ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.‌ಎಸ್. ವಿಶ್ವನಾಥ್ ನಿಧನ: ಸಿಎಂ ಸೇರಿ ಹಲವು ಗಣ್ಯರ ಸಂತಾಪ

ಸಹಕಾರಿ ದಿಗ್ಗಜ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆದ ಬಿ.ಎಸ್ ವಿಶ್ವನಾಥ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 
ಬಿಎಸ್ ವಿಶ್ವನಾಥ್
ಬಿಎಸ್ ವಿಶ್ವನಾಥ್

ಬೆಂಗಳೂರು: ಸಹಕಾರಿ ದಿಗ್ಗಜ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆದ ಬಿ.ಎಸ್ ವಿಶ್ವನಾಥ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 

ತೀರ್ಥಹಳ್ಳಿ ತಾಲೂಕಿನ ಬಸರಹಳ್ಳಿ ಗ್ರಾಮದ ವಿಶ್ವನಾಥ್ ಅವರು ರಾಜ್ಯ ಭೂ ಬ್ಯಾಂಕ್ ಅಧ್ಯಕ್ಷ, ರಾಷ್ಟ್ರೀಯ ಸಹಕಾರಿ ತರಬೇತಿ ಕೇಂದ್ರದ ಅಧ್ಯಕ್ಷ, ತೀರ್ಥಹಳ್ಳಿ ಪುರಂದರ ವೇದಿಕೆ ಸ್ಥಾಪಕ, ಇಫ್ಕೋ ಸಂಸ್ಥೆಯ ನಿರ್ದೇಶಕ, ಕೆನರಾ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.  

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ವಿಶ್ವನಾಥ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ, ಕೆನರಾ ಬ್ಯಾಂಕ್ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದ ವಿಶ್ವನಾಥ್ ಅವರ ಅಗಲಿಕೆ ತುಂಬಿಬಾರದ ನಷ್ಟ ಎಂದಿದ್ದಾರೆ. 

ಸಾಂಸ್ಕೃತಿಕ ರಾಯಭಾರಿಯೂ ಜೊತೆಗೆ ವಿ‌ಕೃ ಗೋಕಾಕ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಬಿ.‌ಎಸ್. ವಿಶ್ವನಾಥ್ ಅವರು ನಿಧನರಾಗಿರುವ ಸುದ್ದಿ ತಿಳಿದು ಅತ್ಯಂತ ಬೇಸರ ಉಂಟುಮಾಡಿದೆ ಎಂದು ಕೃಷಿ ಸಚಿವ ಎನ್. ಚಲುವನಾರಾಯಸ್ವಾಮಿ ಟ್ವೀಟ್ ಸಂದೇಶದಲ್ಲಿ ಸಂತಾಪ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com