ಬೆಂಗಳೂರು: ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಜೋಡಿ ಬಂಧನ

ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಯುವಕ ಹಾಗೂ ಆತನ 18 ವರ್ಷದ ಪ್ರಿಯತಮೆಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಯುವಕ ಹಾಗೂ ಆತನ 18 ವರ್ಷದ ಪ್ರಿಯತಮೆಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಿಯಕರನ ಆಜ್ಞೆಯ ಮೇರೆಗೆ ಯುವತಿ ಮೊಪೆಡ್‌ಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಈ ಜೋಡಿ ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಕದ್ದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಎಂಡಿಎಂಎಯಂತಹ ಅತ್ಯಾಧುನಿಕ ಡ್ರಗ್ಸ್ ಗಳನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ಮೊಪೆಡ್ ಅನ್ನು ಎತ್ತುವ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ. ಯುವತಿ ತನ್ನ ಗುರುತನ್ನು ಮರೆಮಾಚಲು, ಮೊಪೆಡ್‌ಗಳನ್ನು ಕದಿಯುವಾಗ ಬುರ್ಖಾ ಧರಿಸುತ್ತಿದ್ದಳು. ಕಳ್ಳತನ ಮಾಡುವಾಗ ಯುವತಿಯ ಗೆಳೆಯ ದೂರದಲ್ಲಿ ನಿಂತು ಸಲಹೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಶ್ರೀರಾಂಪುರದ ಅಂಬೇಡ್ಕರ್‌ನಗರದ ವಿ ಮುರುಗನ್(25) ಎಂದು ಗುರುತಿಸಲಾಗಿದ್ದು, ಯುವತಿಯನ್ನು ಥಣಿಸಂದ್ರದ ಸಾರಾಯಿಪಾಳ್ಯದ ನಿವಾಸಿಯಾಗಿದ್ದಾರೆ. ಮತ್ತೋರ್ವ ಆರೋಪಿ ಯಶವಂತಪುರದ ಮತ್ತಿಕೆರೆ ನಿವಾಸಿ ಬಿ.ಮುರಳಿ(23)ಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆರೋಪಿ. ಮುರಳಿ ಈ ಜೋಡಿಗೆ ವಾಹನಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com