ಕಾವೇರಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಗಂಭೀರವಾಗಿ, ವಿವೇಚನೆಯಿಂದ ವರ್ತಿಸಬೇಕು: ಕುರುಬೂರು ಶಾಂತಕುಮಾರ್

ಕಾವೇರಿ ನದಿ ನೀರಿನ ವಿಚಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗಂಭೀರವಾಗಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೋಮವಾರ ಆರೋಪಿಸಿದರು.
ಡಿ.ಕೆ ಶಿವಕುಮಾರ್ ಮತ್ತು ಕುರುಬೂರು ಶಾಂತಕುಮಾರ್
ಡಿ.ಕೆ ಶಿವಕುಮಾರ್ ಮತ್ತು ಕುರುಬೂರು ಶಾಂತಕುಮಾರ್
Updated on

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗಂಭೀರವಾಗಿಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೋಮವಾರ ಆರೋಪಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಹಲವಾರು ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಅವರು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಲ್ಲದೆ, ಬೆಂಗಳೂರು ಉಸ್ತುವಾರಿ ಸಚಿವರು ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಇದರಿಂದ ಕಾವೇರಿ ಸಮಸ್ಯೆಗೆ ಬೇಕಾದ ಸಮಯ ಮೀಸಲಿಡಲು ಅವಕಾಶ ನೀಡಿಲ್ಲ ಎಂದು ಶಾಂತಕುಮಾರ್ ಹೇಳಿದರು.

ಇತ್ತೀಚೆಗಷ್ಟೇ ನಾವು ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಮೂರು ದಿನಗಳ ಹಿಂದೆಯೇ ನೀರು ಬಿಡಲು ಆರಂಭಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದರ ಅರಿವಿಲ್ಲ ಎಂದರು. ಶಿವಕುಮಾರ್ ಅವರನ್ನು ನಾನು ದೂರುತ್ತಿಲ್ಲ. ಅವರ ಹೆಗಲ ಮೇಲೆ ಹಲವಾರು ಜವಾಬ್ದಾರಿಗಳಿವೆ. ಒಬ್ಬ ವ್ಯಕ್ತಿಗೆ ಇಷ್ಟು ಕರ್ತವ್ಯದ ಹೊರೆ ಹಾಕುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.

ನವದೆಹಲಿಯಲ್ಲಿ ಕಾನೂನು ತಂಡದೊಂದಿಗೆ ಕಾವೇರಿ ಸಭೆಗಳನ್ನು ಕರೆಯುವಾಗ, ಕರ್ನಾಟಕದ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದಾರೆ ಎಂದು ನಾನು ಕೇಳಿದ್ದೇನೆ. ಅವರು ದೆಹಲಿಗೆ ಹೋಗಿ ಮಾತುಕತೆ ನಡೆಸಬೇಕು. ಏಕೆಂದರೆ ವಿವಾದಕ್ಕೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಇದ್ದಿದ್ದರೆ ರೈತರಿಂದ ಹಣ ಸಂಗ್ರಹಿಸಿ ದೆಹಲಿಗೆ ಹೋಗಲು ಟಿಕೆಟ್ ಕೊಡಬಹುದಿತ್ತು ಎಂದು ವ್ಯಂಗ್ಯವಾಡಿದರು.

ಆದರೆ, ಈ ಹಿಂದೆ ಕಾವೇರಿ ವಿಚಾರವಾಗಿ ಹೋರಾಡಿದ ಕರ್ನಾಟಕದ ಕಾನೂನು ತಂಡದ ಭಾಗವಾಗಿದ್ದ ಮತ್ತು ಈಗ ಸುಪ್ರೀಂ ಕೋರ್ಟ್ ಸೇರಿದಂತೆ ಹಲವಾರು ಹೈಕೋರ್ಟ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವ ಕಾನೂನು ತಜ್ಞರು ಶಾಂತಕುಮಾರ್ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

ಆನ್‌ಲೈನ್‌ನಲ್ಲಿ ಮಾಡಬಹುದಾದಾಗ ದೆಹಲಿಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಅಗತ್ಯವೇನು? ಸಾಂವಿಧಾನಿಕ ವಿಷಯಗಳಲ್ಲಿಯೂ ಸಹ, ಸುಪ್ರೀಂ ಕೋರ್ಟ್‌ನಲ್ಲಿನ ಹಿರಿಯ ವಕೀಲರು ತಂತ್ರಜ್ಞಾನವನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ವಿಷಯಗಳನ್ನು ವಾದಿಸಿದ್ದಾರೆ. ಇದು ಅಷ್ಟೇ ಪರಿಣಾಮಕಾರಿಯಾಗಿದೆ, ಅದಕ್ಕಾಗಿ ಶಿವಕುಮಾರ್ ಅಥವಾ ಅವರ ತಂಡವನ್ನು ಯಾರೂ ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

'ಕಾವೇರಿ ವಿಚಾರದಲ್ಲಿ ಶಿವಕುಮಾರ್ ಹೆಚ್ಚು ಗಂಭೀರವಾಗಿ ಮತ್ತು ವಿವೇಚನೆಯಿಂದ ವರ್ತಿಸಬಹುದಿತ್ತು. ಈ ವರ್ಷ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದಾಗ ಅವರು ಎಚ್ಚೆತ್ತುಕೊಂಡು ನೀರು ಬಿಡದೇ ಇರಬಹುದಿತ್ತು ಎಂದು ಮತ್ತೋರ್ವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್  ಹೇಳಿದ್ದಾರೆ.

ಇದೇ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಇಲ್ಲಿ ಯಾರನ್ನಾದರೂ ದೂಷಿಸುವುದು ತಪ್ಪು. ಬಿಜೆಪಿಯಲ್ಲಿ 25 ಸಂಸದರು, ಐವರು ಸಚಿವರಿದ್ದಾರೆ ಅವರು ಏಕೆ ಸಹಾಯ ಮಾಡಿಲ್ಲ? ಕಾವೇರಿ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಸಮಯ ನೀಡಲಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ''ಸರಕಾರ ಈ ಪರಿಸ್ಥಿತಿ ಬರಲು ಬಿಡಬಾರದಿತ್ತು. ಅವರು ಸಮನ್ವಯ ಮಾರ್ಗವನ್ನು ತೆಗೆದುಕೊಳ್ಳಬೇಕಿತ್ತು. ವಿಶ್ಲೇಷಕರು ಕೂಡ ಸರ್ಕಾರವು ನಿರೂಪಣೆಗೆ ವಿರುದ್ಧವಾಗಿ ಹೋಗಲು ಅವಕಾಶ ನೀಡಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com