ವೋಚರ್‌ಗಳಿಗಾಗಿ ಸರ್ವರ್‌ಗೆ ಕನ್ನ; ಆಂಧ್ರ ಪ್ರದೇಶದಲ್ಲಿ ಐಐಐಟಿ ಪದವೀಧರನ ಬಂಧನ!
ಬೆಂಗಳೂರು: ಇತ್ತೀಚೆಗೆ ಕಂಪನಿಯೊಂದರ ಸರ್ವರ್ ಹ್ಯಾಕ್ ಮಾಡಿದ ಮತ್ತು ಗ್ರಾಹಕರಿಗೆ ತಲುಪಬೇಕಿದ್ದ ವೋಚರ್‌ಗಳನ್ನು ತೆಗೆದುಕೊಂಡಿದ್ದಕ್ಕಾಗಿ ಆಂಧ್ರಪ್ರದೇಶದ 23 ವರ್ಷದ ಐಐಐಟಿ ಪದವೀಧರನೊಬ್ಬನನ್ನು ಬಂಧಿಸಲಾಗಿದೆ. ಈತ ಈ ವೋಚರ್‌ಗಳನ್ನು ಬಳಸಿ ಆನ್‌ಲೈನ್ ಖರೀದಿ ಮಾಡುತ್ತಿದ್ದ ಎನ್ನಲಾಗಿದೆ.
ಗ್ರಾಹಕರ ದೂರಿನ ಮೇರೆಗೆ ರಿವಾರ್ಡ್ ಸಂಸ್ಥೆಯೊಂದು ಆಗ್ನೇಯ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿತ್ತು.
ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 5.2 ಕಿಲೋಗ್ರಾಂ ಚಿನ್ನ, 27.2 ಕೆಜಿ ಬೆಳ್ಳಿ, ಆಟೋಮೊಬೈಲ್ ಮತ್ತು ಇತರ ಸುಮಾರು 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದ ಬೊಮ್ಮಲೂರು ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. ವೈಟ್ ಫೀಲ್ಡ್‌ನ ವೈಟ್ ರೋಸ್ ಲೇಔಟ್‌ನಲ್ಲಿ ಈತ ವಾಸವಿದ್ದ. ಆತ ಆಂಧ್ರಪ್ರದೇಶದ ಓಂಗೋಲ್‌ನ ಐಐಐಟಿಯಲ್ಲಿ ಬಿಟೆಕ್ ವ್ಯಾಸಂಗ ಮಾಡಿದ್ದಾನೆ.
ಅಧ್ಯಯನದ ಸಮಯದಲ್ಲಿ, ಆತ ನೈತಿಕ ಮತ್ತು ಅನೈತಿಕ ಹ್ಯಾಕಿಂಗ್ ಸೇರಿದಂತೆ ಹಲವು ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತಿದ್ದ. ಕ್ರಿಪ್ಟೋ ಕರೆನ್ಸಿಯಲ್ಲೂ ಹೂಡಿಕೆ ಆರಂಭಿಸಿದ್ದನು. ನಗರದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ನಂತರ ದುಬೈಗೆ ತೆರಳಿ ಅಲ್ಲಿಯೇ ಕೆಲಸ ಆರಂಭಿಸಿದ್ದನು. ಬಳಿಕ ಬೆಂಗಳೂರಿಗೆ ಹಿಂತಿರುಗಿದ್ದನು ಮತ್ತು ನಗರದ ಫಾರ್ಚೂನ್ ಸಮ್ಮಿಟ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ರಿವಾರ್ಡ್ ಸಂಸ್ಥೆಯ ಸರ್ವರ್ ಅನ್ನು ಹ್ಯಾಕ್ ಮಾಡಿದ್ದಾನೆ ಎಂದು ಬೆಂಗಳೂರಿನ ಪೊಲೀಸ್ ಆಯುಕ್ತ ಬಿ ದಯಾನಂದ ಮಂಗಳವಾರ ತಿಳಿಸಿದ್ದಾರೆ.
'ಆರೋಪಿಯು ಒಬ್ಬಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಐದು ತಿಂಗಳಿನಿಂದ ಇದರಲ್ಲಿ ಸಕ್ರಿಯರಾಗಿದ್ದನು. ಈತನಿಗೆ ಯಾವುದೇ ಕ್ರಿಮಿನಲ್ ಇತಿಹಾಸ ಇಲ್ಲ. ಬೆಲೆಬಾಳುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ನಂತರ ಅವುಗಳನ್ನು ಆಂಧ್ರಪ್ರದೇಶದ ತನ್ನ ಮನೆಯಲ್ಲಿ ಇರಿಸಿದ್ದ. ಬೆಲೆಬಾಳುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಷಾರಾಮಿ ಜೀವನ ನಡೆಸಲು ಸರ್ವರ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ. ಆತ ತನ್ನ ಕೆಲಸದ ಸ್ಥಳಗಳಲ್ಲಿ ಗಿಫ್ಟ್ ವೋಚರ್‌ಗಳನ್ನು ಪಡೆದಿದ್ದಾನೆ. ಅದು ಆತನ ಆಸಕ್ತಿಯನ್ನು ಹೆಚ್ಚಿಸಿದೆ ಮತ್ತು ಆತ ಅವುಗಳ ಬಗ್ಗೆ ಸಂಶೋಧನೆ ನಡೆಸಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ