಿಕ ರಚನೆಗಳನ್ನು ಹಾನಿಗೊಳಿಸುತ್ತಾರೆ ಎಂದು ಕೆಲವು ಗ್ರಾಮಸ್ಥರು ಹೇಳಿದರು. 

ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು, ನಮಗೆ ಮಾಹಿತಿ ಸಿಕ್ಕಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com