ಆಸ್ತಮಾ ರಾಜಧಾನಿ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದೆ ಪಾರಿವಾಳಗಳ ಹಿಕ್ಕೆ!
ಆಸ್ತಮಾ ರಾಜಧಾನಿ ಬೆಂಗಳೂರಿನಲ್ಲಿ ಪಾರಿವಾಳಗಳ ಸಂತತಿ ಹೆಚ್ಚುತ್ತಿದ್ದು, ಇದರಿಂದ ಮನುಷ್ಯರಲ್ಲಿ ಹೈಪರ್‌ಸೆನ್ಸಿಟಿವ್ ನ್ಯುಮೋನಿಟಿಸ್(HP) ಮತ್ತು ಇತರ ಶ್ವಾಸಕೋಶದ ಸೋಂಕಿನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
Published: 08th March 2023 04:36 PM | Last Updated: 11th March 2023 07:44 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಆಸ್ತಮಾ ರಾಜಧಾನಿ ಬೆಂಗಳೂರಿನಲ್ಲಿ ಪಾರಿವಾಳಗಳ ಸಂತತಿ ಹೆಚ್ಚುತ್ತಿದ್ದು, ಇದರಿಂದ ಮನುಷ್ಯರಲ್ಲಿ ಹೈಪರ್‌ಸೆನ್ಸಿಟಿವ್ ನ್ಯುಮೋನಿಟಿಸ್(HP) ಮತ್ತು ಇತರ ಶ್ವಾಸಕೋಶದ ಸೋಂಕಿನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪಕ್ಷಿಶಾಸ್ತ್ರಜ್ಞರು ಮತ್ತು ನಗರ ಯೋಜಕರು ಪಾರಿವಾಳಗಳನ್ನು "ಕೀಟಗಳು" ಎಂದು ಕರೆಯುತ್ತಾರೆ ಮತ್ತು ಅವುಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.
ಸಾರ್ವಜನಿಕರಿಗೆ ವ್ಯಾಪಕವಾದ ಅರಿವಿನ ಕೊರತೆಯಿಂದ ಎಚ್ ಪಿ ಮತ್ತು ಶ್ವಾಸಕೋಶದ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರಮುಖವಾಗಿ ಪಾರಿವಾಳಗಳ ಹಿಕ್ಕೆ ಕಾರಣ ಎಂದು ಶ್ವಾಸಕೋಶ ತಜ್ಞರು ಹೇಳಿದ್ದಾರೆ.
ಎಚ್‌ಪಿಯಿಂದ 20 ಕ್ಕೂ ಹೆಚ್ಚು ಸಾವುಗಳನ್ನು ಕಂಡ ಮುಂಬೈಗೆ ಹೋಲಿಸಿದರೆ, ಬೆಂಗಳೂರಿನ ಪರಿಸ್ಥಿತಿ ಅಷ್ಟು ಕೆಟ್ಟದಾಗಿ ಇಲ್ಲ. ಆದರೆ ಬೆಂಗಳೂರಿನಲ್ಲಿ ಪಾರಿವಾಳಗಳನ್ನು ಪೋಷಿಸುವ ಮತ್ತು ಸಾಕುವ ಸಂಸ್ಕೃತಿಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಮುಂಬೈನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಸಂದೀಪ್ ಎಚ್.ಎಸ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸರಾಸರಿ 2-3 ಎಪ್ ಪಿ ಪ್ರಕರಣಗಳು ವರದಿಯಾಗಿವೆ. ನಾವು ಚಿಕಿತ್ಸೆ ನೀಡಿದ ಪ್ರಕರಣಗಳಲ್ಲಿ ಎಚ್‌ಪಿಗೆ ಹಲವು ಕಾರಣಗಳಿದ್ದರೂ, ರೋಗಿಗಳು ಪಾರಿವಾಳಕ್ಕೆ ಆಹಾರ ನೀಡುವವರು ಅಥವಾ ಪಾರಿವಾಳಗಳ ಸಮೀಪದಲ್ಲಿ ವಾಸಿಸುತ್ತಿರುವವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಆಸ್ತಮಾ ಸಮಸ್ಯೆಗೆ ಮನೆಮದ್ದುಗಳು...
ಒಂದು ಅಥವಾ ಎರಡು ಬಾರಿ ಪಾರಿವಾಳಗಳು ಇರುವ ಕಡೆ ಮತ್ತು ಅವುಗಳ ಹಿಕ್ಕೆಗಳಿರುವ ಕಡೆ ಹೋಗುವುದರಿಂದ HP ಬರುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಅದು ಪರಿಣಾಮ ಬೀರುತ್ತದೆ ಎಂದು ಡಾ ಸಂದೀಪ್ ಸ್ಪಷ್ಟಪಡಿಸಿದ್ದಾರೆ.
“ನಿಮ್ಮ ಮನೆಗೆ ಬರುವ ಪಾರಿವಾಳಗಳಿಗೆ ನೀವು ನಿಯಮಿತವಾಗಿ ಆಹಾರವನ್ನು ನೀಡುತ್ತಿದ್ದರೆ, ಹಿಕ್ಕೆಗಳು ನಿಮ್ಮ ಮನೆಯೊಳಗೆ ಮತ್ತು ಸುತ್ತಮುತ್ತಲಿದ್ದರೆ ಮತ್ತು ಅದನ್ನು ನಿಯಮಿತವಾಗಿ ಉಸಿರಾಡುವುದರಿಂದ ತೊಂದರೆಗಳು ಉಂಟಾಗುತ್ತವೆ. ಪಾರಿವಾಳಕ್ಕೆ ಆಹಾರ ನೀಡುವುದನ್ನು ನಿಲ್ಲಿಸಬೇಕು ಮತ್ತು ಅವುಗಳಿರುವ ಕಡೆ ಹೋಗದಿರುವುದು ಉತ್ತಮ ಚಿಕಿತ್ಸೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಪಾರಿವಾಳಗಳ ನಿರ್ವಹಣೆಗೆ ಯಾವುದೇ ನಿಗದಿತ ನಿಯಮಗಳಿಲ್ಲ ಮತ್ತು ಅವುಗಳನ್ನು ಪೋಷಿಸುವ ಸಂಸ್ಕೃತಿ ಅನೇಕ ಸ್ಥಳಗಳಲ್ಲಿ ಚಾಲ್ತಿಯಲ್ಲಿದೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್‌ನ ಸ್ಥಾಯಿ ಸಮಿತಿಯ ವೈದ್ಯರು ವರದಿಯಾದ ಪ್ರಕರಣಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ನಾಗರಿಕರು ತಮ್ಮ ಸುತ್ತಲಿನ ಹೆಚ್ಚಿನ ಸಂಖ್ಯೆಯ ಪಾರಿವಾಳಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು, ವಿಶೇಷವಾಗಿ ಅವರು ಹಿಕ್ಕೆಗಳನ್ನು ಬಿಡುವ ಸ್ಥಳಗಳನ್ನು ಸ್ವಚ್ಛವಾಗಿಡಬೇಕು ಎಂದು ಐಎಂಎ ಅಧಿಕಾರಿಗಳು ತಿಳಿಸಿದ್ದಾರೆ.