ವಿಧಾನಸಭೆ ಚುನಾವಣೆ: ಗದಗ ದಿನಗೂಲಿ ನೌಕರರಿಗೆ ಮೇ ಮೊದಲ ವಾರದವೆರೆಗೆ ಅಚ್ಛೇ ದಿನ್!

ಜಿಲ್ಲೆಯ ದಿನಗೂಲಿ ನೌಕರರಿಗೆ ವಿಧಾನಸಭೆ ಚುನಾವಣೆ "ಅಚ್ಛೇ ದಿನ್" ತಂದಿದೆ, ಸದ್ಯ ಈ ದಿನಗೂಲಿ ನೌಕರರು ಈಗ ಚುನಾವಣಗೆ ಸಂಬಂಧಿಸಿದ ಕೆಲಸಗಳಿಗಾಗಿ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ಜಿಲ್ಲೆಯ ದಿನಗೂಲಿ ನೌಕರರಿಗೆ ವಿಧಾನಸಭೆ ಚುನಾವಣೆ "ಅಚ್ಛೇ ದಿನ್" ತಂದಿದೆ, ಸದ್ಯ ಈ ದಿನಗೂಲಿ ನೌಕರರು ಈಗ ಚುನಾವಣಗೆ ಸಂಬಂಧಿಸಿದ ಕೆಲಸಗಳಿಗಾಗಿ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ದಿನಗೂಲಿ ನೌಕರರಿಗೆ ಬೆಳಗಿನ ಉಪಾಹಾರ, ಚಹಾ ಮತ್ತು ರಾತ್ರಿಯ ಊಟ ಪೂರೈಸಲಾಗುತ್ತಿದೆ. ದಿನಕ್ಕೆ ನಾಲ್ಕು ಗಂಟೆ ಪ್ರಚಾರ ಮಾಡಿದರೆ 400 ರೂ ನೀಡಲಾಗುತ್ತದೆ. ಬಿಸಿಲಿನ ತಾಪದ ಕಾರಣ ರಾಜಕೀಯ ಪಕ್ಷಗಳು ಬೆಳಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆ ಮಾತ್ರ ಪ್ರಚಾರ ನಡೆಸುತ್ತಿವೆ.  ರಾಜಕೀಯ ನಾಯಕರು ಈ ಜನರಿಗೆ  ಉಪಹಾರ ಮತ್ತು ತಂಪು ಪಾನೀಯಗಳನ್ನು ನೀಡುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಗದಗದಲ್ಲಿ  ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದು, ಕಾರ್ಮಿಕರು ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಆದ್ದರಿಂದ, ದಿನಗೂಲಿಗಳು ಮನೆ ಅಥವಾ ಖಾಸಗಿ ಪ್ರದೇಶಗಳಲ್ಲಿರುವ ಚುನಾವಣಾ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಎಲ್ಲೆಡೆ ಚುನಾವಣಾ ಪ್ರಚಾರ, ಮತದಾರರ ಪಟ್ಟಿ ವಿತರಣೆ, ಮತಗಟ್ಟೆಗೆ ಸಂಬಂಧಿಸಿದ ಕೆಲಸಗಳಂತಹ ಕಾರ್ಯಗಳು ಈಗ ನಡೆಯುತ್ತಿದ್ದು, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕೆಲಸ ಸಿಗುತ್ತಿದೆ.

ಕಾರ್ಮಿಕರಿಗೆ ಆಹಾರ ಮತ್ತು ಪಾನೀಯಗಳ ಜೊತೆಗೆ ಅದೇ ದಿನ ವೇತನ ನೀಡಲಾಗುತ್ತಿದೆ. ಮೇ ಮೊದಲ ವಾರದವರೆಗೆ ರಾತ್ರಿ ಪಾರ್ಟಿ ಕೂಡ ಸಿಗಲಿದೆ. ವಲಸೆ ಕಾರ್ಮಿಕರನ್ನು ಕರೆ ತರಲು ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡಲು ಕೆಲವು ಕಾರ್ಮಿಕರಿಗೆ ಕಾರುಗಳನ್ನು ಒದಗಿಸಲಾಗಿದೆ.

ಚುನಾವಣೆ ಸಮಯವಾದ್ದರಿಂದ ಈಗ ಊಟ-ತಿಂಡಿ  ಉತ್ತಮ ವೇತನ ನೀಡಲಾಗುತ್ತಿದೆ, ಮಹಿಳೆಯರಿಗೆ ಕರಪತ್ರ ಹಂಚಲು ದಿನಕ್ಕೆ 300 ರೂ. ಕೊಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೋದರೆ ಬೆಳಗ್ಗಿನಿಂದ ಸಂಜೆ ವರಗೆ ಕೆಲಸ ಮಾಡಿ 300-400 ರೂ. ಸಂಪಾದಿಸುತ್ತಿದ್ದೆವು. ಆದರೆ ಈ ಸಂದರ್ಭದಲ್ಲಿ, ನಮ್ಮ ಸಮಯವು ಬೆಳಿಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 8 ರವರೆಗೆ ಇರುತ್ತದೆ. ಮೇ ಮೊದಲ ವಾರದವರೆಗೆ ಇದು ನಮಗೆ ಅಚ್ಚೇ ದಿನ್ ಎಂದು ಮುಳಗುಂದದ ದಿನಗೂಲಿ ನೌಕರ ಯಲ್ಲಪ್ಪ ರಾಠೋಡ್ ಹೇಳಿದ್ದಾರೆ.

ಈಗ ಕೆಲಸವಿಲ್ಲ ಎಂದು ಹೊಲಕ್ಕೆ ಹೋಗುವುದನ್ನು ಬಿಟ್ಟಿದ್ದೇವೆ,  ರಾಜಕೀಯ ಮುಖಂಡರು ಪಕ್ಷದವರಿಗೆ ಹಣ ಖರ್ಚು ಮಾಡುವ ಕಾಲ ಇದಾಗಿದ್ದು, ಕೇವಲ ನಾಲ್ಕು ಗಂಟೆ ಕೆಲಸಕ್ಕೆ ದಿನಗೂಲಿ ಸಿಗುತ್ತಿದೆ. ತಂಪು ಪಾನೀಯಗಳು, ಉಪಹಾರ ಮತ್ತು ರಾತ್ರಿಯ ಊಟದ ಜೊತೆಗೆ ಪ್ರಚಾರ ಮಾಡುವಾಗ  ಜ್ಯೂಸ್, ಮಜ್ಜಿಗೆ, ಐಸ್ ಕ್ರೀಮ್ ಕೂಡ ನೀಡುತ್ತಿದ್ದಾರೆ ಎಂದು  ಗದಗದ ರೈತ ಮರಿಯಪ್ಪ ಹೆಬಸೂರ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com