ಕಾವೇರಿ ತೀರದಲ್ಲಿ ಆರದ ಕಿಚ್ಚು: ನೂರಾರು ವರ್ಷಗಳ ಹಿಂದೆಯೇ ಆರಂಭವಾದ ಜಲ ವಿವಾದದ ಇತಿಹಾಸ!

ನೂರಾರು ವರ್ಷಗಳ ಹಿಂದೆಯೇ ಕಾವೇರಿ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ.
ಕಾವೇರಿ ಹೋರಾಟ( ಸಂಗ್ರಹ ಚಿತ್ರ)
ಕಾವೇರಿ ಹೋರಾಟ( ಸಂಗ್ರಹ ಚಿತ್ರ)

ಮೈಸೂರು: ನೂರಾರು ವರ್ಷಗಳ ಹಿಂದೆಯೇ ಕಾವೇರಿ ಹೋರಾಟದ ಕಿಚ್ಚು ಆರಂಭವಾಗಿದೆ. ಅಂದಿನಿಂದಲೂ ತಮಿಳುನಾಡು ನಮ್ಮ ನೀರು, ಯೋಜನೆಗಳಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಇಲ್ಲಿದೆ ಅದರ ಸಂಕ್ಷಿಪ್ತ ಇತಿಹಾಸ.

ಕಾವೇರಿ ಹಾಗೂ ಅದರ ಉಪ ನದಿಗಳ ನೀರು ಹಂಚಿಕೆಯ ಹೋರಾಟದಲ್ಲಿ ಶತ, ಶತಮಾನಗಳೇ ಕಳೆದು ಹೋಗಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾದಾಗಲೆಲ್ಲ ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆ ರಾಜ್ಯವನ್ನು ಕಾಡುತ್ತಿದೆ.

1892: ಮದ್ರಾಸ್ ಪ್ರೆಸಿಡೆನ್ಸಿ (ಬ್ರಿಟಿಷರ ಆಳ್ವಿಕೆಯಲ್ಲಿ) ಮತ್ತು ಮೈಸೂರು ಸಂಸ್ಥಾನದ ನಡುವೆ ಜಲ ವಿವಾದವು ಪ್ರಾರಂಭ; ನೀರಾವರಿ ವ್ಯವಸ್ಥೆಯನ್ನು ನಿರ್ಮಿಸುವ ಮೈಸೂರು ಆಡಳಿತದ ಪ್ರಸ್ತಾವನೆಗೆ ಮದ್ರಾಸ್ ವಿರೋಧ.

1913-1916: ಜಲಾಶಯ ನಿರ್ಮಾಣಕ್ಕೆ ಅನುಮತಿ ಕೋರಿ ಮೈಸೂರು ಸರ್ಕಾರ ಮದ್ರಾಸ್ ಪ್ರೆಸಿಡೆನ್ಸಿಗೆ ಪತ್ರ ಬರೆದಿದ್ದು ವಿವಾದಕ್ಕೆ ಕಾರಣ. 11 ಟಿಎಂಸಿವರೆಗೆ ಅಣೆಕಟ್ಟು ನಿರ್ಮಿಸಲು ಮೈಸೂರು ಅನುಮತಿ.

1924: ಬಗೆಹರಿದ ಸಮಸ್ಯೆ, ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಲು  ಮದ್ರಾಸ್ ಮತ್ತು ಮೈಸೂರು ಸಂಸ್ಥಾನದ ನಡುವ ಒಪ್ಪಂದ.

1929: ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವ 1924ರ ಒಪ್ಪಂದವನ್ನು ಸ್ಪಷ್ಟಪಡಿಸಲು ಮತ್ತು ಮದ್ರಾಸ್‌ಗೆ ಎಷ್ಟು ನೀರು ಬಿಡಬೇಕು ಎಂಬ ಸಂಬಂಧ ನಿಖರವಾದ ಒಪ್ಪಂದ

1931: ಕೃಷ್ಣರಾಜ ಸಾಗರ ಅಣೆಕಟ್ಟು ಪೂರ್ಣ

1934: ಮೆಟ್ಟೂರು ಅಣೆಕಟ್ಟು ಕಾರ್ಯ ಪೂರ್ಣ

1974: ಮದ್ರಾಸ್ ಪ್ರೆಸಿಡೆನ್ಸಿ (ಈಗಿನ ತಮಿಳುನಾಡು) ಮತ್ತು ಮೈಸೂರು ರಾಜ್ಯ (ಈಗಿನ ಕರ್ನಾಟಕ) ನಡುವೆ 50 ವರ್ಷಗಳ ಒಪ್ಪಂದ ಸ್ಥಗಿತ.

1986: ಕಾವೇರಿ ನದಿ ನೀರು ಹಂಚಿಕೆಗೆ ನ್ಯಾಯಾಧಿಕರಣ ಸ್ಥಾಪಿಸುವಂತೆ  ಕೇಂದ್ರಕ್ಕೆ ತಮಿಳುನಾಡು ಮನವಿ.

1990: ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ನೇತೃತ್ವದ ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣ ಸ್ಥಾಪನೆ.

ಜೂನ್ 1991: ಪ್ರತಿ ವರ್ಷ ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯೂಡಿಟಿ ಮಧ್ಯಂತರ ತೀರ್ಪು .  ನೀರಾವರಿ ಪ್ರದೇಶವನ್ನು ಅಸ್ತಿತ್ವದಲ್ಲಿರುವ 11,20,000 ಎಕರೆಗಳಿಂದ ಹೆಚ್ಚಿಸದಂತೆ ಕರ್ನಾಟಕಕ್ಕೆ ನಿರ್ದೇಶನ, ತೀರ್ಪಿನಿಂದ ಎರಡು ರಾಜ್ಯಗಳಲ್ಲಿ ವ್ಯಾಪಕ ಅಸಮಾಧಾನ ಮತ್ತು ಹಿಂಸಾಚಾರ.

ಡಿಸೆಂಬರ್‌ 1991: ಕರ್ನಾಟಕ ಹೊರಡಿಸಿದ ಸುಗ್ರೀವಾಜ್ಞೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನೀರು ಬಿಡಲು ಆದೇಶ

1998: ಕಾವೇರಿ ನದಿ ಪ್ರಾಧಿಕಾರ (CRA)  ರಚನೆ

2002: ತಮಿಳುನಾಡಿಗೆ ಪ್ರತಿದಿನ 9,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಆರ್‌ಎ ನಿರ್ದೇಶನ

2007: ನ್ಯಾಯಮಂಡಳಿ ಅಂತಿಮ ತೀರ್ಪು. ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆ. ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಲು ಸೂಚನೆ.

ಮಾರ್ಚ್ 2013: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಿರ್ದೇಶನ ಕೋರಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ

ಮೇ 2013: CWDT ಯ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಅರ್ಜಿ.

ಆಗಸ್ಟ್ 2016: ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ಕೋರಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ.

ಸೆಪ್ಟೆಂಬರ್ 2016: ಸೆ.15ರವರೆಗೆ ದಿನಕ್ಕೆ 15,000 ಕ್ಯೂಸೆಕ್‌ಗಳನ್ನು ಬಿಡುವಂತೆ ಕರ್ನಾಟಕಕ್ಕೆ ಎಸ್‌ಸಿ ನಿರ್ದೇಶನ, ಕರ್ನಾಟಕದಿಂದ 10,000 ಕ್ಯೂಸೆಕ್ ನೀರು ಬಿಡುಗಡೆ

ಸೆಪ್ಟೆಂಬರ್ 2017: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

2018 ಫೆಬ್ರವರಿ 16 ರಂದು, ಸುಪ್ರೀಂ ಕೋರ್ಟ್ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆ ಪ್ರಮಾಣ ಕಡಿಮೆ ಮಾಡಿತು. ಬಿಳಿಗುಂಡ್ಲು ಅಣೆಕಟ್ಟಿನಿಂದ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ . ಕರ್ನಾಟಕವು ಈಗ ವರ್ಷಕ್ಕೆ 14.75 ಟಿಎಂಸಿ ಅಡಿ ಬಿಡುವಂತೆ ತೀರ್ಪು ಸ್ಪಷ್ಟಪಡಿಸುತ್ತದೆ. ತಮಿಳುನಾಡಿಗೆ 404.25 ಟಿಎಂಸಿ ಅಡಿ ಸಿಗುತ್ತದೆ, ಇದು 2007ರಲ್ಲಿ ನ್ಯಾಯಮಂಡಳಿ ಮಂಜೂರು ಮಾಡಿದ್ದಕ್ಕಿಂತ 14.75 ಟಿಎಂಸಿ ಅಡಿ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com