ಬೆಂಗಳೂರು: 30 ಲಿಫ್ಟ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಅಪಾರ್ಟ್ಮೆಂಟ್ ಗೆ ನೋಟಿಸ್
ಇನ್ಸ್ಪೆಕ್ಟರೇಟ್ ನಿಂದ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಕನಕಪುರ ಮುಖ್ಯರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರದ ಅಪಾರ್ಟ್‌ಮೆಂಟ್ ಸಮುಚ್ಚಯದ ಎರಡು ಟವರ್‌ಗಳಲ್ಲಿರುವ ಎಲ್ಲಾ ಲಿಫ್ಟ್‌ಗಳ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ...
Published: 17th August 2023 06:00 PM | Last Updated: 17th August 2023 07:30 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಇನ್ಸ್ಪೆಕ್ಟರೇಟ್ ನಿಂದ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಕನಕಪುರ ಮುಖ್ಯರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರದ ಅಪಾರ್ಟ್‌ಮೆಂಟ್ ಸಮುಚ್ಚಯದ ಎರಡು ಟವರ್‌ಗಳಲ್ಲಿರುವ ಎಲ್ಲಾ ಲಿಫ್ಟ್‌ಗಳ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್ ಇತ್ತೀಚೆಗೆ ಅಪಾರ್ಟ್‌ಮೆಂಟ್‌ನ ಬಿಲ್ಡರ್ ಮತ್ತು ಭೂಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ನಂತರ, ಮನೆ ಖರೀದಿದಾರರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಪತ್ರ ಬರೆದಿದ್ದು, ಇಂತಹ ಅನಧಿಕೃತ ಕಾರ್ಯಾಚರಣೆಯು ಸಾವಿರಾರು ನಿವಾಸಿಗಳ ಜೀವನ ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದ್ದಾರೆ. ಅನುಮತಿ ಪಡೆಯದಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹ 2022 ರ ಡಿಸೆಂಬರ್‌ನಲ್ಲಿ ಯೋಜನೆಗೆ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು: ಅಪಾರ್ಟ್ಮೆಂಟ್ ಪ್ರಾಜೆಕ್ಟ್ ಪೂರ್ಣಗೊಳಿಸಲು ಮನೆ ಖರೀದಿದಾರರಿಗೆ ರೇರಾ ಕೋರ್ಟ್ ಅಧಿಕಾರ!
ಆಗಸ್ಟ್ 10 ರಂದು ಇನ್ಸ್‌ಪೆಕ್ಟರೇಟ್ ಹೊರಡಿಸಿದ ಆದೇಶದ ಪ್ರತಿ ಮತ್ತು ಆಗಸ್ಟ್ 14 ರಂದು ಮನೆಯ ಮಾಲೀಕರು ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಈ ಅಪಾರ್ಟ್‌ಮೆಂಟ್ ಸಮುಚ್ಚಯವು 2,000 ಫ್ಲಾಟ್‌ಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಕನಿಷ್ಠ ಅರ್ಧದಷ್ಟು ಜನರು ವಾಸಿಸುತ್ತಿದ್ದಾರೆ.
27 ಮಹಡಿಗಳು ಮತ್ತು ಮೂರು ನೆಲಮಾಳಿಗೆ ಹೊಂದಿರುವ ಈ ಅಪಾರ್ಟ್ ಮೆಂಟ್ ನಲ್ಲಿ ಕನಿಷ್ಠ 4,000 ನಿವಾಸಿಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದು, ಮೂವತ್ತು ಲಿಫ್ಟ್‌ಗಳನ್ನು ಬಳಸುತ್ತಿದ್ದಾರೆ.
ಇನ್ಸ್ಪೆಕ್ಟರೇಟ್, ಬಿಲ್ಡರ್ ಮತ್ತು ಭೂಮಿಯ ಮಾಲೀಕರಿಗೆ ನೋಟಿಸ್ ನೀಡಿದ್ದು, ಎರಡು ಟವರ್‌ಗಳಲ್ಲಿ 30 OTIS ಲಿಫ್ಟ್‌ಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ನವ ಕರ್ನಾಟಕ ಲಿಫ್ಟ್‌ಗಳು, ಎಸ್ಕಲೇಟರ್‌ಗಳು ಮತ್ತು ಪ್ಯಾಸೆಂಜರ್ ಕನ್ವೇಯರ್ ನಿಯಮಗಳು 2015ರ ಪ್ರಕಾರ ಇಲಾಖೆಯಿಂದ ಲಿಫ್ಟ್ ಪರವಾನಗಿ ಪಡೆಯಬೇಕು. ಆದ್ದರಿಂದ, ಅಗತ್ಯ ಅನುಮೋದನೆಗಳನ್ನು ಪಡೆಯುವವರೆಗೆ ಲಿಫ್ಟ್ ಅನ್ನು ಸ್ವಿಚ್ ಆಫ್ ಮಾಡಲು ಈ ಮೂಲಕ ಸೂಚಿಸಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.