ಪೂರೈಕೆ ಹೆಚ್ಚಳ: ರಾಜ್ಯದಲ್ಲಿ ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ, ಕೆಜಿ 20 ರೂ.ಗೆ ಮಾರಾಟ
ಕೆಲವು ವಾರಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೇಟೊ ಬೆಲೆ ಇದೀಗ ತೀವ್ರ ಕುಸಿತ ಕಂಡಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಟೊಮೇಟೊ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಕೆಜಿ ಟೊಮೇಟೊ 20 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Published: 28th August 2023 01:38 PM | Last Updated: 28th August 2023 02:06 PM | A+A A-

ಟೊಮೆಟೋ
ಬೆಂಗಳೂರು: ಕೆಲವು ವಾರಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೇಟೊ ಬೆಲೆ ಇದೀಗ ತೀವ್ರ ಕುಸಿತ ಕಂಡಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಟೊಮೇಟೊ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಕೆಜಿ ಟೊಮೇಟೊ 20 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮೈಸೂರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಯಾರ್ಡ್‌ನಲ್ಲಿ ಭಾನುವಾರ ಕೆಜಿ ಟೊಮೇಟೊ ಬೆಲೆ 14 ರೂ.ಗೆ ಇಳಿದಿದೆ.
ಪೂರೈಕೆಯಲ್ಲಿ ಸುಧಾರಣೆ ಕಂಡಿದ್ದರಿಂದ ಕಳೆದ ವಾರ ಟೊಮೇಟೊ ಬೆಲೆ ಕೆಜಿಗೆ 18 ರಿಂದ 20 ರೂ. ಇತ್ತು ಎಂದು ಮೈಸೂರು ಎಪಿಎಂಸಿ ಕಾರ್ಯದರ್ಶಿ ಎಂ.ಆರ್. ಕುಮಾರಸ್ವಾಮಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸರಕು ಪೂರೈಕೆಯು ಕಳೆದ ತಿಂಗಳಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಸುಧಾರಿಸಿದೆ. ಹೀಗಾಗಿ, ಟೊಮೇಟೊ ಬೆಲೆಯಲ್ಲಿನ ತೀವ್ರ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆ ಹಾನಿ; ತಮಿಳುನಾಡಿನಲ್ಲಿ ಕೆಜಿ ಟೊಮೇಟೊಗೆ 200 ರೂ.!
ಕಳೆದ ತಿಂಗಳು ಮೈಸೂರು ಎಪಿಎಂಸಿಯಲ್ಲಿ ಸಗಟು ದರದಲ್ಲಿ ಕೆಜಿ ಟೊಮೇಟೊ 140 ರೂ.ಗೆ ಮಾರಾಟವಾಗಿತ್ತು. ರಾಜ್ಯದಲ್ಲಿ ಕೆಜಿ ಟೊಮೇಟೊ ಇದೀಗ 30 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.