ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದ ಬಿಜೆಪಿ ಬಡವರ ವಿರೋಧಿ: ಸಿಎಂ ಸಿದ್ದರಾಮಯ್ಯ

ಬಡವರಿಗೆ ಅಕ್ಕಿ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ವಿರೋಧಿಯಾಗಿದ್ದು, ಅವರ ನಡೆ ಅಮಾನವೀಯ.. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ರಾಜ್ಯದ ಜನತೆಗೆ ಗುರುವಾರ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಡವರಿಗೆ ಅಕ್ಕಿ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ವಿರೋಧಿಯಾಗಿದ್ದು, ಅವರ ನಡೆ ಅಮಾನವೀಯ.. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ರಾಜ್ಯದ ಜನತೆಗೆ ಗುರುವಾರ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿದಿನ ಹಾಲು ನೀಡುವ ‘ಕ್ಷೀರ ಭಾಗ್ಯ’ ಯೋಜನೆಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಅಕ್ಕಿ ನಿರಾಕರಿಸುವ ಮೂಲಕ ಬಿಜೆಪಿ ಹೇಯ ಕೃತ್ಯವೆಸಗಿದೆ. ಕೇಂದ್ರದ ಆಡಳಿತ ಪಕ್ಷ ಕರ್ನಾಟಕದ ಜನತೆಗೆ ಅನ್ನ ನಿರಾಕರಿಸಿದೆ ಎಂದು ಹೇಳಿದರು.

'ತಾವು ರಾಜ್ಯದ ಮುಖ್ಯಮಂತ್ರಿಯಾದಾಗ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪತ್ರ ಬರೆದಿದ್ದೆವು. ಆರಂಭದಲ್ಲಿ ಅಕ್ಕಿ ನೀಡುವುದಾಗಿ ಎಫ್‌ಸಿಐ ಭರವಸೆ ನೀಡಿತ್ತು, ಆದರೆ ಬಳಿಕ ಮಧ್ಯಪ್ರವೇಶಿಸಿದ್ದ ಕೇಂದ್ರ ಸರ್ಕಾರ ಅಕ್ಕಿ ನಿರಾಕರಿಸಿದೆ. ನಾವು ಅವರನ್ನು ನಂಬಿದ್ದೆವು. ಆದರೆ ಕೇಂದ್ರ ಸರ್ಕಾರವು ನಮಗೆ ಅಕ್ಕಿ ನಿರಾಕರಿಸಿದೆ, ಬಿಜೆಪಿ ಬಡವರ ಪರವಾಗಿದೆಯೇ? ಅವರಲ್ಲ. ನಾವು ಉಚಿತವಾಗಿ ಅಕ್ಕಿ ಕೇಳಲಿಲ್ಲ. ನಾವು ಅದನ್ನು ಪಾವತಿಸಲು ಸಿದ್ಧರಿದ್ದೇವೆ. ನಾವು ಕೆಜಿಗೆ 36 ರೂಪಾಯಿ ನೀಡಲು ಸಿದ್ಧರಿದ್ದೇವೆ. ಅಕ್ಕಿಗಾಗಿ ನಾವು ಕೇಳಿದಾಗ ಅವರು ಒಪ್ಪಿದರು ಮತ್ತು ನಂತರ ಹಿಂದೆ ಸರಿದರು, ಅವರು ಎಷ್ಟು ಹೇಯರು ಎಂದು ನೀವೆಲ್ಲರೂ ನಿರ್ಧರಿಸಬೇಕು. ಅವರು ಬಡವರ ವಿರೋಧಿಗಳು. ಅವರ ನಡೆ ಅಮಾನವೀಯರು ಎಂದು ಸಿದ್ದರಾಮಯ್ಯ ಹೇಳಿದರು.

‘ಚುನಾವಣೆಗೂ ಮುನ್ನ ನಾನು ನನ್ನ ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ನಿಮಗೆ 5 ಕೆಜಿಗಿಂತ ಹೆಚ್ಚು ಅಕ್ಕಿ ನೀಡುತ್ತಿದ್ದೆ, ಆದರೆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಉಚಿತ ಅಕ್ಕಿಯನ್ನು ಕೇವಲ 5 ಕೆಜಿಗೆ ಇಳಿಸಿದೆ, ನಾವು ಅಕ್ಕಿ ಖರೀದಿಸಲು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೇವೆ. ಅವರು ನಮಗೆ ಉತ್ತರಿಸಿದರು, ಮಾರಾಟ ಮಾಡಲು ಸಾಕಷ್ಟು ಅಕ್ಕಿ ಇದೆ ಎಂದು ಹೇಳಿದ್ದರು. ಅವರು ಅಕ್ಕಿ ನೀಡಲು ಸಿದ್ಧ ಎಂದು ಅವರು ನಮಗೆ ಭರವಸೆ ನೀಡಿದ್ದರು ಆದರೆ ಬಿಜೆಪಿ ಅಕ್ಕಿ ನೀಡಲು ನಿರಾಕರಿಸಿತು,”ಎಂದು ಅವರು ಹೇಳಿದರು.

ಜುಲೈ 10 ರಂದು ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ಮಾತ್ರ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ, ರಾಜ್ಯ ಸರ್ಕಾರವು ಅಕ್ಕಿ ಬದಲಿಗೆ ಹಣವನ್ನು ವಿತರಿಸುತ್ತಿದೆ. ಈ ಯೋಜನೆಯಡಿ, ಹೆಚ್ಚುವರಿ 5 ಕೆಜಿ ಅಕ್ಕಿಗೆ ಪ್ರತಿಯಾಗಿ ನೇರ ಲಾಭ ವರ್ಗಾವಣೆ ಮೂಲಕ ಫಲಾನುಭವಿಗಳಿಗೆ 170 ರೂ ಹಣ ವರ್ಗಾವಣೆ ಮಾಡುತ್ತಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಜನರಿಗೆ ನೀಡಿದ ಐದು ಚುನಾವಣಾ ಭರವಸೆಗಳಲ್ಲಿ ಅನ್ನ ಭಾಗ್ಯ ಯೋಜನೆಯೂ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com