ಸೋಮವಾರದೊಳಗೆ ಇನ್ಸ್​ಪೆಕ್ಟರ್​ಗಳ ವರ್ಗಾವಣೆ: ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ

ಇನ್‌ಸ್ಪೆಕ್ಟರ್ ವರ್ಗಾವಣೆ ತಡೆ ಹಿಡಿದಿರುವ ವಿಚಾರ ಕುರಿತು ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಸೋವಾರವಾರದಿಂದ ವರ್ಗಾವಣೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಇನ್‌ಸ್ಪೆಕ್ಟರ್ ವರ್ಗಾವಣೆ ತಡೆ ಹಿಡಿದಿರುವ ವಿಚಾರ ಕುರಿತು ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದು, ಸೋವಾರವಾರದಿಂದ ವರ್ಗಾವಣೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕವಾಗಿ 250 ಜನರನ್ನು ವರ್ಗಾವಣೆ ಮಾಡಿದ್ದೆವು. ಬಹುತೇಕ ಎಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆ. ಕೆಲವು ಕಡೆ ಆಗಿಲ್ಲ. ಅದನ್ನ ಸರಿಪಡಿಸಿಕೊಂಡು ಮಾಡುತ್ತೇವೆಂದು ಹೇಳಿದರು.

ಎಲ್ಲವನ್ನೂ ಕುಮಾರಸ್ವಾಮಿ ಕ್ರಿಟಿಸೈಸ್ ಮಾಡೋದಲ್ಲ. ಪಾಸಿಟಿವ್ ಸಲಹೆ ಕೊಡುವುದಾದರೆ ಕೊಡಲಿ, ಎಲ್ಲದರಲ್ಲೂ ಆರೋಪ ಮಾಡುವುದು ಸರಿಯಲ್ಲ. ಸೋಮವಾರದೊಳಗೆ ಟ್ರಾನ್ಸ್‌ಫರ್ ಇಶ್ಯೂ ಮಾಡ್ತೀವಿ. ವರ್ಗಾವಣೆ ತಡೆ ಹಿಡಿದಿರೋದು ಕ್ಲಿಯರ್ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ಪೊಲೀಸ್ ಸಭೆಯಲ್ಲಿ ವೈಎಸ್​​​ಟಿ ಭಾಗಿಯಾಗಿದ್ದರು ಎಂಬ ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಉತ್ತರಿಸಿ, ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com