ದಕ್ಷಿಣ ಕನ್ನಡ: 16 ವರ್ಷದ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ; ಐವರ ಪೈಕಿ ನಾಲ್ವರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ದಲಿತ ಬಾಲಕಿಯ ಮೇಲೆ ಐವರು ಆರೋಪಿಗಳು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
Published: 01st August 2023 07:14 PM | Last Updated: 01st August 2023 07:34 PM | A+A A-

ಸಾಂದರ್ಭಿಕ ಚಿತ್ರ
ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ದಲಿತ ಬಾಲಕಿಯ ಮೇಲೆ ಐವರು ಆರೋಪಿಗಳು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಿ ಬಿ ರಿಶ್ಯಂತ್ ಹೇಳಿದ್ದಾರೆ.
ಇವರಲ್ಲಿ ನಾಲ್ವರು ವಿಟ್ಲ ನಿವಾಸಿಗಳು ಮತ್ತು ಒಬ್ಬರು ಕಾಸರಗೋಡಿನವರಾಗಿದ್ದು, ಅವರ ಮನೆಗಳು ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿವೆ ಎಂದು ರಿಷ್ಯಂತ್ ಹೇಳಿದರು.
ಮೂಲಗಳ ಪ್ರಕಾರ, ಪೊಲೀಸರು ಐದು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಸುಕುಮಾರ್ ಬೆಲ್ಚಡ (28), ಬಾಯಾರ ಗ್ರಾಮದ ಕೋಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಡ (30, ಮೂಡುಬಿದಿರೆ ಮೂಲದ ಬೇರಿಪದವು ನಿವಾಸಿ ಅಕ್ಷಯ್ ದೇವಾಡಿಗ (24) ಮತ್ತು ಜಯಪ್ರಕಾಶ್ ಬಂಧಿತರು.
ಇದನ್ನೂ ಓದಿ: ಟೆಲಿಗ್ರಾಂ ಮೂಲಕ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ದಂಧೆ; ಮತಾಂತರಗೊಳ್ಳುವಂತೆ ಬೆದರಿಸುತ್ತಿದ್ದ ಗ್ಯಾಂಗ್ ಬಂಧನ!
ಅಕ್ಷಯ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಅಣ್ಣನೊಂದಿಗೆ ಬೇರಿಪದವುನಲ್ಲಿ ನೆಲೆಸಿದ್ದಾನೆ. ಕಮಲಾಕ್ಷ ಮೇಸ್ತ್ರಿ, ಮತ್ತು ಸುಕುಮಾರ್ ವಾಹನ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಂಧನಕ್ಕೊಳಗಾದ ಜಯಪ್ರಕಾಶ್ ಮತ್ತು ಸುಕುಮಾರ್ ಬಜರಂಗದಳದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯ ದೂರಿನ ಪ್ರಕಾರ, ಜುಲೈ 28ರ ಶುಕ್ರವಾರದಂದು ಕೊನೆಯದಾಗಿ ವಿವಿಧ ಸ್ಥಳಗಳಲ್ಲಿ ಅನೇಕ ಬಾರಿ ಅತ್ಯಾಚಾರ ನಡೆಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.