ಬಂದ್, ವಾರಾಂತ್ಯದಲ್ಲಿ ಸಾಲು ಸಾಲು ರಜೆ: ಐಟಿ ಕೇಂದ್ರ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ

ಮಹದೇವಪುರ ವಲಯದಲ್ಲಿ ನಿನ್ನೆ ಬುಧವಾರ ಸಂಜೆ ಸುರಿದ ಸಾಧಾರಣ ಮಳೆಯಿಂದಾಗಿ ಹೊರ ವರ್ತುಲ ರಸ್ತೆ (ORR) ಮತ್ತು ಆರ್ಟಿರಿಯಲ್ ರಿಂಗ್ ರಸ್ತೆಯಲ್ಲಿ (ARR) ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಮಹದೇವಪುರ ವಲಯದಲ್ಲಿ ಸಂಚಾರ ದಟ್ಟಣೆ
ಮಹದೇವಪುರ ವಲಯದಲ್ಲಿ ಸಂಚಾರ ದಟ್ಟಣೆ

ಬೆಂಗಳೂರು: ಮಹದೇವಪುರ ವಲಯದಲ್ಲಿ ನಿನ್ನೆ ಬುಧವಾರ ಸಂಜೆ ಸುರಿದ ಸಾಧಾರಣ ಮಳೆಯಿಂದಾಗಿ ಹೊರ ವರ್ತುಲ ರಸ್ತೆ (ORR) ಮತ್ತು ಆರ್ಟಿರಿಯಲ್ ರಿಂಗ್ ರಸ್ತೆಯಲ್ಲಿ (ARR) ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ವಾರಾಂತ್ಯದಲ್ಲಿ ದೀರ್ಘ ರಜೆ ಇರುವ ಕಾರಣ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಗಣೇಶ ವಿಸರ್ಜನೆ ಮತ್ತು ಜನ ಸಂಚಾರ ಹೆಚ್ಚಾಗಿ ಇರುವುದ ಇದಕ್ಕೆ ಮತ್ತಷ್ಟು ಕಾರಣವಾಗಿದೆ. 

ನಿನ್ನೆ ಸಾಯಂಕಾಲ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೀವ್ರ ಟ್ರಾಫಿಕ್ ದಟ್ಟಣೆ ಉಂಟಾಗಿದ್ದು, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA) ಸದಸ್ಯ ಕಂಪನಿಗಳಿಗೆ ತಮ್ಮ ಸಿಬ್ಬಂದಿಗೆ ಕಚೇರಿಯಿಂದ ಬೇಗ ಹೊರಡುವುದನ್ನು ತಪ್ಪಿಸಲು ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ಕಾಯುವಂತೆ ಸಲಹೆಯನ್ನು ನೀಡಿದೆ.

ಬೆಳ್ಳಂದೂರು ಮತ್ತು ಹೆಚ್ಎಎಲ್ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರೋಮಾ ರಸ್ತೆ, ಕಾಡುಬೀಸನಹಳ್ಳಿ ಮತ್ತು ಸಕ್ರಾ ಆಸ್ಪತ್ರೆ ಜಂಕ್ಷನ್‌ನಲ್ಲಿ ನೀರು ನಿಂತ ಸ್ಥಳಗಳನ್ನು ತೆರವುಗೊಳಿಸಿದರು. ನಿನ್ನೆ ಮಧ್ಯಾಹ್ನ ಸುಮಾರು 40 ನಿಮಿಷಗಳ ಕಾಲ ಮಳೆ ಸುರಿದಿದ್ದರಿಂದ ವಿವಿಧೆಡೆ ನೀರು ನಿಂತಿತ್ತು.

ಇಂದು ಮತ್ತು ನಾಳೆ ಈದ್ ಮಿಲಾದ್ ರಜೆಯ ಕಾರಣ ಸಂಜೆ ಗಣೇಶ ವಿಸರ್ಜನೆ ಮತ್ತು ದೀರ್ಘ ವಾರಾಂತ್ಯ ರಜೆ ಕಾರಣ ಜನಸಂದಣಿಯು ನಿಧಾನವಾಗಿತ್ತು. ಸಂಜೆ 4 ಗಂಟೆಯಿಂದ ಸಂಚಾರ ಸ್ಥಗಿತಗೊಂಡಿದ್ದು, ರಾತ್ರಿ 8 ಗಂಟೆಯ ವೇಳೆಗೆ ಸುಗಮವಾಗತೊಡಗಿತು ಎಂದು ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ತೂರು ರೈಸಿಂಗ್‌ನ ಜಗದೀಶ್ ರೆಡ್ಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪಣತ್ತೂರು-ಕ್ರೋಮಾ ರಸ್ತೆಯಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಿದ್ದಿದ್ದರೆ, ಮಳೆಗಾಲದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತಿತ್ತು. ಕ್ರೋಮಾ ರಸ್ತೆಯ ಬಳಿ ಅಂಡರ್‌ಪಾಸ್ ಇದೆ. ನಾವು ಇದನ್ನು 'ಕನಕನ ಕಿಂಡಿ' ಎಂದು ಕರೆಯುತ್ತೇವೆ ಮತ್ತು ಇಲ್ಲಿ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ನಿಧಾನವಾಗುತ್ತದೆ ಎಂದು ಹೇಳಿದರು. 

ಒಆರ್‌ಆರ್‌ಸಿಎಯ ಕಾರ್ಯಾಚರಣೆ ವ್ಯವಸ್ಥಾಪಕ ಕೃಷ್ಣ ಕುಮಾರ್ ಗೌಡ, ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅನುಮತಿಸಿದಾಗ ಮಂಗಳವಾರ ಬಂದ್ ಇದ್ದ ಕಾರಣ, ನಿನ್ನೆ ಅನೇಕರು ಆಫ್‌ಲೈನ್‌ನಲ್ಲಿ ಕೆಲಸ ಮಾಡಲು ಒಆರ್‌ಆರ್‌ನಲ್ಲಿ ತಮ್ಮ ಕಚೇರಿಗಳಿಗೆ ಬಂದಿದ್ದರು. “ಮಳೆ, ನೀರು ನಿಲ್ಲುವುದು, ಗಣೇಶ ವಿಸರ್ಜನೆಯಿಂದ ಜನಸಂದಣಿ, ನಗರದಿಂದ ಹೊರಗೆ ಪ್ರಯಾಣಿಸುವ ಜನರು ಮತ್ತು ಶುಕ್ರವಾರ ಕರ್ನಾಟಕ ಬಂದ್ - ಇವೆಲ್ಲವೂ ಇಂದು ORR ಮತ್ತು ARR ನಲ್ಲಿ ಭಾರೀ ದಟ್ಟಣೆಗೆ ಕಾರಣವಾಗಿವೆ. ಅನೇಕರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು, ಇದರ ಪರಿಣಾಮವಾಗಿ ಟ್ರಾಫಿಕ್ ದಟ್ಟಣೆಯ ಬಗ್ಗೆ ಇತರರಿಗೆ ಎಚ್ಚರಿಕೆ ನೀಡಲು ಟ್ವಿಟರ್‌ನಲ್ಲಿ ಎಚ್ಚರಿಕೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com