ಹುಬ್ಬಳ್ಳಿ: 23 ಪಾರಿವಾಳಗಳ ಕುತ್ತಿಗೆ ಕೊಯ್ದು ಕೊಂದ ದುಷ್ಕರ್ಮಿಗಳು; ಹಳೆ ವೈಷಮ್ಯ ಕಾರಣ!

ಹುಬ್ಬಳ್ಳಿ ನಗರದಲ್ಲಿ ಹಳೆ ವೈಷಮ್ಯದಿಂದಾಗಿ ದುಷ್ಕರ್ಮಿಗಳು 23 ಪಾರಿವಾಳಗಳನ್ನು ಕೊಂದಿರುವ ಮನಕಲಕುವ ಘಟನೆ ನಡೆದಿದೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಯಾವಗಲ್ ಬಡಾವಣೆಯ ಮನೆಯೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಹಳೆ ವೈಷಮ್ಯದಿಂದಾಗಿ ದುಷ್ಕರ್ಮಿಗಳು 23 ಪಾರಿವಾಳಗಳನ್ನು ಕೊಂದಿರುವ ಮನಕಲಕುವ ಘಟನೆ ನಡೆದಿದೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಯಾವಗಲ್ ಬಡಾವಣೆಯ ಮನೆಯೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ.

ಆರೋಪಿಗಳು ರಾಹುಲ್ ದಾಂಡೇಲಿ ಎಂಬುವರಿಗೆ ಸೇರಿದ ಪಾರಿವಾಳಗಳ ಕುತ್ತಿಗೆ ಕೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರು ದಾಂಡೇಲಿಯಲ್ಲಿ ಕಳೆದ ಆರು ತಿಂಗಳಿಂದ ಪಾರಿವಾಳಗಳನ್ನು ಸಾಕುತ್ತಿದ್ದರು. ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಪಾರಿವಾಳದ ಗೂಡುಗಳನ್ನು ಸಹ ನಾಶಪಡಿಸಿದ್ದಾರೆ.

ಈ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಗೆ ದೂರು ನೀಡಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರಬಹುದೆಂದು ಶಂಕಿಸಿದ್ದಾರೆ.

ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಮತ್ತು ಜನರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com